ಬ್ರೇಕಿಂಗ್ ನ್ಯೂಸ್
26-12-25 09:38 pm HK News Desk ಕರ್ನಾಟಕ
ಹುಬ್ಬಳ್ಳಿ, ಡಿ 26 : ಚಿತ್ರದುರ್ಗದ ಹಿರಿಯೂರು-ಶಿರಾ ನಡುವಿನ ಜವನಗೊಂಡಹಳ್ಳಿ ಬಳಿ ಸಂಭವಿಸಿದ್ದ ಬಸ್ ದುರಂತದಲ್ಲಿ ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಶಿಗ್ಗಾವಿಯ ಮೊಹಮ್ಮದ್ ರಫೀಕ್ (35) ಚಿಕಿತ್ಸೆ ಫಲಿಸದೆ ಇಂದು ಕೆಎಂಸಿಆರ್‌ಐನಲ್ಲಿ ಅಸು ನೀಗಿದ್ದು, ಒಟ್ಟೂ ಮೃತರ ಸಂಖ್ಯೆ 7ಕ್ಕೆ ಏರಿದೆ.
ಗುರುವಾರ ತಡರಾತ್ರಿ ಲಾರಿಯೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ವೇಳೆ ಬಸ್ಸಿನ ಚಾಲಕ ಮೊಹಮ್ಮದ್ ರಫೀಕ್ ಗಾಯಗೊಂಡು, ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕ್ಲೀನರ್ ಸಾಧಿಕ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಕರು ತಿಳಿಸಿದರು.





ಚಾಲಕನ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಮೃತ ಮೊಹಮ್ಮದ್ ರಫೀಕ್ ಸಹೋದರಿ ಕಣ್ಣೀರು ಹಾಕಿದ್ದು, "ಮನೆಯ ಯಜಮಾನನನ್ನೇ ಕಳೆದುಕೊಂಡಿದ್ದೇವೆ. ನಮ್ಮ ಅಣ್ಣನೇ ನಮಗೆಲ್ಲ ಆಸರೆಯಾಗಿದ್ದ. ಕುಟುಂಬವನ್ನು ಮುನ್ನಡೆಸುತ್ತಿದ್ದ. ಅಪಘಾತದಲ್ಲಿ ಬದುಕುಳಿದಾಗ ಸ್ವಲ್ಪ ಸಮಾಧಾನ ಆಗಿತ್ತು. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ನಿನ್ನೆ ಕರೆದುಕೊಂಡು ಬಂದಿದ್ದೆವು. ಆದರೆ ರಾತ್ರಿ ಆಪರೇಷನ್ ಮಾಡುವವರೆಗೂ ಮಾತನಾಡುತ್ತಾ ಇದ್ದರು. ರಾತ್ರಿ 12:30ಕ್ಕೆ ಆಪರೇಷನ್ಗೆ ಕರೆದುಕೊಂಡು ಹೋಗಿದ್ದರು. ಆಪರೇಷನ್ ಮುಗಿದ ಮೇಲೆ ಕೇವಲ ಉಸಿರಾಟ ಇತ್ತು. ಆದರೆ ಇಂದು ಬೆಳಗ್ಗೆ 6 ಗಂಟೆಗೆ ನಮ್ಮ ಅಣ್ಣ ಸಾವನ್ನಪ್ಪಿದ್ದಾರೆ" ಎಂದು ಕಣ್ಣೀರು ಹಾಕಿದರು.
ಘಟನೆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಚಾಲಕ ಮೊಹಮ್ಮದ್ ರಫೀಕ್ರನ್ನು ಮಾಧ್ಯಮದವರು ಮಾತನಾಡಿಸಿದ್ದಾಗ, "ಲಾರಿಯು ಬಸ್ನ ಡಿಸೇಲ್ ಟ್ಯಾಂಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ನಮ್ಮ ಬಸ್ನಲ್ಲಿ ಇಬ್ಬರು ಮಕ್ಕಳಿದ್ದರು. ಶಿವಮೊಗ್ಗ, ಕುಮಟಾ ಮೂಲಕ ಗೋಕರ್ಣಕ್ಕೆ ತೆರಳುತ್ತಿದ್ದೆವು. ದಾರಿ ಮಧ್ಯೆ, ಊಟ ಮುಗಿಸಿ ಪ್ರಯಾಣ ಮುಂದುವರೆಸಿದ್ದೆವು. ಆಗ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ" ಎಂದು ತಿಳಿಸಿದ್ದರು.
ಲಾರಿ ಚಾಲಕ ನಿರ್ಲಕ್ಷತ್ರ್ಯ, ಅತಿವೇಗ, ನಿದ್ರಾವಸ್ಥೆ, ಕುಡಿದ ಅಮಲು ಇನ್ಯಾವುದೇ ಕಾರಣದಿಂದ ನಿಯಂತ್ರಣ ತಪ್ಪಿದೆ ಏನುವುದಾದರೆ, ಲಾರಿಯು ಡಿವೈಡರ್ ದಾಟಿ ಹೋಗಿರುವುದು ನೋಡಿದರೆ ಇದು ಹೇಗೆ ನಡೆದಿರಬಹುದು ಎಂಬ ಬಗ್ಗೆ ಚರ್ಚೆ ಆರಂಭವಾಗುತ್ತದೆ. ಅಲ್ಲದೇ ಹರಿಯಾಣ ಪಾಸಿಂಗ್ ಲಾರಿಗೆ ಉತ್ತರ ಪ್ರದೇಶ ಮೂಲದ ಚಾಲಕ ಒಬ್ಬನೇ ಅಲ್ಲಿಂದ ಚಾಲನೆ ಮಾಡುತ್ತಿದ್ದನೆಂದರೇ ಕ್ಲೀನರ್ ಏಕೆ ಇರಲಿಲ್ಲವೆಂಬುದು ಒಂದು ಪ್ರಶ್ನೇಯಾಗಿದೆ.ಆ ಲಾರಿಯಲ್ಲಿಏನಿತ್ತು? ಅದು ಎಲ್ಲಿಂದ ಬಂದಿದೆ? ಎಲ್ಲಿಗೇ ಹೋಗುತ್ತಿತ್ತು? ಅದರ ಮಾಲೀಕರು ಯಾರೆಂಬುದು ಇಲ್ಲಿವರೆಗೆ ತಿಳಿದಿಲ್ಲ.
ಸೀಬರ್ಡ್ ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರನ್ನ ರಕ್ಷಿಸುವಲ್ಲಿ ಶಾಲಾ ಮಕ್ಕಳಿರುವ ಬಸ್ ಚಾಲಕನ ಪಾತ್ರ ಮಹತ್ವದ್ದಾಗಿದ್ದು, ದೊಡ್ಡ ಅಪಾಯಕ್ಕೆ ಸಿಲುಕುವ ಈ ಶಾಲಾ ಮಕ್ಕಳ ಬಸ್ ತಪ್ಪಿಸಿದ್ದೇ ಸೀಬರ್ಡ್ ಬಸ್ ಚಾಲಕ ಎನ್ನುತ್ತಾರೆ ಸ್ಥಳೀಯರು. ಸೀಬರ್ಡ್ ಬಸ್ ಜೆಜಿಹಳ್ಳಿ ಸಮೀಪದ ಎಚ್.ಪಿ ಪ್ರೆಟ್ರೋಲ್ ಬಂಕ್ ಮುಂಭಾಗಕ್ಕೆ ಬಂದಾಗ ಬೆಂಗಳೂರು ದಾಸರಹಳ್ಳಿ ಶಾಲಾ ಮಕ್ಕಳ ಪ್ರವಾಸದ ಬಸ್‌ನ್ನು ಓವರ್ ಟೆಕ್ ಮಾಡಿದ್ದು, ಕೇವಲ ನೂರು ಮೀಟರ್ ಅಂತರದಲ್ಲಿಯೇ ಸೀಬರ್ಡ್ ಬಸ್‌ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದು ಬೆಂಕಿ ಹಚ್ಚಿಕೊಂಡು ದೊಡ್ಡ ಅನಾಹುತಕ್ಕೆ ಕಾರಣ ಆಗಿದೆ. ಒಂದು ವೇಳೆ ಓವರ್ ಟೆಕ್ ಮಾಡದಿದ್ದರೆ, ಕಂಟೈನರ್ ಲಾರಿ ನೇರ ಶಾಲಾ ಮಕ್ಕಳಿರುವ ಬಸ್‌ಗೆ ಡಿಕ್ಕಿ ಪಡಿಸುವ ಎಲ್ಲಾಸಾಧ್ಯತೆಯಿದ್ದು, ಹೆಚ್ಚಿನ ಅನಾಹುತವು ಸಂಭವಿಸಬಹುದಿತ್ತು. ಆದರೆ ಈ ಓವರ್ ಟೆಕ್ ಮಾಡಿದ್ದೆ, ಅವರು ದೊಡ್ಡ ಅಪಾಯ ದಿಂದ ಪಾರಾಗಲು ಸಾಧ್ಯವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
The death toll in the Chitradurga bus accident has risen to seven after Seabird bus driver Mohammad Rafiq (35) of Shiggaon, who was critically injured, passed away at KIMS Hospital in Hubballi on Thursday. The accident occurred near Javanagondanahalli on the Hiriyur–Sira stretch when a lorry rammed into the bus, causing it to catch fire and burn completely. While Rafiq battled for life after undergoing surgery, he succumbed early Friday morning. His family remains inconsolable.
15-04-26 03:15 pm
HK News Staffer
ದಾವಣಗೆರೆ ಗದ್ದಲಕ್ಕೆ ಮತ್ತೊಂದು ತಲೆದಂಡ ; ಸಿಎಂ ರಾಜ...
14-04-26 02:04 pm
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
15-04-26 01:18 pm
HK News Staffer
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
15-04-26 05:29 pm
HK News Staffer
ಚಿಕ್ಕೋಡಿಯಲ್ಲಿ ಮಾನಗೇಡಿ ಹತ್ಯೆ; ಪತಿಯನ್ನು ಬಿಟ್ಟು...
15-04-26 05:03 pm
ಕೌಟುಂಬಿಕ ಕಲಹ ; 14 ವರ್ಷದ ಮಗಳನ್ನು ಉಸಿರುಗಟ್ಟಿಸಿ...
14-04-26 11:16 pm
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am