ಬ್ರೇಕಿಂಗ್ ನ್ಯೂಸ್
16-10-22 04:53 pm Mangalore Correspondent ಕರಾವಳಿ
ಉಳ್ಳಾಲ, ಅ.16 : ಮುಡಿಪು ಬೆಟ್ಟದ ಗಗನ ಚುಂಬಿ ಶ್ರೀಕೃಷ್ಣ ಧ್ಯಾನಕೇಂದ್ರದಲ್ಲಿ ಅ.28, 29, 30ರಂದು "ಗೋವರ್ಧನೋತ್ಸವ" ಜರಗಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಧ್ಯಾನ ಕೇಂದ್ರದಲ್ಲಿ ಬಿಡುಗಡೆ ಮಾಡಲಾಯಿತು.
ಸರ್ವಧರ್ಮೀಯರು ಭೇಟಿ ಕೊಡುತ್ತಿರುವಷ್ಟು ಆಕರ್ಷಿತ, ಅತ್ಯದ್ಭುತ ಸಂಗ್ರಹದ ಮ್ಯೂಸಿಯಂ ಸೇರಿದಂತೆ ಅತೀ ಎತ್ತರದ ಬೆಟ್ಟದಲ್ಲಿ ನಿಂತು ದೃಷ್ಟಿ ಹಾಯಿಸಿದರೆ ದೂರ ದೂರದ ಊರನ್ನು ನೋಡಲು ಸಾಧ್ಯವಾಗಿರುವ ಮುಡಿಪುವಿನ ಶ್ರೀಕೃಷ್ಣ ಧ್ಯಾನ ಮಂದಿರದಲ್ಲಿ ಅ.28 ರಿಂದ 30ರ ವರೆಗೆ ಗೋವರ್ಧನೋತ್ಸವ ನಡೆಯಲಿದೆ. ಶ್ರೀಕೃಷ್ಣ ಧ್ಯಾನಮಂದಿರದ ಸಂಸ್ಥಾಪಕ ಡಾ.ಮದನಮೋಹನ್ ನಾಯ್ಕ್ ಅಡೇಕಳ ಅವರು ಗೋವರ್ಧನೋತ್ಸವದ ಆಮಂತ್ರಣ ಪತ್ರಿಕೆಯನ್ನ ಬಿಡುಗಡೆಗೊಳಿಸಿದರು.
ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ರವೀಂದ್ರ ರೈ ಕಳ್ಳಿಮಾರು ಮಾತನಾಡಿ ಕಲಿಯುಗದ ಈ ಗೋವರ್ಧನ ಗಿರಿಯಲ್ಲಿ ಗೋವರ್ಧನೋತ್ಸವ ಮಾತ್ರವಲ್ಲದೆ ನಿತ್ಯ ಸತ್ಕರ್ಮ, ಸತ್ಚಿಂತನೆ, ಸತ್ಕಾರ್ಯಗಳು ನಡೆಯುವಂತಾಗಬೇಕು. ಮನುಷ್ಯ ಜನ್ಮ ಶ್ರೇಷ್ಠವಾದದ್ದು. ಇದರ ಸಾರ್ಥಕ್ಯ ಪಡೆಯಲು ಇಂತಹ ಕಾರ್ಯಗಳು ಪೂರಕ. ಈಗಾಗಲೇ ಈ ಪ್ರದೇಶಕ್ಕೆ ಜನರು ಧರ್ಮ ಭೇದ ಮರೆತು ಭೇಟಿ ನೀಡುತ್ತಿದ್ದು ಧ್ಯಾನ ಕೇಂದ್ರ ವೀಕ್ಷಣೆಯಿಂದ ಮಾನಸಿಕ ನೆಮ್ಮದಿ ಅನುಭವಿಸುತ್ತಿದ್ದಾರೆ ಎಂದರು.
ಮಂಗಳೂರು ತಾಲೂಕು ಬಂಟರ ಸಂಘದ ಸದಸ್ಯ ಜಯರಾಮ ಶಾಂತ ಬೋಳ್ಯಾರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ರಾಜೇಶ್ ಶೆಟ್ಟಿ ಪಜೀರುಗುತ್ತು, ಗೋವರ್ಧನೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಆಳ್ವ ನಾರ್ಯಗುತ್ತು ಮೊದಲಾದ ಗಣ್ಯರು ಉಪಸ್ಥಿತರಿದ್ದರು.
Mangalore Govardhanutsava to be held at Mudipu meditation centre on October 28th to 30th.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm