ಬ್ರೇಕಿಂಗ್ ನ್ಯೂಸ್
13-06-23 05:56 pm Mangalore Correspondent ಕರಾವಳಿ
ಮಂಗಳೂರು, ಜೂನ್ 13: ರಾಜ್ಯ ಸರಕಾರದ ಉಚಿತ ಬಸ್ ಪ್ರಯಾಣದ ಯೋಜನೆಗೆ ಮಹಿಳೆಯರು ಫಿದಾ ಆಗಿದ್ದಾರೆ. ಮಲೆನಾಡು, ಉತ್ತರ ಕರ್ನಾಟಕ ಭಾಗದ ಜನರು ಸಾಗರೋಪಾದಿಯಾಗಿ ಬಸ್ಸಿನಲ್ಲಿ ಕರಾವಳಿಯತ್ತ ಬರುತ್ತಿದ್ದಾರೆ. ಸರ್ಕಾರಿ ಬಸ್ ಫುಲ್ ರಶ್ ಆಗುತ್ತಿದ್ದು, ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಜನಜಂಗುಳಿ ಏರ್ಪಟ್ಟಿದೆ.
ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಕ್ಷೇತ್ರಗಳಲ್ಲಿ ಭಾರೀ ರಶ್ ಏರ್ಪಟ್ಟಿದ್ದು ಜನಸಾಗರವೇ ಹರಿದು ಬರುತ್ತಿದೆ. ಮಹಿಳೆಯರು ಗುಂಪು ಗುಂಪಾಗಿ ಬಂದು ಸೇರುತ್ತಿದ್ದು, ಕೆಎಸ್ಸಾರ್ಟಿಸಿ ಬಸ್ಸುಗಳೆಲ್ಲ ಫುಲ್ ರಶ್ ಆಗಿದೆ. ಎರಡು ದಿನಗಳ ಹಿಂದಷ್ಟೇ ಸಾಮಾನ್ಯ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಯೋಜನೆ ಜಾರಿಯಾಗಿತ್ತು. ಅಷ್ಟರಲ್ಲೇ ಹಳ್ಳಿಗಾಡಿನ ಜನರು ಸರ್ಕಾರಿ ಬಸ್ ಹತ್ತ ತೊಡಗಿದ್ದಾರೆ. ಕೋಲಾರ, ಬೆಂಗಳೂರು, ಚಿತ್ರದುರ್ಗ, ತುಮಕೂರು ಅಲ್ಲದೆ, ಉತ್ತರ ಕರ್ನಾಟಕದ ಮಂದಿಯೂ ಅತ್ತಿತ್ತ ರಾಜ್ಯ ಸುತ್ತಲು ಆರಂಭಿಸಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಸರಕಾರಿ ಬಸ್ಸುಗಳೆಲ್ಲ ಫುಲ್ ರಶ್ ಆಗಿದ್ದು, ಪೂರ್ತಿ ತುಂಬಿಕೊಂಡೇ ಸಾಗುತ್ತಿವೆ.



ಧರ್ಮಸ್ಥಳಕ್ಕೆ ಬಂದು ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಬಸ್ಸುಗಳಲ್ಲಿಯೂ ಕಾಲಿಡುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ. ಎಲ್ಲ ಬಸ್ಸುಗಳಲ್ಲಿಯೂ ಪ್ರವಾಸಿ ಮಹಿಳೆಯರೇ ತುಂಬಿಕೊಂಡಿದ್ದು, ಸ್ಥಳೀಯ ಸಾಮಾನ್ಯ ಜನರಿಗೆ ಬಸ್ಸುಗಳಲ್ಲಿ ಪ್ರಯಾಣ ಮಾಡದ ಸ್ಥಿತಿ ಎದುರಾಗಿದೆ. ದೂರದ ಉತ್ತರ ಕರ್ನಾಟಕ ಭಾಗದಿಂದ ಕರಾವಳಿಗೆ ಬರುವುದಕ್ಕೆ ಸಾಮಾನ್ಯವಾಗಿ ಸಾವಿರಾರು ರೂಪಾಯಿ ಬೇಕಿದ್ದರೆ, ಈಗ ಉಚಿತ ಪ್ರಯಾಣದಿಂದಾಗಿ ಹಳ್ಳಿ ಮಹಿಳೆಯರು ಫಿದಾ ಆದಂತಿದ್ದಾರೆ. ಮಕ್ಕಳು, ಇಡೀ ಕುಟುಂಬವನ್ನು ಕಟ್ಟಿಕೊಂಡು ದೇವರ ದರ್ಶನ ಮಾಡ್ಕೊಂಡು ಬರೋಣ ಎಂದು ಜನರೆಲ್ಲ ಯಾತ್ರೆಗೆ ಹೊರಟು ನಿಂತಿದ್ದಾರೆ.
ಜನರ ದಟ್ಟಣೆಯಿಂದಾಗಿ ಪುಣ್ಯಕ್ಷೇತ್ರಗಳು, ಪ್ರವಾಸಿ ಕೇಂದ್ರಗಳಲ್ಲಿ ವ್ಯಾಪಾರವೂ ಜೋರಾಗಿದೆ. ವ್ಯಾಪಾರ ವಹಿವಾಟಿನಿಂದ ಮಾರುಕಟ್ಟೆ ಮತ್ತೆ ಚಿಗಿತುಕೊಂಡು ಹಣದ ಚಲಾವಣೆ ಬಿರುಸು ಪಡೆದುಕೊಳ್ಳಬಹುದೆಂಬ ನಿರೀಕ್ಷೆಯೂ ಗರಿಗೆದರಿದೆ. ಸಾಮಾನ್ಯವಾಗಿ ಕುಕ್ಕೆ, ಧರ್ಮಸ್ಥಳಗಳಲ್ಲಿ ವೀಕೆಂಡ್ ದಿನಗಳಲ್ಲಿ ಜನರ ಸಂಖ್ಯೆ ಹೆಚ್ಚಿರುತ್ತದೆ. ಇದೀಗ ವಾರದ ನಡುವೆಯೂ ಜನ ಬರಲಾರಂಭಿಸಿದ್ದು ಜನರು ಉಚಿತ ಬಸ್ ನೆಪದಲ್ಲಿ ಎಲ್ಲೆಂದರಲ್ಲಿ ಪ್ರವಾಸ ಹೊರಟಿದ್ದಾರೆ.
Free rides for women in KSRTC, passengers for Dharmasthala and Kukke Temple packed.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
28-06-26 09:38 pm
HK News Staffer
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am