ಬ್ರೇಕಿಂಗ್ ನ್ಯೂಸ್
05-11-20 11:09 am Mangalore Correspondent ಕರಾವಳಿ
ಉಳ್ಳಾಲ, ನವೆಂಬರ್ 05: ಶಿರಾ ಮತ್ತು ಆರ್.ಆರ್ ನಗರ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯೇ ಜಯಭೇರಿ ಗಳಿಸೋದೆಂದು ವಿರೋಧ ಪಕ್ಷದವರಿಗೆ ಅರಿವಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಬಿಜೆಪಿ ಗೆಲ್ಲದ ಶಿರಾ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಠ 25,000 ಮತಗಳ ಅಂತರದಲ್ಲಿ ಜಯ ಗಳಿಸಲಿದ್ದೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಬಂದಿರುವ ವಿಜಯೇಂದ್ರ, ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಮಕ್ಕಳೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಆಶ್ರಮದ ಗೋವುಗಳಿಗೆ ಗೋಗ್ರಾಸ ಅರ್ಪಿಸಿ, ಆಶ್ರಮ ನಿವಾಸಿ ಮಕ್ಕಳಿಗೆ ಹುಟ್ಟುಹಬ್ಬದ ಉಡುಗೊರೆ ನೀಡಿದರು. ಬಾಲಸಂರಕ್ಷಣಾ ಕೇಂದ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವ್ ಹ್ಯಾಗ್ ಬದಕಬೇಕೆಂಬುದನ್ನು ನಮಗೆ ಯಾರೂ ಕಲಿಸಬೇಕಿಲ್ಲ. ಅದು ನಮ್ಮ ಹಕ್ಕು. ಆದರೆ ಇನ್ನೊಬ್ಬರಿಗೋಸ್ಕರ ಬದುಕೋದೇ ಶ್ರೇಷ್ಠ ಅನ್ನೋದನ್ನ ಬಾಲಸಂರಕ್ಷಣಾ ಕೇಂದ್ರದ ಸಂಚಾಲಕರಾದ ಅನಂತಕೃಷ್ಣರು ಕಲಿಸಿ ಕೊಟ್ಟಿದ್ದಾರೆ. ಅವರ ಈ ಸೇವೆಯು ನಿಜಕ್ಕೂ ಗಣನೀಯ. ಎಂತಹ ಸಂಕಷ್ಟ, ಆರ್ಥಿಕ ಅಡಚಣೆಯಲ್ಲೂ ಅವರು ತಮ್ಮ ಸೇವೆಯನ್ನು ಎಂದಿಗೂ ನಿಲ್ಲಿಸದೆ ಮುಂದುವರೆಸುತ್ತಾ ಬಂದಿರುವುದನ್ನ ನಾನು ಕೇಳಿದ್ದೇನೆ. ಹುಟ್ಟುಹಬ್ಬ ಆಚರಿಸುವ ಯೋಚನೆ ಇರಲಿಲ್ಲ. ಆದರೆ ಇಲ್ಲಿನ ಮುಖಂಡರ ಆಶಯದಂತೆ ಇಲ್ಲಿ ಹುಟ್ಟುಹಬ್ಬ ಆಚರಿಸಿದ್ದು ನನಗೂ ಬಹಳ ಸಂತಸವಾಗಿದೆ.
ರಾಜ್ಯಾದ್ಯಂತ ನಾನು ತಿರುಗುವಾಗ ರಾಜ್ಯದ ಮುಖ್ಯಮಂತ್ರಿಗಳ ಮಗನೆನ್ನದೆ, ಯಡಿಯೂರಪ್ಪರ ಮಗ ಬಂದಿದ್ದಾರೆ ಎಂದು ಗುರುತಿಸುತ್ತಿರುವುದು ಸಂತಸ ತರುತ್ತಿದೆ ಎಂದರು.
ಬಾಲಸಂರಕ್ಷಣಾ ಕೇಂದ್ರದ ಸಂಚಾಲಕರಾದ ಡಾ.ಪಿ.ಅನಂತಕೃಷ್ಣ ಭಟ್ ಮಾತನಾಡಿ ಕರ್ನಾಟಕ, ಅರುಣಾಚಲ, ಪಶ್ಚಿಮ ಬಂಗಾಳ ಹೀಗೆ ದೇಶದ ಅನೇಕ ಕಡೆಯ ಮಕ್ಕಳು ಇಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಈ ಮೊದಲು ಯಡಿಯೂರಪ್ಪ ಅವರೇ ಇಲ್ಲಿಗೆ ಬಂದಿದ್ದರು. ಅವರ ಪುತ್ರರಾದ ವಿಜಯೇಂದ್ರ ಇವತ್ತು ಇಲ್ಲಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು ಅವರಿಗೆ ಉಜ್ವಲ ಭವಿಷ್ಯ ಸಿಕ್ಕಲಿ ಎಂದು ಹಾರೈಸಿದರು.
We shall create history in breaking the records of Sira and R R Nagar elections stated B Y Vijayendra in Ullal during his birthday celebrations in Mangalore.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm