ಬ್ರೇಕಿಂಗ್ ನ್ಯೂಸ್
14-10-22 04:56 pm Mangalore Correspondent ಕರಾವಳಿ
ಉಳ್ಳಾಲ, ಅ.14 : ಬ್ಯಾಂಕ್ ಉದ್ಯೋಗಿಯೋರ್ವರು ಮನೆಯಲ್ಲಿ ಪತ್ನಿ, ಮಕ್ಕಳಿಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ಮುಚ್ಚಿಲ ಕೋಡಿ ಎಂಬಲ್ಲಿ ನಡೆದಿದೆ.
ಕೊಣಾಜೆ, ಮುಚ್ಚಿಲ ಕೋಡಿ ನಿವಾಸಿ ಚರಣ್ ರಾಜ್ ಶೆಟ್ಟಿ(37) ಆತ್ಮಹತ್ಯೆಗೈದ ಯುವಕ. ಚರಣ್ ಅವರು ಕರ್ನಾಟಕ ಬ್ಯಾಂಕ್ ನ ಪಚ್ಚನಾಡಿ ಶಾಖೆಯಲ್ಲಿ ಅಟೆಂಡರ್ ಆಗಿದ್ದರು. ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಅವರು ಮದ್ಯ ವ್ಯಸನಕ್ಕೆ ದಾಸರಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.
ಪತ್ನಿ ಮತ್ತು ಇಬ್ಬರು ಮಕ್ಕಳು ನವರಾತ್ರಿಗೆಂದು ತವರು ಮನೆಗೆ ತೆರಳಿದ್ದರು. ನಿನ್ನೆ ಚರಣ್ ಅವರು ಪತ್ನಿಯ ಮನೆಗೆ ತೆರಳಿ ಮಕ್ಕಳನ್ನು ಮಾತನಾಡಿಸಿ ಬಂದಿದ್ದರಂತೆ.
ಚರಣ್ ಅವರ ತಾಯಿ ಶಾಲಾ ಬಸ್ಸಲ್ಲಿ ಕಂಡಕ್ಟರ್ ಆಗಿದ್ದು ಇಂದು ಬೆಳಗ್ಗೆ ಬೇಗನೆ ಕೆಲಸಕ್ಕೆ ತೆರಳಿದ್ದಾರೆ. ಬಳಿಕ ಚರಣ್ ಅವರು ಸಾಕು ನಾಯಿಯನ್ನ ಹಿಡಿದು ವಾಕಿಂಗ್ ತೆರಳಿದ್ದರಂತೆ. ಮಧ್ಯಾಹ್ನ ಚರಣ್ ಅವರ ಮೊಬೈಲಿಗೆ ಪತ್ನಿ ಕರೆ ಮಾಡಿದ್ದು ಸ್ವೀಕರಿಸದೇ ಇದ್ದಾಗ ಮುಚ್ಚಿಲ ಕೋಡಿಯ ನೆರೆಹೊರೆಯವರಲ್ಲಿ ವಿಚಾರಿಸಿದ್ದಾರೆ. ನೆರೆ ಹೊರೆಯವರು ಮನೆಯನ್ನ ಪರಿಶೀಲಿಸಿದಾಗ ಚರಣ್ ರಾಜ್ ನೇಣು ಬಿಗಿದಿದ್ದು ಅವರನ್ನ ರಕ್ಷಿಸಲು ಆಸ್ಪತ್ರೆಗೆ ಕೊಂಡೊಯ್ದರೂ ಅದಾಗಲೇ ಅಸುನೀಗಿದ್ದಾರೆ.
ಮೃತ ಚರಣ್ ರಾಜ್ ಅವರಿಗೆ ಆರು ತಿಂಗಳ ಮತ್ತು ಮೂರು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಕೊಣಾಜೆ ಠಾಣಾ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.
Ullal 37 year old Bank employee commits suicide in Mangalore , financial crises suspected. The deceased has been identified as Charan Raj Shetty (37).
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm