ಬ್ರೇಕಿಂಗ್ ನ್ಯೂಸ್
29-10-20 04:10 pm Mangalore Reporter ಕರಾವಳಿ
ಪುತ್ತೂರು, ಅಕ್ಟೋಬರ್ 29: ಸುಳ್ಯ ತಾಲೂಕಿನ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಪಟ್ಟ ಪವಿತ್ರ ದೇವರಗುಂಡಿ ಫಾಲ್ಸ್ ಬಳಿ ಬೆಂಗಳೂರಿನ ಮಾಡೆಲ್ ಗಳು ಬಂದು ಬಿಕಿನಿ ಫೋಟೊಶೂಟ್ ಮಾಡಿಸಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ತಿಂಗಳ ಹಿಂದೆ ಗುಪ್ತವಾಗಿ ಬಂದು ಫೋಟೊ ಶೂಟ್ ಮಾಡಿಕೊಂಡಿದ್ದು ಈ ಫೋಟೊ, ವಿಡಿಯೋಗಳು ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದ ದೇವರಗುಂಡಿ ಜಲಪಾತ ಸನಿಹದಲ್ಲೇ ಇರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಿಸಿದ್ದಾಗಿದ್ದು, ಸಾಕ್ಷಾತ್ ಶಿವನೇ ಈ ಜಲಪಾತದಲ್ಲಿ ಸ್ನಾನಕ್ಕೆ ಆಗಮಿಸುತ್ತಿದ್ದರು ಎನ್ನುವ ನಂಬಿಕೆ ಸ್ಥಳೀಯ ಭಕ್ತರಲ್ಲಿದೆ.
ಇಂಥ ಪಾವಿತ್ರ್ಯ ಇರುವುದರಿಂದ ದೇವರಗುಂಡಿ ಫಾಲ್ಸ್ ನಲ್ಲಿ ಸ್ಥಳೀಯ ನಿವಾಸಿಗಳು ಸ್ನಾನ ಮಾಡುವುದಿಲ್ಲ. ಆದರೆ ಇದೀಗ ಬೆಂಗಳೂರಿನ ಬಿಕಿನಿ ಸುಂದರಿಯರು ಅರೆಬೆತ್ತಲಾಗಿ ದೇವರಗುಂಡಿ ಫಾಲ್ಸ್ ನಲ್ಲಿ ಪೋಟೋಶೂಟ್ ಮಾಡಿಸಿಕೊಂಡಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮಾಡೆಲ್ ಬೃಂದಾ ಅರಸ್ ಸೇರಿ ಇಬ್ಬರು ಮಾಡೆಲ್ ಗಳು ಈ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಈಗ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಫೋಟೊ ಶೂಟ್ ಬಗ್ಗೆ ಸ್ಥಳೀಯರು ದೇವಸ್ಥಾನದ ಆಡಳಿತ ಮಂಡಳಿಗೆ ದೂರನ್ನು ನೀಡಿದ್ದಾರೆ. ಆದರೆ ದೇವಸ್ಥಾನ ಮಂಡಳಿ, ನಾವು ಈ ಬಗ್ಗೆ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಿದೆ. ಯಾರೋ ದೇವಸ್ಥಾನ, ತೊಡಿಕಾನ ಪರಿಸರದ ಮಂದಿ ಬೆಂಗಳೂರಿನ ನೆಟ್ವರ್ಕ್ ಇರೋರು ಮಾಡೆಲ್ ಗಳನ್ನು ಕರೆಸಿ ಫೋಟೊ ಶೂಟ್ ಮಾಡಿಸಿರುವ ಸಾಧ್ಯತೆಯಿದೆ. ತಿಂಗಳ ಹಿಂದೆ ನೀರು ಹೆಚ್ಚಿದ್ದ ಸಂದರ್ಭದಲ್ಲಿ ಈ ಶೂಟಿಂಗ್ ಆಗಿದೆ ಎನ್ನಲಾಗುತ್ತಿದೆ.
Bikni photoshoot of models at Sullia Devara Gundi religious spot turns controversy after the pictures of the models goes viral on social media.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
04-07-25 10:54 pm
Mangalore Correspondent
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
Mangalore Youth death, ullal: ಕುಡಿದ ಮತ್ತಿನಲ್ಲ...
04-07-25 11:46 am
Mangalore Police, Drugs, Sudheer Kumar Reddy:...
03-07-25 10:50 pm
04-07-25 08:56 pm
Bangalore Correspondent
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm