ಧನದಾಹಕ್ಕೆ ನವ ವಿವಾಹಿತೆ ಗಾನವಿ ಬಲಿ ಪ್ರಕರಣ ; ತಲೆಮರೆಸಿಕೊಂಡಿದ್ದ ಗಂಡನೂ ನಾಗಪುರದಲ್ಲಿ ಆತ್ಮಹತ್ಯೆ! ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ, ಮದುವೆಯಾಗಿ ಒಂದೂವರೆ ತಿಂಗಳಲ್ಲೇ ದುರಂತ 

27-12-25 02:28 pm       Bangalore Correspondent   ಕ್ರೈಂ

ಗಂಡನ ಧನದಾಹಕ್ಕೆ ನವವಿವಾಹಿತೆ ಗಾನವಿ ಬಲಿಯಾದ ಪ್ರಕರಣ ಭೀಕರ ತಿರುವು ಪಡೆದುಕೊಂಡಿದೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ಕುಟುಂಬದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಲೇ ತಲೆಮರೆಸಿಕೊಂಡಿದ್ದ ಆರೋಪಿ ಪತಿ ಸೂರಜ್ ಮಹಾರಾಷ್ಟ್ರದ ನಾಗಪುರದಲ್ಲಿ ನೇಣಿಗೆ ಶರಣಾಗಿದ್ದಾನೆ. ಸೂರಜ್ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಬೆಂಗಳೂರು, ಡಿ.27 : ಗಂಡನ ಧನದಾಹಕ್ಕೆ ನವವಿವಾಹಿತೆ ಗಾನವಿ ಬಲಿಯಾದ ಪ್ರಕರಣ ಭೀಕರ ತಿರುವು ಪಡೆದುಕೊಂಡಿದೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ಕುಟುಂಬದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಲೇ ತಲೆಮರೆಸಿಕೊಂಡಿದ್ದ ಆರೋಪಿ ಪತಿ ಸೂರಜ್ ಮಹಾರಾಷ್ಟ್ರದ ನಾಗಪುರದಲ್ಲಿ ನೇಣಿಗೆ ಶರಣಾಗಿದ್ದಾನೆ. ಸೂರಜ್ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 

ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆ ಈಗ ಇಡೀ ಕುಟುಂಬದ ದುರಂತ ಅಂತ್ಯಕ್ಕೆ ಕಾರಣವಾಗಿದೆ. ಗಾನವಿ ಸಾವಿನ ನಂತರ ಆಕೆಯ ಕುಟುಂಬಸ್ಥರು ಪತಿ ಸೂರಜ್‌ ವಿರುದ್ಧ ಆರೋಪ ಮಾಡಿದ್ದರು‌. ಇದರ ಬೆನ್ನಲ್ಲೇ ನಾಪತ್ತೆಯಾಗಿದ್ದ ಪತಿ ಸೂರಜ್, ತಾಯಿ ಜಯಂತಿ ಮತ್ತು ಸಹೋದರ ಸಂಜಯ್ ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿದ್ದರು. ಅಲ್ಲಿರುವಾಗಲೇ ಸೂರಜ್ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. 

ಮಗನ ಜೊತೆಯಲ್ಲೇ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು ಸದ್ಯ ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅತ್ತ ಗಾನವಿ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ರೆ, ಇತ್ತ ಸೂರಜ್ ಮನೆಯವರ ಕಥೆಯೂ ಹಾಗೇ ಆಗಿದೆ. 

ಗಾನವಿ ಆತ್ಮಹತ್ಯೆ ನಂತರ, ಆಕೆಯ ಪೋಷಕರು ಮತ್ತು ಸಂಬಂಧಿಕರು ಸೂರಜ್ ಕುಟುಂಬಕ್ಕೆ ಧಿಕ್ಕಾರ ಕೂಗಿದ್ದರಲ್ಲದೆ, ಆತ ನಪುಂಸಕ ಎಂದು ಜರೆದಿದ್ದರು. ಅವಮಾನ ಮತ್ತು ಟೀಕೆಗಳನ್ನು ತಡೆದುಕೊಳ್ಳಲಾಗದೆ ಮನನೊಂದು ಸೂರಜ್ ಮತ್ತು ಆತನ ತಾಯಿ ಈ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗಿದೆ.

ವಿದ್ಯಾರಣ್ಯಪುರದ ಸೂರಜ್ ಮತ್ತು ಗಾನವಿ ಮದುವೆ ಅಕ್ಟೋಬರ್ 29ರಂದು ನಡೆದಿತ್ತು. ನವೆಂಬರ್ 23ರಂದು ಅರಮನೆ ಮೈದಾನದಲ್ಲಿ ಬರೋಬ್ಬರಿ 40 ಲಕ್ಷ ರೂ. ಖರ್ಚು ಮಾಡಿ ಅದ್ದೂರಿ ರಿಸೆಪ್ಷನ್ ಮಾಡಿದ್ದರು. ಆನಂತರ ಶ್ರೀಲಂಕಾಕ್ಕೆ ಹನಿಮೂನ್ ತೆರಳಿದ್ದವರು ಅರ್ಧದಲ್ಲೇ ಹಿಂದಕ್ಕೆ ಬಂದಿದ್ದರು. ಇದರ ಬೆನ್ನಲ್ಲೇ ಎರಡು ಕುಟುಂಬಗಳ ಮಧ್ಯೆ ವಿರಸ ಮೂಡಿತ್ತು. ಗಾನವಿ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದು ಸಾವಿಗೆ ಶರಣಾಗಿದ್ದರು.  ದುರಂತ ಅಂದ್ರೆ, ಮದುವೆಯಾಗಿ ಒಂದೂವರೆ ತಿಂಗಳು ಕಳೆಯೋದ್ರಲ್ಲೇ ಇಬ್ಬರೂ ಮಸಣದ ಹಾದಿ ಹಿಡಿದಿದ್ದಾರೆ. ಗಂಡನ ಕುಟುಂಬದ ಧ‌ನದಾಹ, ವರದಕ್ಷಿಣೆ ಕಿರುಕುಳಕ್ಕೆ ಎರಡೂ ಜೀವಗಳು ಬಲಿಯಾಗಿವೆ.

In a shocking turn of events just 45 days after marriage, newlywed Ganavi died by suicide following alleged dowry harassment by her husband Sooraj and his family in Bengaluru. As outrage grew, Sooraj—who had gone into hiding—died by suicide in Nagpur, while his mother remains critical after attempting the same. The case has now turned into a double tragedy, exposing the devastating consequences of dowry demands and domestic cruelty.