ಪ್ಯಾನ್ ಇಂಡಿಯಾ ಚಿತ್ರತಂಡಕ್ಕೆ ಕಾಡಿದ ಅನಾರೋಗ್ಯ ; ಬೆಂಗಳೂರು ಬಿಟ್ಟು ಕುತ್ತಾರು ಕೊರಗಜ್ಜನ ಸನ್ನಿಧಿಯಲ್ಲೇ ಮುಹೂರ್ತ !  

10-06-23 12:24 pm       Mangalore Correspondent   ಕರಾವಳಿ

ರಾಗಿನಿ ದ್ವಿವೇದಿ ನಟನೆಯ‌ ಹೊಸ ಪ್ಯಾನ್ ಇಂಡಿಯಾ ಚಿತ್ರದ ಮೂಹೂರ್ತವು ಬೆಂಗಳೂರಿನಲ್ಲಿ ನಿಗದಿಯಾಗಿದ್ದರೂ, ನಾಯಕಿ ಸೇರಿ ಪ್ರಮುಖರಿಗೆ ಅನಾರೋಗ್ಯ ಕಾಡಿದ ಬೆನ್ನಲ್ಲೇ ಚಿತ್ರತಂಡ ಈ ಮೊದಲು ಹರಕೆ ಹೊತ್ತಿದ್ದ ಕುತ್ತಾರು ಆದಿಸ್ಥಳ ಶ್ರೀರಕ್ತೇಶ್ವರಿ ಬೆರ್ಮೆರ್, ಏಳ್ವೆರ್ ಸಿರಿಗಳು, ಕೊರಗಜ್ಜ ಕ್ಷೇತ್ರದಲ್ಲೇ ಮುಹೂರ್ತವನ್ನು ಇಂದು ನಡೆಸಿದೆ. 

ಉಳ್ಳಾಲ, ಜೂ.10: ರಾಗಿನಿ ದ್ವಿವೇದಿ ನಟನೆಯ‌ ಹೊಸ ಪ್ಯಾನ್ ಇಂಡಿಯಾ ಚಿತ್ರದ ಮೂಹೂರ್ತವು ಬೆಂಗಳೂರಿನಲ್ಲಿ ನಿಗದಿಯಾಗಿದ್ದರೂ, ನಾಯಕಿ ಸೇರಿ ಪ್ರಮುಖರಿಗೆ ಅನಾರೋಗ್ಯ ಕಾಡಿದ ಬೆನ್ನಲ್ಲೇ ಚಿತ್ರತಂಡ ಈ ಮೊದಲು ಹರಕೆ ಹೊತ್ತಿದ್ದ ಕುತ್ತಾರು ಆದಿಸ್ಥಳ ಶ್ರೀರಕ್ತೇಶ್ವರಿ ಬೆರ್ಮೆರ್, ಏಳ್ವೆರ್ ಸಿರಿಗಳು, ಕೊರಗಜ್ಜ ಕ್ಷೇತ್ರದಲ್ಲೇ ಮುಹೂರ್ತವನ್ನು ಇಂದು ನಡೆಸಿದೆ. 

ಹಾರಿಝಾನ್ ಸ್ಟುಡಿಯೋ ಸಂಸ್ಥೆ ನಿರ್ಮಿಸುತ್ತಿರುವ ಇನ್ನೂ ನಾಮಕರಣವಾಗದ  ಪ್ರಾಡಕ್ಷನ್ ನಂ-2 ಚಿತ್ರದ ಮುಹೂರ್ತ ಇಂದು ಕುತ್ತಾರಿನಲ್ಲಿ ನಡೆಯಿತು.  ಚಿತ್ರದ ನಿರ್ದೇಶಕರು ಹಾಗೂ ತಾಂತ್ರಿಕ ತಂಡ ಇಂದು ಸ್ವಾಮಿ ಕೊರಗಜ್ಜನ ಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮುಹೂರ್ತ ಹಾಗೂ ಕ್ಲ್ಯಾಪಿಂಗ್ ನಡೆಸಿತು. ಮೂರು ತಿಂಗಳ ಹಿಂದೆ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಸೇರಿದಂತೆ, ನಿರ್ದೇಶಕರು ಹಾಗೂ ನಿರ್ಮಾಪಕರು ಇದೇ ಕ್ಷೇತ್ರದ ಸಂದರ್ಶನಕ್ಕೆ ಬಂದಿದ್ದಾಗ ಚಿತ್ರ ಮಾಡುವ ಸಂದರ್ಭ ಮುಹೂರ್ತವನ್ನು ಕೊರಗಜ್ಜನ ಎದುರೇ ನಡೆಸುವುದಾಗಿ ಹರಕೆ ಹೊತ್ತಿದ್ದರು. 

ಆದರೆ ಚಿತ್ರ ತಂಡದವರಿಗೆ ಮಂಗಳೂರಿಗೆ ಬರುವುದು ಕಷ್ಟ ಅಂದನಿಸಿದಾಗ, ಬೆಂಗಳೂರಿನಲ್ಲಿಯೇ ಚಿತ್ರದ ಮುಹೂರ್ತ ನಡೆಸುವುದಾಗಿ ತೀರ್ಮಾನಿಸಿ ದಿನವನ್ನು ನಿಗದಿಪಡಿಸಿತ್ತು. ವಿಪರ್ಯಾಸ ಎಂಬಂತೆ ಅದೇ ದಿನ ತಂಡದಲ್ಲಿರುವ ಪ್ರಮುಖರಿಗೆ ಅನಾರೋಗ್ಯ ಉಂಟಾಗಿ ಮುಹೂರ್ತ ನಡೆಸಲು ಸಾಧ್ಯವಾಗಿರಲಿಲ್ಲ. ಇದರಿಂದ ತಂಡ ವಿಮರ್ಶೆ ನಡೆಸಿ ಹಿಂದೆ ಹೊತ್ತ ಹರಕೆಯಂತೆ ಕುತ್ತಾರು ಕೊರಗಜ್ಜನ ಸಮ್ಮುಖದಲ್ಲೇ ಮುಹೂರ್ತ ನಡೆಸುವುದಾಗಿ ತೀರ್ಮಾನಿಸಿ ಇಂದು  ನಿರ್ದೇಶಕರು ಹಾಗು ತಾಂತ್ರಿಕ ತಂಡ ಸಾಂಕೇತಿಕವಾಗಿ ಮುಹೂರ್ತವನ್ನು ನಡೆಸಿತು.

ಬಾಲಿವುಡ್‍ನ ಲೆಜೆಂಡರಿ ನಟ ಶೇಖರ್ ಸುಮನ್ ಅವರ ಪುತ್ರ ಆಧ್ಯಾನ್ ಸುಮನ್ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಲಿದ್ದು, ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ನಾಯಕಿಯಾಗಿ, ಖ್ಯಾತ ನಟ ದಿ!ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ. ಮಹಾಂತೇಶ್ ಹಿರೇಮಠ್, ವಿಜಯ್ ಚಂದು, ಸಾಯಿಕುಮಾರ್  ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಟೋನಿ ಎ ರಾಜ್  ಸಂಸ್ಥೆಯ ನಿರ್ಮಾಪಕರಾಗಿದ್ದಾರೆ.

ಎಲ್ಲವೂ ದೈವ ಲೀಲೆಯೆಂದ ನಿರ್ದೇಶಕ

ಹಿಂದೆಯೇ ಮುಹೂರ್ತದ ದಿನ ನಿಗದಿ ಮಾಡಲಾಗಿತ್ತು. ಆದರೆ ದೈವಲೀಲೆ, ಕೆಲವು ಅಡೆತಡೆಗಳಿಂದ ಅಂದು ನೆರವೇರಿಸಲು ಸಾಧ್ಯವಾಗಲಿಲ್ಲ. ತಂಡದ ಪ್ರಮುಖರಿಗೆ ಅನಾರೋಗ್ಯದ ಸಮಸ್ಯೆ ಇದ್ದುದರಿಂದ ಇಂದು ಕೂಡ ಪ್ರಯಾಣ ಅಸಾಧ್ಯವಾಗಿದೆ. ನಟಿ ರಾಗಿಣಿ ದ್ವಿವೇದಿ ಶೂಟಿಂಗಲ್ಲಿ ಬ್ಯುಸಿ ಇರುವುದರಿಂದ ಬರಲು ಅನಾನುಕೂಲವಾಗಿದೆ. ಹೈದರಾಬಾದಿನಲ್ಲಿ ಚಿತ್ರದ ತೆಲುಗು ಅವತರಣಿಕೆ ಅನೌನ್ಸ್ ಈಗಾಗಲೇ ನಡೆದಿದೆ. ಚಿತ್ರ ನಾಲ್ಕು ಭಾಷೆಗಳಲ್ಲಿ ಮೂಡಿಬರಲಿದೆ. ಹರಕೆ ಹೊತ್ತ ಪ್ರಕಾರ ಮೊದಲನೇ ಮುಹೂರ್ತ ಕೊರಗಜ್ಜನ ಕ್ಷೇತ್ರದಲ್ಲಿ ನಡೆದಿದೆ.15 ದಿನಗಳಲ್ಲಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಚಿತ್ರದ ಟೈಟಲ್ ಲಾಂಚಿಂಗ್ ನಡೆಯಲಿದೆ. ಇದೊಂದು ಕ್ರೈಂ ಥಿಲ್ಲರ್ ಸಿನೆಮಾವಾಗಿದೆ ಎಂದು ನಿರ್ದೇಶಕ ಆರ್ಯನ್ ಮಾಧ್ಯಮಗಳಿಗೆ ತಿಳಿಸಿದರು.  
ನಿರ್ಮಾಪಕ ಟೋನಿ ಎ ರಾಜ್,  ಕ್ಯಾಮರಾಮೆನ್ ಚಂದ್ರಶೇಖರ್ ಕೆ.ಎಸ್, ಎಡಿಟರ್ ಎನ್.ಎಂ ವಿಶ್ವನಾಥ್, ಮ್ಯಾನ್ ಲಿಯೋ ಕ್ರಿಯೇಷನ್ಸ್ ನ  ದಿವಾಕರ್, ಶ್ರೀಧರ್ ಕಶ್ಯಪ್, ಅರವಿಂದ್ ದತ್ತಾ  ಉಪಸ್ಥಿತರಿದ್ದರು.

New Kannada Cinema in trouble with health issues, Actress Ragini Dwivedi and team visits Koragajja temple for Muhurtham in Mangalore.