ಬ್ರೇಕಿಂಗ್ ನ್ಯೂಸ್
10-10-20 06:30 pm Mangaluru Correspondent ಕರಾವಳಿ
ಪುತ್ತೂರು, ಅಕ್ಟೋಬರ್ 10: ಎರಡು ದಿನಗಳ ಹಿಂದೆ ಸುಳ್ಯದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾಗಿ ಕೊಲೆಯಾಗಿದ್ದ ಸಂಪತ್ ಕುಮಾರ್ ಪ್ರಕರಣದಲ್ಲಿ ಸುಳ್ಯ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಬಾಲಚಂದ್ರ ಕಳಗಿ ಅವರನ್ನು ಅಪಘಾತಕ್ಕೀಡಾಗಿಸಿ ಕೊಲೆಗೈದ ಪ್ರಕರಣದಲ್ಲಿ ಸಂಪತ್ ಕುಮಾರ್ ಪ್ರಮುಖ ಆರೋಪಿಯಾಗಿದ್ದರಿಂದ ಅದೇ ಪ್ರತೀಕಾರದಿಂದ ಕೊಲೆ ಆಗಿರಬಹುದೆಂದು ನಂಬಲಾಗಿತ್ತು. ಪ್ರಕರಣದಲ್ಲಿ ವರ್ಷದ ಹಿಂದೆ ಬಂಧನಕ್ಕೀಡಾಗಿದ್ದ ಸಂಪತ್ ಕುಮಾರ್ ಎರಡು ತಿಂಗಳ ಹಿಂದಷ್ಟೇ ಜಾಮೀನು ಮೇಲೆ ಹೊರಬಂದಿದ್ದ.
ಸಂಪಾಜೆಯ ಕಲ್ಲುಗುಂಡಿಯ ನಿವಾಸಿಯಾಗಿದ್ದರೂ, ಊರಲ್ಲಿದ್ದರೆ ಪ್ರತೀಕಾರ ತೀರಿಸಿಕೊಳ್ಳುವ ಭಯದಲ್ಲಿ ಸುಳ್ಯ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಅಲ್ಲದೆ, ಸ್ಥಳೀಯವಾಗಿ ಹೊಯ್ಗೆ ಮತ್ತು ಕೆಂಪುಕಲ್ಲಿನ ವ್ಯಾಪಾರ ನಡೆಸುತ್ತಿದ್ದು ಐ ಟ್ವೆಂಟಿ ಕಾರಿನಲ್ಲಿ ತಿರುಗಾಡುತ್ತಿದ್ದ. ಹೊಯ್ಗೆ ವ್ಯವಹಾರದಲ್ಲಿ ವಿರೋಧಿಗಳು ಕೂಡ ಸೃಷ್ಟಿಯಾಗಿದ್ದರು ಎನ್ನಲಾಗುತ್ತಿದೆ. ಆದರೆ, ಕೊಲೆ ಪ್ರಕರಣದ ಬಳಿಕ ಆತನ ಜೊತೆಗಿದ್ದ ಸ್ನೇಹಿತರ ಪೈಕಿ ನಾಲ್ವರು ನಾಪತ್ತೆಯಾಗಿದ್ದರು. ಆತನ ಪರಿಚಯದವರಲ್ಲಿ ವಿಚಾರಿಸಿದ ಸಂದರ್ಭದಲ್ಲೂ ಜೊತೆಗೇ ತಿರುಗಾಡುತ್ತಿದ್ದವರ ಪತ್ತೆ ಇರಲಿಲ್ಲ.
ಈ ನಡುವೆ, ಕೊಲೆ ಕೃತ್ಯಕ್ಕೆ ಆಗಮಿಸಿದ್ದ ನಾಲ್ವರು ಮುಸುಕುಧಾರಿಗಳು ತಂದಿದ್ದ ಕ್ವಾಲಿಸ್ ವಾಹನ ಅರಂತೋಡು ಬಳಿ ಕಂಡುಬಂದಿದೆ. ಕ್ವಾಲಿಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಲ್ಲದೆ, ಆತನ ಜೊತೆಗಿದ್ದ ಸ್ನೇಹಿತರ ಪತ್ತೆಗಾಗಿ ಬಲೆ ಬೀಸಿದ್ದರು. ನಾಲ್ವರು ಸ್ನೇಹಿತರು ಯಾರೆಂದು ಸ್ಪಷ್ಟ ಮಾಹಿತಿ ಇದ್ದುದರಿಂದ ಅವರನ್ನು ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಖಚಿತ ಮೂಲಗಳು ತಿಳಿಸಿವೆ.
ಕೊಲೆಯಾದ ದಿನ ಪರಿಸರದ ಜನರಲ್ಲಿ ಬಾಲಚಂದ್ರ ಕಳಗಿ ಹತ್ಯೆಗೆ ಪ್ರತೀಕಾರಕ್ಕಾಗಿ ಈ ಕೃತ್ಯ ಮಾಡಿದ್ದೇವೆಂದು ಆರೋಪಿಗಳು ತಿಳಿಸಿದ್ದಾಗಿ ಜನರು ಹೇಳಿಕೆ ನೀಡಿದ್ದರು. ಆದರೆ ಜೊತೆಗಿದ್ದ ಸ್ನೇಹಿತರೇ ಈಗ ಕೊಲೆ ಕೃತ್ಯ ನಡೆಸಿದ್ದಾರೆಯೇ ಅಥವಾ ಸುಪಾರಿ ಕೊಟ್ಟು ಸ್ನೇಹಿತರ ಮೂಲಕ ಯಾರಾದ್ರೂ ಕೊಲ್ಲಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಪತ್ ಕುಮಾರ್ ಬಾಡಿಗೆ ಮನೆಯಲ್ಲಿ ಇರುವುದು ಮತ್ತು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಹೊರಡುತ್ತಿದ್ದುದು ಹಾಗೂ ಅಲ್ಲಿನ ರಸ್ತೆಯಲ್ಲಿ ಒಂದು ವಾಹನವಷ್ಟೇ ತೆರಳಲು ಸಾಧ್ಯವಾಗುವ ಪರಿಸ್ಥಿತಿಯ ಬಗ್ಗೆ ಅರಿತೇ ದುಷ್ಕರ್ಮಿಗಳು ಕೊಲೆಗೆ ಸುಲಭದ ಸ್ಕೆಚ್ ಹಾಕಿದ್ದರು ಎನ್ನಲಾಗುತ್ತಿದೆ.
With the link to the murder of Sampath Kumar (35) from Kallugundi, Sullia during the early hours of Thursday, October 8 by a gang of masked men with swords and a gun, the police have got information about the assailants and have taken 4 into police custody along with a Toyota Qualis car.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm