ಬ್ರೇಕಿಂಗ್ ನ್ಯೂಸ್
30-10-20 09:54 am Mangalore Reporter ಕರಾವಳಿ
ಮಂಗಳೂರು, ಅಕ್ಟೋಬರ್ 30 : ತುಳು ಚಿತ್ರನಟ, ರೌಡಿ ಶೀಟರ್ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ವೆಂಕಪ್ಪ ಯಾನೆ ವೆಂಕಟೇಶ್, ಪಬ್ಬು ಯಾನೆ ಪ್ರದೀಪ್ ಹಾಗೂ ಬಂಡಾಡಿ ಶರೀಫ್ ಬಂಧಿತ ಆರೋಪಿಗಳು. ಪ್ರಕರಣದ ಪ್ರಮುಖ ಆರೋಪಿಗಳಾದ ಸತೀಶ್ ಕುಲಾಲ್ ಮತ್ತು ಗಿರೀಶ್ ಎಂಬವರನ್ನು ಅಕ್ಟೋಬರ್ 25ರಂದು ಬಂಧಿಸಲಾಗಿತ್ತು. ಇವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು ಕೊಲೆ ಕೃತ್ಯದ ಕಾರಣ ಮತ್ತು ಬೆಂಬಲ ನೀಡಿದವರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರು ನೀಡಿದ ಮಾಹಿತಿ ಆಧರಿಸಿ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಕೂಡ ಕೋರ್ಟಿಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಕೊಲೆಯಾದ ದಿನ ಸುರೇಂದ್ರ ಬಂಟ್ವಾಳ್ ಮನೆಯಲ್ಲಿ ಒಂದು ಕೋಟಿ ರೂಪಾಯಿ ನಗದು ಇತ್ತು. ಮೈಯಲ್ಲಿ ಒಂದು ಕೆಜಿಯಷ್ಟು ಬಂಗಾರ ಇತ್ತು. ಹಣಕ್ಕಾಗಿಯೇ ಈ ಕೊಲೆ ನಡೆದಿದೆ ಎಂದು ಆತನ ತಾಯಿ ಮತ್ತು ತಮ್ಮ ಎಸ್ಪಿಗೆ ಲಿಖಿತ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ತನಿಖೆ ತೀವ್ರಗೊಳಿಸಲು ಬಂಟ್ವಾಳ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ, ಸುರೇಂದ್ರ ಬಂಟ್ವಾಳ್ ಬಳಿಯಿಂದ ಫೈನಾನ್ಸ್ ವ್ಯವಹಾರದಲ್ಲಿ ಕೋಟಿಗಟ್ಟಲೆ ಹಣ ಪಡೆದವರು ಇದ್ದಾರೆ. ಹೀಗೆ ಹಣ ಪಡೆದು ಮರಳಿಸದವರು ಕೂಡ ಈ ಕೊಲೆಯಲ್ಲಿ ಪಾತ್ರ ವಹಿಸಿರಬಹುದು ಎನ್ನುವ ಶಂಕೆಯಿದೆ. ಹೀಗಾಗಿ ಪೊಲೀಸರು ಸೂಕ್ತವಾಗಿ ವಿಚಾರಣೆ ನಡೆಸಿದರೆ ಬಹಳಷ್ಟು ಮಾಹಿತಿಗಳು ಹೊರಬೀಳಲಿದೆ. ಆರೋಪಿ ಸತೀಶ್ ಕುಲಾಲ್ ಪೊಲೀಸರ ವಿಚಾರಣೆಯಲ್ಲಿ ಬಹಳಷ್ಟು ಮಾಹಿತಿಗಳನ್ನು ಹೇಳಿದ್ದಾನೆ. ಹೀಗಾಗಿ ಇನ್ನೂ ಹಲವರು ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
The police arrested three persons in connection with the murder of rowdysheeter and Tulu film actor Surendra Bantwal. Totally 5 persons have been arrested so far.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am