ಬ್ರೇಕಿಂಗ್ ನ್ಯೂಸ್
14-03-23 05:43 pm Mangalore Correspondent ಕರಾವಳಿ
ಮಂಗಳೂರು, ಮಾ.14 : ಮೈಕಲ್ಲಿ ಆಜಾನ್ ಕೂಗಲು ಅಲ್ಲಾನಿಗೇನು ಕಿವುಡಾ ಎಂದು ಹೇಳಿದ್ದ ಈಶ್ವರಪ್ಪ ಹೇಳಿಕೆಗೆ ಯುಟಿ ಖಾದರ್ ಟಾಂಗ್ ನೀಡಿದ್ದಾರೆ. ತಮ್ಮ ಶಾಸಕ ಸ್ಥಾನ ಉಳಿಸಿಕೊಳ್ಳುವ ಚಿಂತೆಯಲ್ಲಿ ಸಂಯಮ ಕಳಕೊಂಡು ಮಾನಸಿಕ ಅಸ್ವಸ್ಥರಾಗಿ ಮಾತನಾಡುತ್ತಿದ್ದಾರೆ ಎಂದು ಖಾದರ್ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈಶ್ವರಪ್ಪ ಮಾತಿಗೂ ಮೆದುಳಿಗೂ ಕನೆಕ್ಷನ್ ಇಲ್ಲ ಎಂದು ಈ ಮೊದಲೇ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಹಾಗಾಗಿ ಅವರ ಹೇಳಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಯಾವುದೇ ಧರ್ಮಕ್ಕೂ ಅದರದ್ದೇ ಮೌಲ್ಯ ಇದೆ. ಯಾರೋ ಅವಹೇಳನ ಮಾಡಿದ ಮಾತ್ರಕ್ಕೆ ಧರ್ಮಕ್ಕೇನು ನಷ್ಟ ಆಗಲ್ಲ. ಯಾರು ಅವಹೇಳನ ಮಾಡ್ತಾರೋ ಅದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇಲ್ಲವೆಂಬ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ಖಾದರ್, ನಾವು ಆಡಳಿತ ನಡೆಸಿದ ಕಾಲದಲ್ಲಿ ಮಾಡಿರುವ ಕೆಲಸಕ್ಕೆ ವಾರಂಟಿ ಇದೆ. ಏನು ಮಾಡಿದ್ದೇವೆ ಎನ್ನೋದು ಜನರಿಗೆ ಗೊತ್ತಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಹೊಣೆಗೇಡಿ ಕೆಲಸಗಳಿಂದಾಗಿ ಜನರು ಸುಸೈಡ್ ಮಾಡುವ ಸ್ಥಿತಿ ಉಂಟಾಗಿದೆ. ಹಾಗಾಗಿ ಕಾಂಗ್ರೆಸ್ ಹೇಳಿದ್ದನ್ನು ಈಡೇರಿಸುತ್ತದೆ ಎನ್ನುವ ಭಾವನೆ ಜನರಲ್ಲಿದೆ. ಇವರು ಹೇಳಿದ್ದರಲ್ಲಿ ಒಂದಾದರೂ ಯೋಜನೆ ಮಾಡಿದ್ದಾರೆಯೇ, ಇವರು ಹೇಳಿದ್ದಕ್ಕೆ ವಾರಂಟಿ ಇದೆಯೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಅಂಗಡಿಗೆ ಶಟರ್ ಎಳೆಯುವ ಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಜನರ ಕೆಲಸ ಮಾಡೋದು ಬಿಟ್ಟು ವಿಜಯ ಸಂಕಲ್ಪ ಯಾತ್ರೆ ಮಾಡ್ತಿದಾರೆ. ಇದು ಬಿಜೆಪಿಯ 40 ಪರ್ಸೆಂಟ್ ಯಾತ್ರೆ. ಯಾವುದೇ ಸ್ಪಷ್ಟವಾದ ಯೋಜನೆಗಳಿಲ್ಲ. ರಿಪೋರ್ಟ್ ಕಾರ್ಡ್ ಇಲ್ಲ. ಎಲ್ಲ ಬಿಟ್ಟು ಗರ್ಭಿಣಿ ತಾಯಂದಿರಿಗೆ ತಾಯಿ ಕಾರ್ಡ್ ಕೊಡುವ ಯೋಗ್ಯತೆ ಇಲ್ಲ. ಸರ್ಟಿಫಿಕೇಟ್ ಪ್ರಿಂಟ್ ಮಾಡಲಾಗದ ಸ್ಥಿತಿ ಬಂದಿದೆ. ದರಿದ್ರ ಸ್ಥಿತಿ ಏನಂದ್ರೆ ಆರ್ ಟಿಓ ಕಚೇರಿಯಲ್ಲಿ ಪ್ರಿಂಟ್ ಮಾಡುವುದಕ್ಕೂ ಕಾರ್ಡ್ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಊರಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಬರೀ ಭಾವನಾತ್ಮಕ ವಿಚಾರ ಇಟ್ಟುಕೊಂಡು ಕರಾವಳಿ ಜನರಿಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ. ಗ್ರಾಪಂ ನೌಕರರು, ಅಂಗನವಾಡಿ ಕಾರ್ಯಕರ್ತರು, ಗೆಸ್ಟ್ ಲೆಕ್ಚರ್ ಮುಷ್ಕರ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಜನರೂ ನೀರಿಗಾಗಿ ಬೀದಿಗೆ ಬರುವ ಸ್ಥಿತಿಯಾಗಿದೆ.
ಮೊನ್ನೆ ಈಶ್ವರಪ್ಪ ಉಳ್ಳಾಲಕ್ಕೆ ಬಂದು ಅಬ್ಬಕ್ಕ ಭವನದ ಪ್ರಸ್ತಾಪ ಮಾಡಿದ್ದಾರೆ, ನಾನು ಈ ಹಿಂದೆ ಎಂಟು ಕೋಟಿ ಹಣ ಬಿಡುಗಡೆ ಮಾಡಿದ್ದರೂ ಯಾಕೆ ಇವರಿಗೆ ಭವನ ಮಾಡಲು ಆಗಿಲ್ಲ. ಕಾರ್ಕಳ ಉತ್ಸವ, ಚಿಕ್ಕಬಳ್ಳಾಪುರ ಉತ್ಸವಕ್ಕೆ 5 ಕೋಟಿ ಕೊಟ್ಟು ಜಾತ್ರೆ ಮಾಡುತ್ತಾರೆ, ಇವರಿಗೆ ಅಬ್ಬಕ್ಕ ಉತ್ಸವ ಮಾಡಲು ಹಣ ಇಲ್ಲ. ಇವರಿಗೆ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದರು.
Controversial Remark On Azaan, Mangalore MLA UT Khader calls Eshwarappa mentally ill. He has no connection with his mouth and brain he added. The controversial statement of BJP MLA Eshwarappa has come to fore. Attacking Muslims, he made indecent remarks about Azaan and said, 'Wherever I go, this is a headache. Does Allah listen only by shouting?'.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
19-05-25 12:31 pm
Mangalore Correspondent
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm