ಬ್ರೇಕಿಂಗ್ ನ್ಯೂಸ್
31-10-20 11:58 am Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 31: ಸಂಸದ ನಳಿನ್ ಕುಮಾರ್ ರಾಜ್ಯಾಧ್ಯಕ್ಷರಾದ ಕಾರಣವೋ ಏನೋ, ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ನಗರದ ಓಶಿಯನ್ ಪರ್ಲ್ ಸ್ಟಾರ್ ಹೊಟೇಲಿನಲ್ಲಿ ನ.5ರಂದು ಈ ಸಭೆ ನಡೆಯಲಿದ್ದು, ಸಭೆಯಲ್ಲಿ ಸಿಎಂ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಪ್ರಕೋಷ್ಠದ ಸಂಚಾಲಕರು, ಕೋರ್ ಕಮಿಟಿ ಸದಸ್ಯರು, ವಿಭಾಗ ಪ್ರಭಾರಿಗಳು ಸೇರಿದಂತೆ ರಾಜ್ಯ ಘಟಕದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ 150ರಷ್ಟು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು ಪಕ್ಷದ ಸಂಘಟನಾತ್ಮಕ ನೆಲೆಯಲ್ಲಿ ವಿವಿಧ ವಿಚಾರಗಳು ಚರ್ಚೆಗೆ ಬರಲಿವೆ.


ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ, ಅದಕ್ಕೆ ತಯಾರಿ ವಿಚಾರಗಳು, ಸಂಸತ್ ಮತ್ತು ಶಾಸಕ ಸ್ಥಾನದ ಉಪ ಚುನಾವಣೆಗಳ ವಿಚಾರಗಳು, ಗೋಹತ್ಯೆ ವಿಚಾರದಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳು ಕೂಡ ಚರ್ಚೆಗೆ ಬರಲಿವೆ ಎನ್ನಲಾಗುತ್ತಿದೆ. ಬೆಳಗ್ಗೆ ಉದ್ಘಾಟನೆ, ಬಳಿಕ ಗೋಷ್ಠಿಗಳು ಇರಲಿವೆ.
ಉದ್ಘಾಟನಾ ಸಭೆಗೆ ಮಾತ್ರ ಮಾಧ್ಯಮಕ್ಕೆ ಪ್ರವೇಶ ನೀಡಲಿದ್ದು, ಉಳಿದಂತೆ ಗೋಷ್ಠಿ, ನಿರ್ಣಯಗಳ ಸಭೆಯಲ್ಲಿ ಮಾಧ್ಯಮ ನಿರ್ಬಂಧ ಇರಲಿದೆ. ಸಾಮಾನ್ಯವಾಗಿ ಬೆಂಗಳೂರು ಅಥವಾ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿದ್ದ ರಾಜ್ಯ ಕಾರ್ಯಕಾರಿಣಿ ಸಭೆ ಈ ಬಾರಿ ಮಂಗಳೂರಿನಲ್ಲಿ ಆಯೋಜಿಸಿದ್ದು, ಹೆಚ್ಚು ಹಾರಾಡುವ ಉತ್ತರ ಕರ್ನಾಟಕ ಭಾಗದ ಮುಖಂಡರಿಗೆ ಠಕ್ಕರ್ ನೀಡುವ ನಡೆ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ಬೆಳಗಾವಿ ಡಿಸಿಸಿ ಬ್ಯಾಂಕ್ ವಿವಾದ, ಬೆಳಗಾವಿ ಸಂಸತ್ ಉಪ ಚುನಾವಣೆ ವಿಚಾರದಲ್ಲಿ ಉತ್ತರ ಕರ್ನಾಟಕದ ಬಿಜೆಪಿ ನಾಯಕರಲ್ಲೇ ತಿಕ್ಕಾಟ ಏರ್ಪಟ್ಟಿದೆ. ಈ ನಡುವೆ, ಸಿಎಂ ಯಡಿಯೂರಪ್ಪ ಅವರನ್ನು ಬದಲಾಯಿಸಿ ಉತ್ತರ ಕರ್ನಾಟಕ ಭಾಗದವರನ್ನು ಸಿಎಂ ಮಾಡಬೇಕೆಂಬ ಕೂಗು ಕೂಡ ಇದೆ.
ಯತ್ನಾಳ್, ಉಮೇಶ್ ಕತ್ತಿಯಂಥವರು ಬಹಿರಂಗವಾಗೇ ಸಿಎಂ ಬದಲಿನ ಕೂಗು ಇಟ್ಟಿದ್ದಾರೆ. ಇವೆಲ್ಲದಕ್ಕೂ ಠಕ್ಕರ್ ನೀಡಲು ಬಿ.ಎಲ್.ಸಂತೋಷ್ ಮತ್ತು ನಳಿನ್ ಕುಮಾರ್ ಸಾರಥ್ಯದಲ್ಲಿ ಕಡಲ ತಡಿ ಮಂಗಳೂರಿನಲ್ಲಿ ಸಭೆ ಆಯೋಜಿಸಿದ್ದಾರೆ ಎನ್ನಲಾಗುತ್ತಿದೆ. ಆಮೂಲಕ ಪಕ್ಷದ ಹಿಡಿತ ತಮ್ಮಲ್ಲಿದೆ ಎನ್ನುವುದನ್ನೂ ತೋರಿಸುವ ತಂತ್ರಗಾರಿಕೆ ಇದರಲ್ಲಿ ಅಡಗಿರುವಂತಿದೆ.
Bjp State Meeting to be held in Mangalore for the first time in Ocean Pearl on Nov 5 under the leadership of Nalin Kumar Kateel where CM Yediyurappa, CT Ravi and many other top leaders will be present.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am