ಉಪ್ಪಿನಂಗಡಿ ; ಹಸುಗೂಸು ಸೇರಿ ಇಬ್ಬರು ಮಕ್ಕಳನ್ನು ಪಕ್ಕದ ಮನೆಯಲ್ಲಿ ಬಿಟ್ಟು ಹೋದ ದಂಪತಿ, ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದವರು ನಾಪತ್ತೆ 

06-06-23 12:59 pm       Mangalore Correspondent   ಕರಾವಳಿ

ಮನೆಯೊಂದರಲ್ಲಿ ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳನ್ನು ಬಿಟ್ಟು ದಂಪತಿ ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿ ಕರಾಯ ಬಳಿ ನಡೆದಿದೆ.

ಉಪ್ಪಿನಂಗಡಿ, ಜೂ.6:  ಮನೆಯೊಂದರಲ್ಲಿ ಒಂದು ತಿಂಗಳ ಹಸುಗೂಸು ಸಹಿತ ಇಬ್ಬರು ಮಕ್ಕಳನ್ನು ಬಿಟ್ಟು ದಂಪತಿ ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿ ಕರಾಯ ಬಳಿ ನಡೆದಿದೆ.

ಅಲೆಮಾರಿ ಜನಾಂಗದ ದಂಪತಿ ಕರಾಯದಲ್ಲಿ ಬುಟ್ಟಿ ಎಣೆಯುವ ಕೆಲಸ ಮಾಡಿಕೊಂಡಿದ್ದರು. ಮದ್ಯ ವ್ಯಸನಿಗಳಾದ ದಂಪತಿಗೆ ದಿನೇಶ ಎಂಬ ನಾಲ್ಕು ವರ್ಷದ ಮಗು ಮತ್ತು ಒಂದು ತಿಂಗಳ ಹೆಣ್ಣು ಮಗು ಇತ್ತು.

ಎರಡು ಮಕ್ಕಳನ್ನು ಜೂ.2ರಂದು ಕರಾಯ ಗ್ರಾಮದ ಫಾತಿಮಾ ಎಂಬವರ ಮನೆಯೊಂದರಲ್ಲಿ ಬಿಟ್ಟು ನಾವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದು ಹೋದ ದಂಪತಿಗಳು ವಾಪಸ್ ಆಗಲೇ ಇಲ್ಲ 

ಇದೀಗ ಫಾತಿಮಾ 2 ದಿನ ಕಳೆದರೂ ದಂಪತಿ ಕಾಣಿಸಿಕೊಳ್ಳದೆ ಇರುವುದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಮಕ್ಕಳನ್ನು ರವಿವಾರ ಪುತ್ತೂರಿನ ರಾಮಕೃಷ್ಣಾಶ್ರಮಕ್ಕೆ ಒಪ್ಪಿಸಿದ್ದಾರೆ.

ದಂಪತಿಯ ನಾಪತ್ತೆ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

Uppinangady couple missing after leaving thier baby and two children in neighbours house. The couple had stated that they are going to Wenlock hospital in Mangalore.