ಬ್ರೇಕಿಂಗ್ ನ್ಯೂಸ್
04-11-20 11:20 pm Headline Karnataka News Network ಕರಾವಳಿ
ಮಂಗಳೂರು, ನವೆಂಬರ್ 4: ಉಪ ಚುನಾವಣೆ ಫಲಿತಾಂಶ ಬಂದ ಕೂಡಲೇ ಸಿಎಂ ಬದಲಾವಣೆಯಯಾಗತ್ತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರು ಸಂಸದ ಪ್ರತಾಪಸಿಂಹ ಗರಂ ಆಗಿದ್ದಾರೆ.
ಬಿಜೆಪಿ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ಪ್ರತಾಪಸಿಂಹ ಸುದ್ದಿಗಾರರ ಜೊತೆ ಮಾತನಾಡುತ್ತಾ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಸಿದ್ದರಾಮಯ್ಯರಿಗೆ ದೆಹಲಿಯ ಬಿಜೆಪಿ ಮೂಲದ ಮಾಹಿತಿ ಬಂದಿದೆಯಂತೆ.. ದೆಹಲಿಯಿಂದ ಮಾಹಿತಿ ಬಂದಿರಬೇಕಿದ್ದರೆ ಇವರು ದೆಹಲಿ ಬಿಜೆಪಿ ನಾಯಕರ ಸ್ನೇಹ ಇಟ್ಟುಕೊಂಡಿರಬೇಕು. ಸಿದ್ದರಾಮಯ್ಯ ಬಿಜೆಪಿ ನಾಯಕರ ಸ್ನೇಹ ಇಟ್ಟುಕೊಂಡಿರುವುದು ಸ್ಪಷ್ಟವಾಗುತ್ತಿದೆ. ಇದರಿಂದ ಮುಂದೆ ಸಿದ್ದರಾಮಯ್ಯನೇ ಬಿಜೆಪಿ ಸೇರಲಿದ್ದಾರೆಯೇ ಎಂಬ ಗುಮಾನಿ ಬರುತ್ತಿದೆ ಎಂದು ಕಟಕಿಯಾಡಿದ್ದಾರೆ.

ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಆದವರು ಸಿಎಂ ಆಗುವುದು ಸಾಮಾನ್ಯ ನಿಯಮ. ಎಸ್ಸೆಂ ಕೃಷ್ಣ ಕಾಲದಿಂದಲೂ ಇದೇ ನಿಯಮ ನಡೆದುಕೊಂಡು ಬಂದಿದೆ. ಪರಮೇಶ್ವರ್ ಕಾಲದಲ್ಲಿ ಅವರು ಕೊರಟಗೆರೆಯಲ್ಲಿ ಸೋತಿದ್ದರಿಂದ ಸಿಎಂ ಅವಕಾಶ ತಪ್ಪಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದರು. ಈಗ ಡಿಕೆಶಿ ಅಧ್ಯಕ್ಷರಾಗಿದ್ದು ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಅವರೇ ಸಿಎಂ ಆಗ್ತಾರೆ. ಆದ್ರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ತರಾತುರಿಯಲ್ಲಿದ್ದಾರೆ. ಇದಕ್ಕಾಗಿ ದೆಹಲಿ ಮಟ್ಟದ ಬಿಜೆಪಿ ನಾಯಕರ ಸಖ್ಯ ಬೆಳೆಸಿಕೊಂಡಿದ್ದಿರಬೇಕು ಎಂದು ವ್ಯಂಗ್ಯದ ಮಾತಿನಿಂದ ಚುಚ್ಚಿದ್ದಾರೆ.
ಲವ್ ಜಿಹಾದ್ ವಿರುದ್ಧ ಕಾನೂನು ಬರಬೇಕು
ಒಂದು ದಶಕದಿಂದ ಲವ್ ಜಿಹಾದ್ ವಿಚಾರ ಕೇಳಿಬರುತ್ತಿದೆ. ಆದರೆ, ಪ್ರೀತಿ, ಪ್ರೇಮದ ಹೆಸರಲ್ಲಿ ಮುಸ್ಲಿಮರು ಮೋಸ ಮಾಡ್ತಾರೆ ಅಂದ್ರೆ ಯಾರು ಕೂಡ ನಂಬುತ್ತಿರಲಿಲ್ಲ. ಈಗ ಕೋರ್ಟ್ ಸ್ವತಃ ಹೇಳಿದ್ದು ವಿವಾಹಕ್ಕಾಗಿ ಮತಾಂತರ ಅಗತ್ಯವಿಲ್ಲ ಎಂದು ಹೇಳುವ ಮೂಲಕ ದೇಶದಲ್ಲಿ ಲವ್ ಜಿಹಾದ್ ಇರುವುದನ್ನು ಹೇಳಿದೆ. ಯುಪಿಯಲ್ಲಿ ಮತಾಂತರ, ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರಲು ಯೋಗಿ ಸರಕಾರ ಮುಂದಾಗಿದೆ. ಪ್ರೀತಿಸುವಾಗ ಇರದ ಧರ್ಮದ ಅಡ್ಡಿ ವಿವಾಹಕ್ಕೆ ಯಾಕೆ ಬರಬೇಕೆಂಬುದು ಪ್ರಶ್ನೆ. ಹೀಗಾಗಿ ಇದರ ಹಿಂದೆ ಧರ್ಮಾಂಧತೆ ಇರುವುದು ಸ್ಪಷ್ಟವಾಗಿದೆ. ಇದನ್ನು ಹತ್ತಿಕ್ಕಲು ದೇಶದ ಎಲ್ಲಾ ರಾಜ್ಯಗಳಲ್ಲಿ ಕಠಿಣ ಕಾನೂನು ಬರಬೇಕು ಎಂದು ಸಂಸದ ಪ್ರತಾಪಸಿಂಹ ಆಗ್ರಹಿಸಿದ್ದಾರೆ.
Mysore MP Prathap Simha Nayak lashed out at Congress leader Siddaramaiah in Mangalore over saying R R Nagar Elections will result in New CM to Karnataka.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am