ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ ; ಬಾಲ್ಯದ ಗೆಳತಿಯೊಂದಿಗೆ ಸಪ್ತಪದಿಗೆ ಸಿದ್ಧತೆ 

30-12-25 05:44 pm       Bangalore Correspondent   ಕರ್ನಾಟಕ

ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ದಂಪತಿಯ ಪುತ್ರ ರೈಹಾನ್ ವಾದ್ರಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರೈಹಾನ್ ಅವರು ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬೆಂಗಳೂರು, ಡಿ.30 : ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ದಂಪತಿಯ ಪುತ್ರ ರೈಹಾನ್ ವಾದ್ರಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರೈಹಾನ್ ಅವರು ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಈಗ ಮದುವೆಯಾಗಲು ನಿರ್ಧರಿಸಿದ್ದಾರೆ. ರೈಹಾನ್ ಅವರು ಅವೀವಾ ಅವರಿಗೆ ವಿವಾಹ ಪ್ರಸ್ತಾಪ ಮಾಡಿದ್ದು, ಅದಕ್ಕೆ ಅವಿವಾ ಸಮ್ಮತಿ ಸೂಚಿಸಿದ್ದಾರೆ. ಇವರ ಸಂಬಂಧಕ್ಕೆ ಉಭಯ ಕುಟುಂಬಗಳೂ ಹಸಿರು ನಿಶಾನೆ ತೋರಿಸಿದ್ದು, ಶೀಘ್ರದಲ್ಲೇ ವಿವಾಹದ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.

ರೈಹಾನ್ ವಾದ್ರಾ ವೃತ್ತಿಯಲ್ಲಿ ಒಬ್ಬ ಪರಿಣಿತ ಛಾಯಾಗ್ರಾಹಕ. ತನ್ನ ಹತ್ತನೇ ವಯಸ್ಸಿಗೇ ಕ್ಯಾಮೆರಾ ಕೈಗೆತ್ತಿಕೊಂಡ ರೈಹಾನ್ ವನ್ಯಜೀವಿ, ಬೀದಿ ಛಾಯಾಗ್ರಹಣ ಮತ್ತು ಕಮರ್ಷಿಯಲ್ ಫೋಟೋಗ್ರಫಿಯಲ್ಲಿ ಗುರುತಿಸಿದ್ದಾರೆ. ಹಾಗೆಯೇ ಅವಿವಾ ಬೇಗ್ ಮೂಲತಃ ದೆಹಲಿ ಮೂಲದವರಾಗಿದ್ದು, ವೃತ್ತಿಯಲ್ಲಿ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿ ಆಗಿದ್ದಾರೆ. ದೆಹಲಿಯಲ್ಲಿ 'ಅಟೆಲಿಯರ್ 11' ಎಂಬ ಫೋಟೋಗ್ರಫಿ ಸ್ಟುಡಿಯೋ ನಡೆಸುತ್ತಿದ್ದಾರೆ. 

ಇದಲ್ಲದೆ ರಾಷ್ಟ್ರಮಟ್ಟದ ಮಾಜಿ ಫುಟ್ಬಾಲ್ ಆಟಗಾರ್ತಿ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು ಮಾತ್ರ ಭಾಗಿಯಾಗಿದ್ದು ಶೀಘ್ರದಲ್ಲೇ ಮದುವೆ ದಿನಾಂಕವನ್ನು ಕುಟುಂಬ ಘೋಷಣೆ ಮಾಡಲಿದೆ. ರೈಹಾನ್ ವಾದ್ರಾ ಡೆಹ್ರಾಡೂನ್‌ನ ದಿ ಡೂನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಅದೇ ಶಾಲೆಯಲ್ಲಿ ಅಧ್ಯಯನ ನಡೆಸಿದ್ದರು. ನಂತರ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ನಲ್ಲಿರುವ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್ ಗೆ ತೆರಳಿದ್ದರು.

Raihan Vadra, son of Priyanka Gandhi and Robert Vadra, has gotten engaged to his childhood friend and longtime partner Aviva Baig. The couple, together for over seven years, exchanged rings in a private ceremony attended by close family. Raihan, a professional photographer, and Aviva, a photographer and producer, are expected to announce their wedding date soon.