ಬ್ರೇಕಿಂಗ್ ನ್ಯೂಸ್
25-07-23 12:41 pm Mangalore Correspondent ಕರಾವಳಿ
ಉಳ್ಳಾಲ, ಜು.25: ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿದ್ದು ತಮ್ಮದೇ ಜಿಲ್ಲೆಯ ಶಾಸಕರನ್ನ ಸದನದಿಂದ ಹೊರ ಹಾಕಿ ಸೇಡಿನ ರಾಜಕಾರಣ ನಡೆಸುತ್ತಿದ್ದಾರೆ, ಹಿಂದು ಸಂಘಟನೆಯ ಯುವಕರ ದಮನಕ್ಕಾಗಿ ಜಿಲ್ಲೆಯಲ್ಲಿ ಆ್ಯಂಟಿ ಕಮ್ಯುನಲ್ ಫೋರ್ಸ್ ರಚನೆ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಆರೋಪಿಸಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಂಗಳೂರು ವಿಧಾನಸಭಾ ಕ್ಷೇತ್ರದ ಮತದಾರರು ತಲೆತಗ್ಗಿಸುವ ರೀತಿಯಲ್ಲಿ ಸಭಾಧ್ಯಕ್ಷರು ವಿಧಾನಸಭೆಯಲ್ಲಿ ವರ್ತನೆ ತೋರಿಸಿದ್ದಾರೆ. ಜಿಲ್ಲೆಯಲ್ಲಿ ಸೇಡಿನ ರಾಜಕೀಯ ಮಾಡುವುದರ ಜೊತೆಗೆ ಜಿಲ್ಲೆಯ ಶಾಸಕರಿಗೆ ಅವಮಾನ ಮಾಡುವ ಕಾರ್ಯವಾಗಿದೆ. ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪೀಠಕ್ಕೆ ಅಗೌರವ ತೋರುವ ಕೆಲಸ ವಿಧಾನಸಭಾ ಅಧ್ಯಕ್ಷರಿಂದ ಆಗುತ್ತಿದೆ ಎಂದು ಕುಂಪಲ ಆರೋಪಿಸಿದರು.
ಐಎಎಸ್ ಅಧಿಕಾರಿಗಳು ಜನರ ಸೇವೆಗೆಂದು ತೆಗೆದುಕೊಂಡ ಜವಾಬ್ದಾರಿಯನ್ನು ಬದಲಾಯಿಸಿ ಜನಪ್ರತಿನಿಧಿಗಳಿಗೆ ಸೆಕ್ಯುರಿಟಿ ನೀಡಿರುವುದನ್ನ ಖಂಡಿಸುವುದು ಪ್ರತಿಪಕ್ಷದ ಜವಾಬ್ದಾರಿ. ಆದರೆ ಸಾಂವಿಧಾನಿಕವಾಗಿ ಹೇಗೆ ನಡೆದುಕೊಳ್ಳಬೇಕು ಅನ್ನುವ ಜವಾಬ್ದಾರಿಯನ್ನು ಇಟ್ಟುಕೊಳ್ಳಬೇಕಾದ ವಿಧಾನಸಭಾ ಅಧ್ಯಕ್ಷ ಖಾದರ್ ಅವರು ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ವರ್ತಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಆ್ಯಂಟಿ ಕಮ್ಯುನಲ್ ಫೋರ್ಸ್ ಕೇವಲ ಹಿಂದೂ ಸಂಘಟನೆಯ ಯುವಕರ ದಮನಕ್ಕೆ ರಚನೆಯಾಗಿದೆ. ಮೂವರು ಹಿಂದೂ ಯುವಕರಿಗೆ ನೋಟೀಸು ನೀಡಿ ಗಡೀಪಾರು ಮಾಡುವ ಕೆಲಸ ಮಾಡಿರುವುದು ಖಂಡನೀಯ. ಉದ್ರೇಕಕಾರಿಯಾಗಿ ಕೋಮುಗಲಭೆಗೆ ಪ್ರಚೋದಿಸುವ ರೀತಿಯಲ್ಲಿ ಕೆಲಸಗಳಾಗುತ್ತಿವೆ ಎಂದು ಆರೋಪಿಸಿದ ಅವರು ಚುನಾವಣೆ ಪೂರ್ವ ಕಂಡೀಷನ್ ಹಾಕಿ ಉಚಿತ ಭಾಗ್ಯಗಳನ್ನ ಕೊಡುವುದನ್ನು ಎಲ್ಲಿಯೂ ಹೇಳಿರಲಿಲ್ಲ. ಆದರೆ ಸದ್ಯ ಉಚಿತ ಭಾಗ್ಯಗಳಿಗಾಗಿ ಜನರನ್ನು ಅಲೆದಾಡಿಸುವ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ರಾಜ್ಯ ಸರಕಾರ ಕೊಡುವ ಯಾವುದೇ ಯೋಜನೆಯೂ ಜನರ ತೆರಿಗೆಯ ಹಣವೇ ಹೊರತು ಕಾಂಗ್ರೆಸ್ ಪಕ್ಷದ ಹಣವಲ್ಲ. ಹಾಲಿನ ಬೆಲೆಯನ್ನು 3 ರೂ. ಏರಿಕೆ ಮಾಡುವ ಮೂಲಕ ಜನರಿಗೆ ದೊಡ್ಡ ಹೊಡೆತವನ್ನು ಸರಕಾರ ನೀಡಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ ರಾಜ್ಯ ಕಾಂಗ್ರೆಸ್ ಬ್ರಿಟಿಷರ ದಬ್ಬಾಳಿಕೆಯ ರೀತಿ ನಡೆದುಕೊಳ್ಳುತ್ತಿದೆ. ಅತ್ಯಾಚಾರ, ಕೊಲೆ, ಕಳವು ನಡೆಸಿದ್ದಲ್ಲ. ಕೇವಲ ಹಿಂದೂ ಸಂಘಟನೆಯಲ್ಲಿ ತೊಡಗಿದ್ದಾರೆಂಬ ಕಾರಣಕ್ಕೆ ಯುವಕರನ್ನ ಗಡೀಪಾರು ಮಾಡುವವರು ಮುಂದಿನ ಐದು ವರ್ಷದಲ್ಲಿ ಏನು ಮಾಡಬಹುದು? ಹಿಂದೂ ಯುವಕರ ಗಡೀಪಾರನ್ನು ಪಕ್ಷ ಕಟುವಾಗಿ ಖಂಡಿಸುತ್ತದೆ. ಗ್ಯಾರಂಟಿ ಯೋಜನೆಗಾಗಿ ಮಹಿಳೆಯರ ಸರತಿ ಸಾಲು, ಉಚಿತ ಬಸ್ಸಿಗಾಗಿ ಪೇಚಾಟ, ಸರ್ವರ್ ಸಮಸ್ಯೆ, ವ್ಯವಸ್ಥೆಯೇ ಸರಿಯಿಲ್ಲದೆ ಯೋಜನೆ ಹೇಗೆ ಪೂರೈಸುತ್ತಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಯಶವಂತ್ ಅಮೀನ್, ಜಿತೇಂದ್ರ ಶೆಟ್ಟಿ ತಲಪಾಡಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
Bjp Satish Kumpala slams Speaker UT Khader, says has a cogress puppet, Anti Communal wing is to threat Hindu youths he slammed in Mangalore.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am