ಬ್ರೇಕಿಂಗ್ ನ್ಯೂಸ್
30-12-25 11:12 pm HK News Desk ಕರ್ನಾಟಕ
ಧಾರವಾಡ, ಡಿ.30 : ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಕಾರ್ಯಕ್ರಮವನ್ನೇ ರದ್ದುಪಡಿಸಲಾಗಿದೆ.
ತಮ್ಮ ಭಾಷಣದ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡುವವರನ್ನು ಕರೆತಂದು ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಬಾರದು ಎಂದು ಡಿಎಸ್ಎಸ್ ಕಡೆಯಿಂದ ವಿರೋಧ ವ್ಯಕ್ತವಾಗಿದೆ. ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗಿಯಾಗಲು ದಲಿತ ಸಂಘಟನೆ, ಕೃಷಿ ವಿವಿ ಬೋರ್ಡ್ ಸದಸ್ಯರು ವಿರೋಧ ವ್ಯಕ್ತಪಡಿಸಿ ವಿಶ್ವ ವಿದ್ಯಾಲಯದ ಗೇಟ್ ಮುಂದೆ ಧರಣಿ ನಡೆಸಿದ್ದು, ತೀವ್ರ ವಿರೋಧ ಹಿನ್ನಲೆ ಕಾರ್ಯಕ್ರಮ ರದ್ದುಗೊಳಿಸಲಾಯಿತು.
ಕೃಷಿ ವಿವಿ ಕಾರ್ಯಕ್ರಮಕ್ಕೆ ಯಾವುದೇ ಶಾಸಕರು ಅಥವಾ ಸಚಿವರನ್ನು ಕರೆಯದೆ ಚಕ್ರವರ್ತಿ ಸೂಲಿಬೆಲೆಯನ್ನು ಕರೆದ ಉದ್ದೇಶವೇನು ಎಂದು ಪ್ರತಿಭಟನಾಕಾರರು ವಿವಿ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಕೆಲ ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಗೇಟ್ ಏರಿ ಪ್ರತಿಭಟನೆ ನಡೆಸಿದ ಕಾರಣ ಹೈಡ್ರಾಮಾ ಸೃಷ್ಟಿಯಾಗಿದೆ.
ಸಿಂಂಡಿಕೇಟ್ ಮೆಂಬರ್ಗಳಿಗೆ ತಿಳಿಸದೆ ಕುಲಪತಿಗಳು ಕಾರ್ಯಕ್ರಮ ಮಾಡಲು ಹೊರಟಿದ್ದಾರೆ. ಇದೇ ರೀತಿ ಉದ್ಧಟತನ ಮುಂದುವರಿಸಿದರೆ ಅವರ ಕಚೇರಿಗೆ ನುಗ್ಗಿ ದಾಂಧಲೆ ನಡೆಸುತ್ತೇವೆ ಎಂದು ಡಿಎಸ್ಎಸ್ ಮುಖಂಡ ಪರಮೇಶ್ ಎಚ್ಚರಿಸಿದ್ದಾರೆ. ಮೊನ್ನೆ ನಡೆದ ಬೋರ್ಡ್ ಮೀಟಿಂಗ್ನಲ್ಲಿಯೂ ಕುಲಪತಿಗಳು ಈ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಶಿಷ್ಟಾಚಾರ ಉಲ್ಲಂಘಿಸಿ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗ್ತಿದೆ. ಚಕ್ರವರ್ತಿ ಸೂಲಿಬೆಲೆ ಏನು ಚಿನ್ನದ ರಸ್ತೆ ಮಾಡಲು ಇಲ್ಲಿ ಬರುತ್ತಿದಾರಾ? ಎಂದು ಸಿಂಡಿಕೇಟ್ ಸದಸ್ಯ ರವಿ ಪ್ರಶ್ನಿಸಿದ್ದಾರೆ. ಪ್ರತಿಭಟನಾ ನಿರತರನ್ನು ಉಪನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
The induction ceremony of the student union at Dharwad’s University of Agricultural Sciences was cancelled after strong protests erupted against inviting speaker Chakravarthy Sulibele. Dalit organisations, DSS activists, and university board members opposed his participation, alleging that his speeches provoke communal unrest. Demonstrators staged a sit-in at the university gate, leading to high drama as some protesters climbed the gate.
27-02-26 10:17 pm
HK News Desk
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
ವರನಟ ಡಾ.ರಾಜ್ ಅಪಹರಣ ಪ್ರಕರಣ ; ಬರೋಬ್ಬರಿ 25 ವರ್ಷಗ...
25-02-26 07:54 pm
27-02-26 03:55 pm
HK News Staffer
ಲಂಚ ಆರೋಪದಲ್ಲಿ ಸಿಕ್ಕಿಬಿದ್ದ ಗಣಿ ಉಪ ನಿರ್ದೇಶಕರ ಮನ...
27-02-26 06:14 am
ಮಾರ್ಚ್ 11ರಿಂದ ಅನಿರ್ದಿಷ್ಟ ಮುಷ್ಕರ ; ರಾಜ್ಯಾದ್ಯಂತ...
25-02-26 10:10 pm
ಮಧ್ಯಪ್ರದೇಶದಲ್ಲಿ ಹೊಸ ರೀತಿಯ ಮತಾಂತರ ಜಾಲ ; ಹಿಂದು...
25-02-26 03:38 pm
ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ; ಮತ್ತೆ ಭುಗಿಲೆ...
24-02-26 01:21 pm
27-02-26 08:59 pm
Mangalore Correspondent
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
Kuntikana Kidnap, False: ಕುಂಟಿಕಾನದಲ್ಲಿ ಮಕ್ಕಳು...
27-02-26 05:00 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm