ಬ್ರೇಕಿಂಗ್ ನ್ಯೂಸ್
23-06-23 10:52 pm Mangalore Correspondent ಕರಾವಳಿ
ಮಂಗಳೂರು, ಜೂನ್ 23: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಪೊಲೀಸರು. ಧರ್ಮಸ್ಥಳದ ದೊಡ್ಡವರೆಲ್ಲ ಸೇರಿಕೊಂಡು ಈ ಪ್ರಕರಣ ಮುಚ್ಚಿ ಹಾಕಿದ್ದಾರೆ. ಆದರೆ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪನ ಮುಂದೆ ಅದು ಸಾಧ್ಯವಿಲ್ಲ. ಕೇರಳದಲ್ಲಿ 28 ವರ್ಷಗಳ ಬಳಿಕ ನನ್ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿತ್ತು. ಆದರೆ ಇಲ್ಲಿ ಶಿಕ್ಷೆಯಾಗುತ್ತೆ ಎಂದು ನಾವು ನಂಬುವುದಿಲ್ಲ. ಆದರೆ ಅಣ್ಣಪ್ಪ ಮತ್ತು ಮಂಜುನಾಥನೇ ಇವರಿಗೆ ತಕ್ಕ ಶಾಸ್ತಿ ಮಾಡಲಿದ್ದಾನೆ. ಇವರು ಯಾರೆಲ್ಲ ಸೇರಿ ಆ ಕೃತ್ಯ ಎಸಗಿದ್ದಾರೋ, ಅದಕ್ಕೆ ಯಾರೆಲ್ಲ ಬೆಂಬಲ ನೀಡಿದ್ದಾರೋ ಅವರೆಲ್ಲರಿಗೂ ತಕ್ಕ ಶಾಸ್ತಿ ಆಗಲಿದೆ, ವಂಶವೇ ನಾಶವಾಗಲಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಪ್ರಜಾಪ್ರಭುತ್ವ ವೇದಿಕೆ, ಬೆಳ್ತಂಗಡಿ ಹೆಸರಲ್ಲಿ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ತಿಮರೋಡಿ ಮಹೇಶ್ ಶೆಟ್ಟಿ, ಧರ್ಮಸ್ಥಳ ಮತ್ತು ಪೊಲೀಸರ ವಿರುದ್ಧ ವಾಗ್ದಾಳಿಯನ್ನೇ ನಡೆಸಿದ್ದಾರೆ. 11 ವರ್ಷಗಳ ಹಿಂದೆ ಏನೆಲ್ಲ ಆಗಿತ್ತು ಅನ್ನೋದು ಈಗಿನವರಿಗೂ ತಿಳಿಯಬೇಕಾಗಿದೆ. 2012ರ ಅಕ್ಟೋಬರ್ 9ರಂದು ಸೌಜನ್ಯಾಳನ್ನು ಎತ್ಕೊಂಡು ಹೋಗಿದ್ದರು. ಮರುದಿನ ಹೆಣ ಸಿಕ್ಕಿತ್ತು. ಮೂರನೇ ದಿನ ಆರೋಪಿಯೆಂದು ಸಂತೋಷ್ ರಾವನ್ನು ಹಿಡಿದು ಕೊಟ್ಟಿದ್ದರು. ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿ, ಪೊಲೀಸ್ ಠಾಣೆಗೆ ಬೆಂಕಿ ಕೊಡುವುದಾಗಿ ಸೇರಿದ್ದರು. ಅಕ್ಟೋಬರ್ 11ರಂದು ರಾತ್ರಿ 9 ಗಂಟೆಗೆ ಸರ್ಕಲ್ ಇನ್ಸ್ ಪೆಕ್ಟರ್ ಸುದರ್ಶನ್ ನನ್ನನ್ನು ಠಾಣೆಗೆ ಕರೆದಿದ್ದರು.
ಪೊಲೀಸರೇ ಠಾಣೆಗೆ ಕರೆಸಿ ಎಫ್ಐಆರ್ ಹಾಕಿದ್ದರು
ನೀವೊಮ್ಮೆ ಬಂದು ಜನರನ್ನು ಸಂತೈಸಬೇಕೆಂದು ಹೇಳಿ ಕರೆಸಿದ್ದರು. ಅಲ್ಲಿ ವರೆಗೂ ನಾನು ಎಂಟ್ರಿ ಆಗಿರಲಿಲ್ಲ. ಪೊಲೀಸರ ಹಠಕ್ಕೆ ಬಿದ್ದು ಸ್ಥಳಕ್ಕೆ ಹೋಗಿ, ಮೂರು ಸಾವಿರದಷ್ಟು ಸೇರಿದ್ದ ಜನರನ್ನು ನಾನೇ ಭರವಸೆ ಕೊಟ್ಟು ಹೊರಕ್ಕೆ ಕಳಿಸಿದ್ದೆ. ಅಲ್ಲಿಂದ ಹಿಂದೆ ಬರುವಷ್ಟರಲ್ಲಿ ನನ್ನ ವಿರುದ್ಧವೇ ಎಫ್ಐಆರ್ ದಾಖಲಿಸಿದ್ದರು ಪೊಲೀಸರು. ಎಸ್ಪಿ ಅಭಿಷೇಕ್ ಗೋಯಲ್ ಕೇಸ್ ಮಾಡೋಕೆ ಹೇಳಿದ್ದಾರೆ. ದೊಡ್ಡವರ ಒತ್ತಡ ಇದೆ ಎಂದು ಹೇಳಿದ್ದರು ಸರ್ಕಲ್ ಸುದರ್ಶನ್. ನೀವೇ ನನ್ನನ್ನು ಕರೆಸಿದ್ದಲ್ವಾ ಎಂದು ಕೇಳಿದ್ದಕ್ಕೆ, ನಾನೇನೂ ಮಾಡುವಂತಿಲ್ಲ ಎಂದಿದ್ದರು. ಮರುದಿನವೇ ಮಧ್ಯಾಹ್ನ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಪೊಲೀಸರ ಕಡೆಯಿಂದ ಫೋನ್ ಬಂದಿತ್ತು. ಊಟ ಮಾಡ್ತಿದ್ದರೆ, ಅಲ್ಲಿಂದಲೇ ಎದ್ದು ಓಡಿ.. ಎನ್ಕೌಂಟರ್ ಮಾಡಲು ಬರ್ತಿದ್ದಾರೆ ಎಂದು ಹೇಳಿದ್ದರು. ಕೂಡಲೇ ಓಡಿ ಹೋಗಿದ್ದೆ. ಕೆಲ ಹೊತ್ತಿನಲ್ಲೇ ಎಸ್ಪಿ ಅಭಿಷೇಕ್ ಗೋಯಲ್, ಬಂಟ್ವಾಳದ ಮಹೇಶ್ ಸಿವಿಲ್ ಡ್ರೆಸ್ಸಲ್ಲಿ ಬಂದಿದ್ದರು. ಅಷ್ಟೊತ್ತಿಗೇ ಅಣ್ಣುಪ್ಪನ ಕೃಪೆಯಿಂದ ಭಾರೀ ಮಳೆ ಬಂದಿದ್ದು ಅವರನ್ನು ಮನೆಯ ಹತ್ತಿರಕ್ಕೂ ಹೋಗಲು ಬಿಟ್ಟಿಲ್ಲ. ಆನಂತರ, ಒಂದು ತಿಂಗಳ ಕಾಲ ತಲೆ ತಪ್ಪಿಸಿಕೊಂಡು ಇರುವಂತಾಗಿತ್ತು. ನನ್ನನ್ನು ಜೀವಂತ ಉಳಿಸಿದ್ದು ಅಣ್ಣಪ್ಪ ಸ್ವಾಮಿ ಮಾತ್ರ. ಧರ್ಮ ನಿಷ್ಠನಾಗಿದ್ದಕ್ಕೆ ಆತ ಉಳಿಸಿದ್ದಾನೆ.
ಅಂದು ಸೌಜನ್ಯಾ ಬಸ್ ಇಳಿದು ಹೋಗುತ್ತಿದ್ದಾಗ ಆಕೆಯನ್ನು ನಾಲ್ಕೈದು ಮಂದಿ ಸೇರಿ ಎಳೆದು ಕಾರಿಗೆ ಹಾಕುತ್ತಿರುವುದನ್ನು ಬಂಟ ಸಮುದಾಯದ ಹುಡುಗಿಯೊಬ್ಬಳು ನೋಡಿ, ಬಸ್ಸಿನಲ್ಲಿದ್ದ ಟೀಚರ್ ಪರಿಮಳಾಗೆ ಹೇಳಿದ್ದಳು. ಟೀಚರ್ ಅದು ನಾನು ನೋಡ್ಕೊಳ್ತೀನಿ, ನೀನು ಬರಬೇಡ ಎಂದು ಹೇಳಿದ್ದರು. ಮರುದಿನ ಕಂಪ್ಲೇಂಟ್ ಕೊಡಲು ಹೋಗಿದ್ದರೂ, ದೂರು ತೆಗೆದುಕೊಳ್ಳದೆ ಮುಚ್ಚಿಹಾಕಿದ್ದು ಅಂದಿನ ಎಸ್ಐ ಯೋಗೀಶ್. ಆತನೇ ಇಡೀ ಪ್ರಕರಣ ಮುಚ್ಚಿ ಹಾಕಲು ಕಾರಣ. ಅಂದು ಸೌಜನ್ಯಾಳನ್ನು ಪೋಸ್ಟ್ ಮಾರ್ಟಂ ನಡೆಸಿದ್ದ ವೈದ್ಯರು, ಇದು ಒಬ್ಬ ಮಾಡಿದ ಕೃತ್ಯ ಅಲ್ಲ, ಹಲವರಿದ್ದಾರೆ ಎಂದಿದ್ದರು. ಸಿಬಿಐ ಅಧಿಕಾರಿಗಳು ಯಾಕೆ ಈ ಹಲವರನ್ನು ತನಿಖೆ ನಡೆಸಿಲ್ಲ. ಅದು ಹುಚ್ಚರ ಸಂತೆ. ಇವರೆಲ್ಲ ಸೇರಿ ಸಂತೋಷ್ ರಾವ್ ಆರೋಪಿಯಲ್ಲ ಎಂದು ಹೇಳುವುದಕ್ಕೆ 11 ವರ್ಷ ಬೇಕಿತ್ತೇ ?
ಸಿಬಿಐ ಅಧಿಕಾರಿಗಳು ಸೇರಿ ಯೋಗೀಶ, ಭಾಸ್ಕರ ರೈ, ಸುದರ್ಶನ್ ಹೀಗೆ ಯಾರೆಲ್ಲ ಹಳ್ಕಟ್ ಕೆಲಸ ಮಾಡಿದ್ದಾರೋ, ಅವರ ಕುಟುಂಬಸ್ಥರಿಗೂ ಒಳ್ಳೆಯದಾಗಲ್ಲ. ಅವರ ಹೆಂಡ್ತಿ ಮಕ್ಕಳೆಲ್ಲ ಪಾಪವನ್ನು ತಿನ್ನಲಿಕ್ಕಿದ್ದಾರೆ. ಯಾರೆಲ್ಲ ಭಾಗಿಯಾಗಿದ್ದಾರೆ ಅವರೆಲ್ಲರ ಸಂತಾನ ನಾಶ ಆಗಿಹೋಗುತ್ತದೆ ಎಂದು ಹೇಳಿದ ಮಹೇಶ್ ಶೆಟ್ಟಿ, ಧರ್ಮಸ್ಥಳ ಅನ್ನೋದು ಕೋಟ್ಯಂತರ ಜನರು ನಂಬುವ ಸ್ಥಾನ. ಅಂತಹ ಜಾಗ, ಒಂದು ಕುಟುಂಬದಿಂದ ಹಾಳಾಗಬಾರದು. ಧರ್ಮಸ್ಥಳದಲ್ಲಿ ಸಾವಿರಾರು ಜನರು ಸತ್ತಿದ್ದಾರೆ, ಡಬಲ್ ಮರ್ಡರ್ ಆಯ್ತಲ್ಲ ಯಾಕೆ ತನಿಖೆ ಆಗಿಲ್ಲ? ಸೌಜನ್ಯಾ ಪ್ರಕರಣಕ್ಕೂ ಹಿಂದಿನ ಹತ್ತು ವರ್ಷದಲ್ಲಿ 462 ಅಸಹಜ ಪ್ರಕರಣ ದಾಖಲಾಗಿದೆ. ಆನಂತರದ ಹತ್ತು ವರ್ಷದಲ್ಲಿ ಹತ್ತು ಪ್ರಕರಣ ಅಷ್ಟೇ ದಾಖಲಾಗಿದ್ದು. ಇದು ಹೇಗಾಯ್ತು. ಇಲ್ಲಿ ಒಂದು ಗ್ಯಾಂಗೇ ಇದೆಯೆಂದು ಹೇಳಿದ್ದೆ. ಸೌಜನ್ಯಾ ಪರ ಹೋರಾಟದ ಬಳಿಕ ಈ ರೀತಿಯ ಅಸಹಜ ಸಾವು ಕಡಿಮೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.
ಪ್ರಮಾಣಕ್ಕೆ ಬರಲಿ, ನಾವೆಲ್ಲ ಬರುತ್ತೇವೆ
ಧರ್ಮಸ್ಥಳಕ್ಕೆ ಯಾರ್ಯಾರೆಲ್ಲ ಪ್ರಮಾಣ ಮಾಡಲು ಬರ್ತಾರೆ. ನಾನೇ ಪ್ರಮಾಣ ಮಾಡ್ತೀನಿ, ನೀವೇ ಈ ಕೃತ್ಯ ಮಾಡಿಸಿದ್ದು ಅಂತ. ಅಲ್ಲ ಎಂದು ಹೆಗ್ಗಡೆ ಕುಟುಂಬಸ್ಥರೇ ಮಂಜುನಾಥನ ಮುಂದೆ ಹೇಳಲಿ ಎಂದು ಮಹೇಶ್ ಶೆಟ್ಟಿ ಸವಾಲು ಹಾಕಿದರು. ಕೃತ್ಯ ನಡೆದ ಅಕ್ಟೋಬರ್ 9ನೇ ತಾರೀಕಿನಂದು ಮಧ್ಯಾಹ್ನ ಅದೇ ಜಾಗದಲ್ಲಿ ಮಲ್ಲಿಕ್ ಜೈನನ್ನು ವಿಠಲ ಗೌಡರ ಅಕ್ಕ ನೋಡಿದ್ದಾರೆ. ಸಂತೋಷ್ ರಾವ್ ನನ್ನು ಹಿಡಿದುಕೊಟ್ಟಿದ್ದ ಮತ್ತು ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ರವಿ ಪೂಜಾರಿ ಕೆಲವೇ ದಿನದಲ್ಲಿ ನೇಣಿಗೇರಿ ಸತ್ತಿದ್ದ. ಬೆಳಗ್ಗೆ ಪೇಪರ್ ಎತ್ತಿಕೊಂಡು ಹೋಗಿದ್ದ ಸ್ವಲ್ಪ ಹೊತ್ತಿನಲ್ಲಿ ನೇಣು ಗಂಬಕ್ಕೆ ಏರಿದ್ದು ಹೇಗೆ.. ಆತನನ್ನು ಕೊಂದಿದ್ದು ಯಾರು.. ಧೀರಜ್ ಜೈನ್ ಮನೆಯಲ್ಲಿ ಕೆಲಸಕ್ಕಿದ್ದ ವಾರಿಜ ಪೂಜಾರ್ತಿ ಎಂಬ ಹೆಂಗಸು, ಬಟ್ಟೆ ತೊಳೆಯುವಾಗ ರಕ್ತ ಇದ್ದುದರ ಬಗ್ಗೆ ಕೇಳಿದ್ದರು. ಎರಡೇ ದಿನದಲ್ಲಿ ಆಕೆ ಬಾವಿಗೆ ಬಿದ್ದು ಸತ್ತಿದ್ದು ಹೇಗೆ.. ಇದನ್ನೆಲ್ಲ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದಾರೆಯೇ ಎಂದು ಮಹೇಶ್ ಶೆಟ್ಟಿ ಹೇಳಿದರು.
ಬೇರೊಬ್ಬ ಹುಡುಗಿ ಟಾರ್ಗೆಟ್ ಆಗಿದ್ದಳು
ಸರ್ಕಲ್ ಇನ್ಸ್ ಪೆಕ್ಟರ್ ಸುದರ್ಶನ್ ಇಂಥವರೇ ಈ ಕೃತ್ಯ ಮಾಡಿಸಿದ್ದೆಂದು ನನ್ನಲ್ಲಿ ಹೇಳಿದ್ದಾರೆ. ನಾವು ಏನೂ ಮಾಡುವಂತಿಲ್ಲ, ದೊಡ್ಡವರು ಕೈಕಟ್ಟಿದ್ದಾರೆ ಎಂದಿದ್ದರು. ಈಗ ಯೋಗೀಶ, ಸುದರ್ಶನ್ ಮುಂದೆ ಬಂದು ಸತ್ಯ ಹೇಳಲಿ ಎಂದ ಮಹೇಶ್ ಶೆಟ್ಟಿ, ಧರ್ಮಸ್ಥಳದಲ್ಲಿ ಧಾರ್ಮಿಕ ಭಯೋತ್ಪಾದನೆ ಆಗ್ತಾ ಇದೆ. ದೇವರ ಹೆಸರಲ್ಲಿ ಎಲ್ಲವನ್ನೂ ಮಾಡುತ್ತಿದ್ದಾರೆ. ಅಂದು ಬ್ರಾಹ್ಮಣ ಹುಡುಗಿಯೊಬ್ಬಳು ರಕ್ಕಸರ ಟಾರ್ಗೆಟ್ ಆಗಿದ್ದಳು. ಆಕೆ ಸಿಕ್ಕಿಲ್ಲವೆಂದು ಸೌಜನ್ಯಾಳನ್ನು ಎತ್ಕೊಂಡು ಹೋಗಿದ್ದರು. ಧರ್ಮಸ್ಥಳದ ಜಾಗದ ನಡುವೆ ಇದ್ದ ಎರಡೆಕ್ರೆ ಜಾಗಕ್ಕಾಗಿ ಬ್ರಾಹ್ಮಣ ಕುಟುಂಬಕ್ಕೆ ಕಿರುಕುಳ ಕೊಟ್ಟಿದ್ದರು. ಕೊನೆಗೂ ಅವರು ಜಾಗ ಬಿಟ್ಟುಕೊಡಲಿಲ್ಲ. ಗೌಡರಿಗೆ ಜಾಗ ಕೊಟ್ಟು ಹೋಗಿದ್ದರು. ಆ ಕುಟುಂಬಕ್ಕೂ ಭಾರೀ ಕಿರುಕುಳ ನೀಡಿದ್ರು. ಕೋರ್ಟ್ ಕೇಸು ಎಲ್ಲವನ್ನೂ ಸಹಿಸಿಕೊಂಡು ಗೌಡರು ಈಗ ಅಲ್ಲಿ ಕಟ್ಟಡ ಕಟ್ಟುತ್ತಿದ್ದಾರೆ ಎಂದರು.
ಸೌಜನ್ಯಾಳ ಪ್ರತಿಮೆ ನಿರ್ಮಾಣ ಮಾಡ್ತೀವಿ
ಅದೇ ಜಾಗದಲ್ಲಿ ಸೌಜನ್ಯಾಳ ಪ್ರತಿಮೆ ನಿರ್ಮಾಣ ಮಾಡ್ತೀವಿ, ಅತ್ಯಾಚಾರ ಪ್ರಕರಣದಲ್ಲಿ ದೆಹಲಿಯಲ್ಲಿ ನ್ಯಾಯ ಸಿಗುತ್ತದೆ, ಹಳ್ಳಿಯಲ್ಲಿ ಸಿಗಲ್ಲ ಅಂದ್ರೆ ಹೇಗೆ. ಸೌಜನ್ಯಾ ಪರ ನ್ಯಾಯವನ್ನು ಇಡೀ ರಾಜ್ಯದ ಪ್ರತಿ ಮನೆಯವರು ಕೇಳುವಂತಾಗಬೇಕು. ಸೌಜನ್ಯಾ ಪ್ರತಿಮೆ ನೋಡಿದವರ ಕಾಮದ ಪಿತ್ಥ ಇಳಿಯುವಂತೆ ಆಗಬೇಕು ಎಂದರು ಮಹೇಶ್ ಶೆಟ್ಟಿ. ಸುದ್ದಿಗೋಷ್ಟಿಯಲ್ಲಿದ್ದ ವಕೀಲೆ ಅಂಬಿಕಾ ನಾಯಕ್, ತಪ್ಪು ಮಾಡಿರುವ ಪೊಲೀಸರು, ವೈದ್ಯರ ವಿರುದ್ಧ ಹೈಕೋರ್ಟಿನಲ್ಲಿ ಕೇಸ್ ಹಾಕ್ತೀವಿ. ಮಾನವ ಹಕ್ಕು ಆಯೋಗಕ್ಕೂ ದೂರು ಕೊಡುತ್ತೇವೆ ಎಂದರು. ಸೌಜನ್ಯಾ ತಾಯಿ ಕುಸುಮಾವತಿ ಮಾತನಾಡಿ, 11 ವರ್ಷ ಕಾದರೂ ನಮಗೆ ನ್ಯಾಯ ಸಿಕ್ಕಿಲ್ಲ. ಈಗ ನಮ್ಮ ಗೌಡ ಸಮಾಜದ ಸ್ವಾಮೀಜಿಗೆ ಕೇಳಿಕೊಳ್ಳುತ್ತೇವೆ, ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಹೇಳಿದರು. ಗೋಷ್ಟಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ, ಸೌಜನ್ಯಾ ಮಾವ ವಿಠಲ ಗೌಡ ಇದ್ದರು.
Mangalore Soujanya rape and murder case, police have played game by closing the case slams Mahesh Shetty. In a press meet on Friday June 23, crying foul on the verdict of sensational rape and murder case of Soujanya, whose killing shrouded in mystery, Mahesh Shetty Thimarodi, president of Prajaprabhutva Vedike said, “The case is closed by destroying all evidence. The investigation officer in this case has not done justice.
23-05-25 02:35 pm
Bangalore Correspondent
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ...
22-05-25 11:09 pm
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
22-05-25 10:29 pm
Mangalore Correspondent
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
Kishor Kumar Puttur; ಸರ್ಕಾರಿ ಆಸ್ಪತ್ರೆ ಬಳಿಯ ಜನ...
21-05-25 11:09 pm
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
23-05-25 01:25 pm
HK News Desk
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm