ಬ್ರೇಕಿಂಗ್ ನ್ಯೂಸ್
01-11-20 08:59 pm Mangaluru Correspondent ಕರಾವಳಿ
ಮಂಗಳೂರು, ನ.1: ಪ್ರತ್ಯೇಕ ತುಳು ರಾಜ್ಯಕ್ಕಾಗಿ ಬಾಂಬ್ ಸ್ಫೋಟ ಮಾಡಿ ಜನರನ್ನು ಪ್ರಚೋದಿಸಬೇಕೆಂದು ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಹೇಳುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಪ್ರತ್ಯೇಕ ತುಳು ರಾಜ್ಯಕ್ಕಾಗಿ ಹೋರಾಟ ಭುಗಿಲೇಳಬೇಕು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ‘ಬ್ಲಾಸ್ಟ್’ ಮಾಡಬೇಕು. ಟಯರ್ಗಳಿಗೆ ಬೆಂಕಿ ಹಚ್ಚಬೇಕು. ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲು ಸೇರಿದಂತೆ ರಾಜಕೀಯ ನಾಯಕರಿಗೆಲ್ಲ ಹಿಗ್ಗಾಮುಗ್ಗ ಬೈಯ್ಯಬೇಕು ಎಂದು ಹೇಳುತ್ತಿರುವುದು ಆಡಿಯೋದಲ್ಲಿದೆ. ತುಳುವಿನಲ್ಲಿ ಯಾರೊಂದಿಗೋ ಮಾತನಾಡುತ್ತಿರುವ ವೇಳೆ ಈ ಆಡಿಯೋ ರೆಕಾರ್ಡ್ ಮಾಡಲಾಗಿದ್ದು ಉದ್ದೇಶಪೂರ್ವಕ ಇದನ್ನು ರೆಕಾರ್ಡ್ ಮಾಡಿ ಜಾಲತಾಣದಲ್ಲಿ ಬಿಡಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ತುಳು ರಾಜ್ಯಕ್ಕಾಗಿ ಹೋರಾಟ ಆದಲ್ಲಿ ಅಕಾಡಮಿಯವರನ್ನು ಕರೆದು ಸರಕಾರದ ಕಡೆಯಿಂದ ಮಾತುಕತೆ ನಡೆಸುತ್ತಾರೆ. ಆಗ ನಾವು ಹೋರಾಟಗಾರರನ್ನು ಸಮಾಧಾನಿಸಲು ಬೇರೆ ದಾರಿ ಇಲ್ಲ. ತುಳು ರಾಜ್ಯ ಘೋಷಣೆಯೇ ಮಾಡಬೇಕು ಎಂದು ಹೇಳಬಹುದು. ಹೀಗೆಂದು ದಯಾನಂದ್ ಕತ್ತಲ್ಸಾರ್ ಮಾತನಾಡಿದ್ದಾರೆ ಎನ್ನಲಾಗುವ ಆಡಿಯೋ ಇದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿದೆ.

ಸರಕಾರದ ಅಕಾಡಮಿಯ ಅಧ್ಯಕ್ಷರಾಗಿರುವ ವ್ಯಕ್ತಿಯೊಬ್ಬರು ಹೀಗೆ ಹಿಂಸೆಗೆ ಪ್ರಚೋದಿಸುವ ರೀತಿ ಹೇಳಿಕೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಯಾನಂದ ಕತ್ತಲ್ಸಾರ್, ಅದು ತನ್ನದೇ ಆಡಿಯೋ.. ಆದರೆ ಅದನ್ನು ಉದ್ದೇಶಪೂರ್ವಕ ಎಡಿಟ್ ಮಾಡಿ ಬಿಡಲಾಗಿದೆ. ಇದು ನನ್ನ ತೇಜೋವಧೆ ಮಾಡುವ ಪ್ರಯತ್ನ ಎಂದು ಹೇಳಿದ್ದಾರೆ.
ತಾನೇ ವೈರಲ್ ಮಾಡಿದ್ದಾಗಿ ಹೇಳಿಕೆ !
ಇದೇ ವೇಳೆ, ಆಡಿಯೋ ಪ್ರಸಾರವನ್ನು ತಾನೇ ಮಾಡಿದ್ದಾಗಿ ತುಳುನಾಡು ಟ್ರಸ್ಟ್ ಅಧ್ಯಕ್ಷ ಜಿ.ವಿ.ಎ ಸ್.ಉಳ್ಳಾಲ್ ಎಂಬವರು ಹೇಳಿದ್ದಾರೆ. ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ತುಳುನಾಡು ಸ್ಥಾಪನೆಗಾಗಿ ಈ ರೀತಿ ಪ್ರಚೋದನಾತ್ಮಕವಾಗಿ ನನ್ನ ಜೊತೆಯೇ ಮಾತನಾಡಿದ್ದು. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಹೀಗೆ ಮಾತನಾಡುವುದು ಸರಿಯಲ್ಲ. ಇದೇ ಕಾರಣಕ್ಕೆ ಈ ಮಾತುಕತೆಯ ಆಡಿಯೋವನ್ನು ವೈರಲ್ ಮಾಡಿದ್ದೇನೆ ಎಂದು ಜಿ.ವಿ.ಎಸ್.ಉಳ್ಳಾಲ್ ತಿಳಿಸಿದ್ದಾರೆ.
ತುಳು ಲಿಪಿ ವಿಚಾರವಾಗಿ ದಯಾನಂದ ಕತ್ತಲ್ಸಾರ್ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ಮಾಹಿತಿಗಾಗಿ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದೆ. ಕತ್ತಲ್ಸಾರ್ ಮಾತನಾಡುತ್ತಾ, ಪ್ರತ್ಯೇಕ ತುಳು ರಾಜ್ಯಕ್ಕಾಗಿ ತುಳುನಾಡು ಟ್ರಸ್ಟ್ ಮೂಲಕ ಹಿಂಸೆಗೆ ಇಳಿಯುವಂತೆ ಹೇಳಿದ್ದರು ಎಂದಿದ್ದಾರೆ.
Tulu Academy President Dayananda Kathalsar lands in trouble for controversial statement of stating to Blast Managluru to make it a complete Tulu speaking District. Audio of this has gone viral on social media.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 09:28 pm
HK News Desk
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm