ಬ್ರೇಕಿಂಗ್ ನ್ಯೂಸ್
23-06-23 10:20 pm Mangalore Correspondent ಕರಾವಳಿ
ಮಂಗಳೂರು, ಜೂನ್ 23: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕರು, ಸಚಿವರು ರೇಗಿದ್ದಲ್ಲದೆ, ನಿದ್ದೆಗಣ್ಣಲ್ಲಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಪ್ರಸಂಗ ನಡೆದಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚೆನ್ನಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಈ ಬಾರಿ ಬೇಸಗೆಯಲ್ಲಿ ಅತಿ ಹೆಚ್ಚು ಕಡೆ ಪಶ್ಚಿಮ ಘಟ್ಟದ ಕಾಡಿನಲ್ಲಿ ಬೆಂಕಿ ಬಿದ್ದಿದೆ. ಇಷ್ಟೊಂದು ಬೆಂಕಿ ಬಿದ್ದರೂ, ಈಗ ಮಳೆಗಾಲದಲ್ಲಿ ಆ ಭಾಗದಲ್ಲಿ ಗಿಡ ನೆಟ್ಟು ಬೆಳೆಸುವ ಕೆಲಸವನ್ನು ಅರಣ್ಯ ಸಿಬಂದಿ ಮಾಡಿಲ್ಲ ಎಂದು ತರಾಟೆಗೆತ್ತಿಕೊಂಡರು. ಸಚಿವರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ, ಅರಣ್ಯ ಇಲಾಖೆಯ ಅಧಿಕಾರಿ ಉತ್ತರಿಸಲು ತಡವರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 70 ಕಡೆಗಳಲ್ಲಿ 204 ಹೆಕ್ಟೇರ್ ನಷ್ಟು ಕಾಡು ಸುಟ್ಟು ಹೋಗಿದೆ ಎಂದರು. ಇಷ್ಟೊಂದು ಕಡೆ ಬೆಂಕಿ ಬೀಳುವುದಕ್ಕೇನು ಕಾರಣ ಎಂಬ ಶಾಸಕರ ಪ್ರಶ್ನೆಗೆ, ಕೆಲವೊಮ್ಮೆ ಚಾರಣ ಬರುವವರು, ಮರ ಕಳ್ಳತನಕ್ಕೆ ಎಂಟ್ರಿ ಕೊಡುವವರು ಕಾರಣ. ಈ ಸಲ ಬಿಸಿಲ ತಾಪವೂ ಹೆಚ್ಚಿತ್ತು ಎಂದು ಅಧಿಕಾರಿ ಉತ್ತರಿಸಿದರು.

ಅರಣ್ಯಕ್ಕೆ ಬೆಂಕಿ ಬಿದ್ದಾಗ ನೀವ್ಯಾಕಿರೋದು ?
ನೀವ್ಯಾಕಿರೋದು ಮತ್ತೆ ಅರಣ್ಯ ಸಿಬಂದಿ. ಅರಣ್ಯಕ್ಕೆ ಬೆಂಕಿ ಬೀಳುವಾಗ ನೀವು ಏನ್ಮಾಡ್ತಿದ್ರಿ ಎಂದು ಶಾಸಕ ಪೂಂಜ ತರಾಟೆಗೆತ್ತಿಕೊಂಡರು. ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ 390 ಸಿಬಂದಿ ಇರಬೇಕು. 190 ಮಂದಿ ಅರಣ್ಯ ಸಿಬಂದಿ ಕೊರತೆ ಇದೆ ಎಂದು ಅಧಿಕಾರಿ ಹೇಳಿದರು. ಅರಣ್ಯಕ್ಕೆ ಬೆಂಕಿ ಬಿದ್ದಾಗ ಇವರಿಂದ ಬೆಂಕಿ ನಂದಿಸಲು ಆಗಿಲ್ಲ. ಕೆಲವು ಕಡೆ ತಾನಾಗಿಯೇ ಮತ್ತು ಸ್ಥಳೀಯರು ಸೇರಿ ಸ್ವಲ್ಪ ಬೆಂಕಿ ನಂದಿಸಿದ್ದಾರೆ ಎಂದು ಶಾಸಕ ಪೂಂಜ ಸಭೆಯ ಗಮನಸೆಳೆದರು. ಈಗ ಮಳೆಗಾಲದಲ್ಲಿ ಗಿಡ ನೆಡುವ ಕೆಲಸ ಮಾಡಬಹುದಲ್ಲ, ಅದನ್ನು ಶಾಸಕರು ಹೇಳಬೇಕಾ ಎಂದು ಸಚಿವರು ಗದರಿದಾಗ, ಆ ಬಗ್ಗೆ ಇಲಾಖೆಗೆ ಪ್ರಸ್ತಾವನೆ ರೆಡಿ ಮಾಡಿದ್ದೇವೆ ಎಂದರು. ಎಷ್ಟು ಅನುದಾನ ಬೇಕಾಗುತ್ತದೆ ಎಂದಾಗ, ಅದರ ಬಗ್ಗೆ ಲೆಕ್ಕ ಮಾಡಿ ಹೇಳ್ತೀನಿ ಎಂದು ತನ್ನ ಕರ್ತವ್ಯದಲ್ಲಿನ ನಿರ್ಲಕ್ಷ್ಯವನ್ನು ಅಧಿಕಾರಿ ತೋರಿಸಿದರು.

ಅರಣ್ಯಾಧಿಕಾರಿಗಳು ಅನುದಾನ ಶಿಫ್ಟ್ ಮಾಡಿದ್ರು
ಆನೆ ಉಪಟಳಕ್ಕೆ ಬೇಸತ್ತು ಆನೆ ಕಾರಿಡಾರ್ ಹೆಸರಲ್ಲಿ ಬೇಲಿ ಹಾಕಲು ಅನುದಾನ ತಂದಿದ್ದನ್ನು ಇವರು ಬೇರೆ ಇಲಾಖೆಗೆ ಶಿಫ್ಟ್ ಮಾಡಿದ್ದಾರೆ ಎಂದು ಅರಣ್ಯಾಧಿಕಾರಿಗಳ ವಿರುದ್ಧ ಮತ್ತೊಂದು ಆರೋಪವನ್ನು ಹರೀಶ್ ಪೂಂಜ ಮಾಡಿದ್ದಾರೆ. ಇದರಿಂದ ಬೆವತು ಹೋದ ಅಧಿಕಾರಿಯನ್ನು ಉಸ್ತುವಾರಿ ಸಚಿವರು ಗದರಿದರು. ಯಾಕ್ರೀ, ಅನುದಾನ ಬೇರೆ ಕಡೆಗೆ ಹಾಕಿದ್ದೀರಿ ಎಂದರು. ರೇಂಜ್ ಅಧಿಕಾರಿ ಅದು ಕೆಲಸ ಆಗಲ್ಲ ಎಂದು ಹೇಳಿದ್ದಕ್ಕೆ ಹಣ ವೇಸ್ಟ್ ಆಗುತ್ತೆಯೆಂದು ಶಿಫ್ಟ್ ಮಾಡಿದ್ದಾಗಿ ತಿಳಿಸಿದರು. ಇದರಿಂದ ಸಿಟ್ಟುಗೊಂಡ ಪೂಂಜ, ನೀವು ಸ್ಥಳಕ್ಕೆ ಬಂದು ಅಲ್ಲಿ ಆನೆ ಕಾರಿಡಾರ್ ಮಾಡಲು ಸಾಧ್ಯವಾಗಲ್ಲ ಎಂದು ತೋರಿಸುತ್ತೀರಾ ಎಂದು ಕೇಳಿದರು. ಅಧಿಕಾರಿಯದ್ದು ಮೌನವೇ ಉತ್ತರ ಆಗಿತ್ತು.
ಮಾಜಿ ಶಾಸಕರು ದರ್ಪ ತೋರುತ್ತಾರೆ..
ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಅಧಿಕಾರಿಗಳ ವಿರುದ್ಧ ದಬಾಯಿಸುತ್ತಾರೆ, ಅವರಿಂದಾಗಿ ಕೆಲಸ ಮಾಡದಂತಾಗಿದೆ ಎಂದು ಹರೀಶ್ ಪೂಂಜ, ಉಸ್ತುವಾರಿ ಸಚಿವರಲ್ಲಿ ದೂರು ಹೇಳಿಕೊಂಡಿದ್ದೂ ನಡೆಯಿತು. ಮೊನ್ನೆ ಫ್ರೀ ಬಸ್ ಬಿಡುವ ಸಂದರ್ಭದಲ್ಲಿ ಪ್ರೋಟೋಕಾಲ್ ಪ್ರಕಾರ ಶಾಸಕರನ್ನು ಕರೆಯಬೇಕಿತ್ತು. ಆದರೆ ಮಾಜಿ ಶಾಸಕರೇ ಅಲ್ಲಿ ಹೋಗಿ ಬಸ್ ಬಿಟ್ಟಿದ್ದಾರೆ. ವೇದಿಕೆಯಲ್ಲಿ ಹೋಗಿ ಕುಳಿತಿದ್ದಾರೆ ಎಂದು ಆಕ್ಷೇಪಿಸಿದರು. ಮಾಜಿ ಶಾಸಕರು ವೇದಿಕೆಯಲ್ಲಿ ಕುಳಿತುಕೊಳ್ಳಬಾರದು ಎಂದೇನಿಲ್ಲ ಎಂದ್ರು ಸಚಿವರು. ಇದಕ್ಕೆ ಎಂಎಲ್ಸಿ ಹರೀಶ್ ಕುಮಾರ್ ಧ್ವನಿಗೂಡಿಸಿ, ಹಿಂದೆ ನೀವು ಅಧಿಕಾರದಲ್ಲಿದ್ದಾಗಲೂ ಮಾಜಿ ಶಾಸಕರು ಸರಕಾರಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕುಳಿತಿದ್ದರು ಎಂದರು.
ಚಾಲಕನಿಲ್ಲದೆ ಮೂಲೆಯಲ್ಲಿದೆ 9 ಆಂಬುಲೆನ್ಸ್
ಇದಕ್ಕೂ ಮೊದಲು ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ವಂಡ್ಸೆ ಅವರನ್ನು ಸ್ಪೀಕರ್ ಯುಟಿ ಖಾದರ್ ಮತ್ತು ಸಚಿವ ದಿನೇಶ್ ಗುಂಡೂರಾವ್ ತರಾಟೆಗೆತ್ತಿಕೊಂಡರು. ಗೋಶಾಲೆ ವಿಚಾರ ಚರ್ಚೆಗೆ ಬಂದಾಗ, ಪ್ರತಿ ತಾಲೂಕಿಗೆ ಒಂದರಂತೆ ಆರು ತಿಂಗಳ ತಿಂದೆ ಪಶು ಆಸ್ಪತ್ರೆಗಳಿಗೆ ಆಂಬುಲೆನ್ಸ್ ಕೊಡಲಾಗಿತ್ತು. ಅದರ ಸ್ಥಿತಿ ಹೇಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಪ್ರಶ್ನೆ ಮಾಡಿದರು. ಜಿಲ್ಲೆಯಲ್ಲಿ 9 ತಾಲೂಕಿಗೆ ಒಂದರಂತೆ ಆಂಬುಲೆನ್ಸ್ ಬಂದಿದೆ. ಆದರೆ ಚಾಲಕ ಇಲ್ಲದೆ, ಅದು ಮೂಲೆಯಲ್ಲಿದೆ. ಚಾಲಕನ ನೇಮಕಕ್ಕೆ ರಾಜ್ಯ ಮಟ್ಟದಲ್ಲಿ ಏಜನ್ಸಿಗೆ ಕೊಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಚಾಲಕನ ನೇಮಕ ಆಗಿಲ್ಲ ಎಂದು ಅಧಿಕಾರಿ ಹೇಳಿದಾಗ, ಸಚಿವರು ನೀವು ಏನ್ ಮಾಡಿದ್ರಿ.. ವಾಹನ ಹಾಗೇ ಇಟ್ಟರೆ ಹಾಳಾಗಲ್ಲವೇ.. ಏನಾದ್ರೂ ಮಾಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು. ಕಳೆದ ಐದು ವರ್ಷಗಳಲ್ಲಿ ಪಶು ಸಂಗೋಪನಾ ಇಲಾಖೆಯಲ್ಲಿ ಒಬ್ಬ ಪಶು ವೈದ್ಯರನ್ನೂ ನೇಮಕ ಮಾಡಿಲ್ಲ. ಹೀಗಾಗಿ ವೈದ್ಯರ ಕೊರತೆ ಇದೆ ಎಂದು ಅಧಿಕಾರಿ ಹೇಳಿದಾಗ, ಆಂಬುಲೆನ್ಸ್ ಸ್ಥಿತಿಗತಿ ಸೇರಿದಂತೆ ಎಲ್ಲದರ ಬಗ್ಗೆಯೂ ವರದಿಯನ್ನು ಡೀಸಿಗೆ ನೀಡುವಂತೆ ಸಚಿವರು ಸೂಚಿಸಿದರು.
ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ತಮ್ಮ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಹೇಳಿಕೊಂಡರು. ಅಧಿಕಾರಿ ಉತ್ತರಿಸಿ ಎಲ್ಲ ಕಡೆ ನೀರು ಬರ್ತಾ ಇದೆ ಎಂದಾಗ, ಆಕ್ಷೇಪಿಸಿದ ಶಾಸಕರು 187 ಟ್ಯಾಂಕ್ ಇದೆ, ಎಷ್ಟು ಕಡೆ ನೀರು ಬರ್ತಿದೆ ಎಂದು ಪ್ರಶ್ನೆ ಮಾಡಿದರು. 50 ಕಡೆ ನೀರು ಬರ್ತಿರೋದನ್ನು ಖಚಿತ ಪಡಿಸಿದ್ದೇನೆ ಎಂದಾಗ, ಉಳಿದ ಕಡೆ ನೀರು ಬರೋದಿಲ್ವಾ ಎಂದರು ಕೋಟ್ಯಾನ್. ಯಾಕ್ರೀ ನಿರ್ಲಕ್ಷ್ಯ ಮಾಡ್ತೀರಿ, ಎಲ್ಲಿಯೂ ನೀರಿನ ಸಮಸ್ಯೆ ಆಗಲೇಬಾರದು ಎಂದ್ರು ಉಸ್ತುವಾರಿ. ಸಭೆಯಲ್ಲಿ ಸ್ಪೀಕರ್ ಯುಟಿ ಖಾದರ್, ಜಿಲ್ಲಾಧಿಕಾರಿ ಮುಹಿಲನ್, ಕಮಿಷನರ್ ಕುಲದೀಪ್ ಜೈನ್, ಎಸ್ಪಿ ರಿಷ್ಯಂತ್ ಇದ್ದರು.
Dinesh Gundu Rao slams officers at Jilla Panchyath over being negligence in Mangalore.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm