'ಶಕ್ತಿ' ಯೋಜನೆ ಖಾಸಗಿ ಬಸ್ ಗಳಿಗೆ ವಿಸ್ತರಣೆ ಸಾಧ್ಯವಿಲ್ಲ ; ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ 

11-06-23 09:41 pm       Mangalore Correspondent   ಕರಾವಳಿ

ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆ ಸರಕಾರಿ ಬಸ್ಸಿಗೆ ಸೀಮಿತ. ಅದನ್ನು ಖಾಸಗಿ ಬಸ್ಸುಗಳಿಗೆ ವಿಸ್ತರಣೆ ಮಾಡಲು ಆಗಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟ ಪಡಿಸಿದ್ದಾರೆ. 

ಮಂಗಳೂರು, ಜೂನ್ 11: ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆ ಸರಕಾರಿ ಬಸ್ಸಿಗೆ ಸೀಮಿತ. ಅದನ್ನು ಖಾಸಗಿ ಬಸ್ಸುಗಳಿಗೆ ವಿಸ್ತರಣೆ ಮಾಡಲು ಆಗಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟ ಪಡಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳದ್ದೇ ಪ್ರಾಬಲ್ಯ ಇರುವುದರಿಂದ ಫ್ರೀ ಯೋಜನೆ ಖಾಸಗಿಯವರಿಗೂ ವಿಸ್ತರಣೆ ಮಾಡಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ನಾವು ಘೋಷಣೆ ಮಾಡಿದಾಗ ಈ ಯೋಜನೆ ಆಗುತ್ತಾ ಇಲ್ವಾ ಎಂದು ಹಲವರು ಕೇಳಿದ್ದರು. ಕಾಂಗ್ರೆಸ್ ಸುಮ್ಮನೆ ಘೋಷಣೆ ಮಾಡುತ್ತಿದೆ ಎಂದೂ ಹೇಳಿದ್ದರು. ಆದರೆ ಈ ಯೋಜನೆ ಸರ್ಕಾರಿ ಬಸ್ ಗಳಿಗೆ ಮಾತ್ರ ಸಿಮೀತವಾಗಿದೆ. ಬರೀ ಮಂಗಳೂರಿಗೆ ಖಾಸಗಿ ಬಸ್ ಫ್ರೀ ಕೊಡೋಕೆ ಆಗಲ್ಲ. ವಿಸ್ತರಣೆ ಮಾಡಿದರೆ ಇಡೀ ಕರ್ನಾಟಕಕ್ಕೆ ನೀಡಬೇಕು. ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ‌

ಆರ್ ಎಸ್ ಎಸ್ ಗೆ ಭೂಮಿ ನೀಡಿರುವ ಕುರಿತು ತನಿಖೆ ಮಾಡಬೇಕೆಂಬ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಸರ್ಕಾರಿ ಭೂಮಿಯನ್ನು ಸರಿಯಾದ ಉದ್ದೇಶಕ್ಕಾಗಿ ನೀಡಬೇಕು. ಅರ್ಹತೆ ಇರುವ ಸಂಘ-ಸಂಸ್ಥೆಗಳು ತೆಗೆದುಕೊಳ್ಳಬೇಕು. ನಾನು ಹೇಳಿರುವ ಹೇಳಿಕೆ ಎಲ್ಲರಿಗೂ ಅನ್ವಯ. ಕೇವಲ ಒಬ್ಬರಿಗೆ ಅಂತ ಹೇಳಿರೋದು ಅಲ್ಲ. ಸರ್ಕಾರಿ ಭೂಮಿ ಸರಿಯಾಗಿ ಬಳಕೆ ಆಗಬೇಕೆಂಬ ದೃಷ್ಟಿಯಿಂದ ಈ ಮಾತು ಹೇಳಿದ್ದೇನೆ ಎಂದರು.‌

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ವಹಿಸಿರೋದು ಹೆಮ್ಮೆಯ ವಿಚಾರ.‌ ಯೂತ್ ಕಾಂಗ್ರೆಸ್ ನಲ್ಲಿ ಇರುವಾಗಿನಿಂದಲೂ ಜಿಲ್ಲೆಯ ಜೊತೆ ಸಂಬಂಧ ಇದೆ. ಸ್ಥಳೀಯರೇ ಉಸ್ತುವಾರಿ ಆದರೆ ಒಳ್ಳೆಯದು. ಆದರೆ ಖಾದರ್ ಸಾಹೇಬ್ರು ಸಭಾಪತಿ ಆಗಿರೋದರಿಂದ ನನಗೆ ಜವಾಬ್ದಾರಿ ಸಿಕ್ಕಿದೆ‌ ಎಂದು ಹೇಳಿದ ದಿನೇಶ್ ಗುಂಡೂರಾವ್, ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ. ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಬೇಕು. ಪಕ್ಷಾತೀತ ಕೆಲಸ ಮಾಡೋದು ಪೊಲೀಸ್ ಇಲಾಖೆಯ ಮತ್ತು ಜಿಲ್ಲಾಡಳಿತದ ಜವಾಬ್ದಾರಿ. ಎಲ್ಲರ ಸಹಕಾರ ಪಡೆದು ಜಿಲ್ಲೆಯ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.

Free bus rides for women cannot be extended to private buses in Mangalore and Udupi Dinesh Gundu Rao. Taking to reporters, Mr. Rao said, “When this (guarantee) scheme was announced, nobody talked about private buses. We cannot extend free bus travel facility to private buses,” he said, and added that the government will consider the demand for running more ordinary and express KSRTC buses in Dakshina Kannada.