ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ ದರೋಡೆ ; ಬೈಕಿನಲ್ಲಿ ಬಂದ ದುಷ್ಕರ್ಮಿಗಳ ಕೃತ್ಯ, ಗುಂಡಿನ ದಾಳಿ ನಡೆಸಿ 4-5 ಕೋಟಿ ಮೌಲ್ಯದ ಚಿನ್ನ- ವಜ್ರ ರಾಬರಿ

28-12-25 05:19 pm       HK News Desk   ಕ್ರೈಂ

ಮೈಸೂರು ಹೊರವಲಯದ ಹುಣಸೂರಿನಲ್ಲಿ ಹಾಡಹಗಲೇ ಜುವೆಲ್ಲರಿಗೆ ನುಗ್ಗಿದ ಆಗಂತುಕರು ಚಿನ್ನ ಮತ್ತು ವಜ್ರಾಭರಣ ದರೋಡೆ ಮಾಡಿದ್ದಾರೆ. 

ಮೈಸೂರು, ಡಿ.28 : ಮೈಸೂರು ಹೊರವಲಯದ ಹುಣಸೂರಿನಲ್ಲಿ ಹಾಡಹಗಲೇ ಜುವೆಲ್ಲರಿಗೆ ನುಗ್ಗಿದ ಆಗಂತುಕರು ಚಿನ್ನ ಮತ್ತು ವಜ್ರಾಭರಣ ದರೋಡೆ ಮಾಡಿದ್ದಾರೆ. 

ಜುವೆಲ್ಲರಿ ಮ್ಯಾನೇಜರ್ ಮೇಲೆ ಗುಂಡಿನ ದಾಳಿ ನಡೆಸಿ ಸುಮಾರು 4-5 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಕಳ್ಳರು ದರೋಡೆ ಮಾಡಿದ್ದಾರೆ. ಬೈಕಿನಲ್ಲಿ ಬಂದ ಐವರು ಮುಸುಕುಧಾರಿಗಳು ಮಧ್ಯಾಹ್ನ ವೇಳೆಗೆ ಜುವೆಲ್ಲರಿ ಶಾಪ್​ಗೆ ನುಗ್ಗಿದ್ದು ಕೆಲವೇ ಕ್ಷಣಗಳಲ್ಲಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ವೇಳೆ, ಓರ್ವ ದರೋಡೆಕೋರ ಹೆಲ್ಮೆಟ್ ಬಿಟ್ಟು ಪರಾರಿಯಾಗಿದ್ದಾನೆ. 

ದರೋಡೆ ವೇಳೆ ಜುವೆಲ್ಲರಿಯಲ್ಲಿದ್ದ ಮ್ಯಾನೇಜರ್ ಅಜ್ಗರ್ ಮೇಲೆ ಗುಂಡಿನ ದಾಳಿ ನಡೆಸಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುಣಸೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಸಿಸಿಟಿವಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಹುಣಸೂರು ಬಸ್​​ ನಿಲ್ದಾಣದ ಹಿಂದಿರುವ ಸ್ಕೈ ಗೋಲ್ಸ್ ಅಂಡ್ ಡೈಮಂಡ್ ಜುವೆಲ್ಲರಿಯಲ್ಲಿ ದರೋಡೆಯಾಗಿದೆ.

In a shocking daylight robbery in Hunsur on the outskirts of Mysuru, a five-member masked gang stormed into Sky Gold and Diamond Jewellery and looted gold and diamond ornaments worth ₹4–5 crore. The robbers, who arrived on motorcycles, opened fire at the store manager, Azgar, who narrowly escaped death.