ಬ್ರೇಕಿಂಗ್ ನ್ಯೂಸ್
12-10-22 02:18 pm Mangalore Correspondent ಕರಾವಳಿ
ಮಂಗಳೂರು, ಅ.12: ಪಣಂಬೂರಿನ ಎನ್ಎಂಪಿಟಿ ಬಂದರಿನಲ್ಲಿ ಸಿಐಎಸ್ಎಫ್ ಭದ್ರತಾ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ಐ ಒಬ್ಬರು ತನ್ನದೇ ಗನ್ ನಲ್ಲಿ ಶೂಟ್ ಮಾಡ್ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮೂಲತಃ ರಾಜಸ್ಥಾನದ ಭರತ್ ಪುರ ಜಿಲ್ಲೆಯ ನಿವಾಸಿ ಜ್ಯೋತಿ ಬಾಯಿ (33) ಆತ್ಮಹತ್ಯೆಗೆ ಯತ್ನಿಸಿದವರು. ಇಂದು ಬೆಳಗ್ಗೆ ಎನ್ಎಂಪಿಟಿ ಗೇಟ್ ನಲ್ಲಿ ಕರ್ತವ್ಯದಲ್ಲಿದ್ದಾಗಲೇ ತನ್ನದೇ ಪಿಸ್ತೂಲ್ನಲ್ಲಿ ಶೂಟ್ ಮಾಡ್ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೇ ಅವರನ್ನು ಜೊತೆಗಿದ್ದ ಸಿಬಂದಿ ಮಂಗಳೂರಿನ ಎಜೆ ಆಸ್ಪತ್ರೆಗೆ ಸೇರಿಸಿದ್ದಾರೆ.
ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಜ್ಯೋತಿ ಬಾಯಿ ಮತ್ತು ಅವರ ಪತಿ ಓಮ್ ಬೀರ್ ಸಿಂಗ್ ಇಬ್ಬರೂ ಸಿಐಎಸ್ಎಫ್ ಭದ್ರತಾ ಪಡೆಯಲ್ಲಿದ್ದಾರೆ. ಓಮ್ ಬೀರ್ ಸಿಂಗ್ ಸುರತ್ಕಲ್ ಎಂಆರ್ ಪಿಎಲ್ ನಲ್ಲಿ ಸಿಐಎಸ್ಎಫ್ ಕಮಾಂಡೆಂಟ್ ಆಗಿದ್ದಾರೆ. ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಮಾಹಿತಿಗಳಿವೆ. ಪೊಲೀಸರ ಪ್ರಕಾರ, ಜ್ಯೋತಿ ಬಾಯಿ ಅಪಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ಚಿಕಿತ್ಸೆ ಮುಂದುವರಿಸಲಾಗಿದೆ ಎನ್ನುವ ಮಾಹಿತಿಯಿದೆ. ಘಟನಾ ಸ್ಥಳದಲ್ಲಿ ಹಿಂದಿಯಲ್ಲಿ ಬರೆದಿದ್ದ ಪತ್ರ ಸಿಕ್ಕಿದ್ದು, ಆತ್ಮಹತ್ಯೆ ಯತ್ನ ಮಾಡುತ್ತಿರುವುದಕ್ಕೆ ಬೇರೆ ಯಾರೂ ಕಾರಣರಲ್ಲ. ನನ್ನದೇ ಸ್ವಂತ ನಿರ್ಧಾರ, ಸಾರಿ ಅಮ್ಮ ಎಂದು ಪತ್ರ ಬರೆಯಲಾಗಿತ್ತು.
ಜ್ಯೋತಿ ಬಾಯಿ 2010ರ ಬ್ಯಾಚ್ ನಲ್ಲಿ ಎಸ್ಐ ಆಗಿ ಸಿಐಎಸ್ಎಫ್ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದು ಮಂಗಳೂರಿನ ಎನ್ಎಂಪಿಟಿ ಬಂದರಿನಲ್ಲಿ ಭದ್ರತಾ ವಿಭಾಗದಲ್ಲಿದ್ದರು. ಸಿಐಎಸ್ಎಫ್ ಕೇಂದ್ರೀಯ ಭದ್ರತಾ ಪಡೆಯಾಗಿದ್ದು, ಕೇಂದ್ರ ಸರಕಾರದಿಂದ ನಿರ್ವಹಿಸಲ್ಪಡುವ ಬಂದರು, ವಿಮಾನ ನಿಲ್ದಾಣ, ಎಂಆರ್ ಪಿಎಲ್ ಮಾದರಿಯ ಕೈಗಾರಿಕೆಗಳಲ್ಲಿ ಭದ್ರತೆಯನ್ನು ನೋಡಿಕೊಳ್ಳುತ್ತದೆ.
A 33-year-old CISF lady sub inspector attempted to end her life by shooting herself on Wednesday October 12 near NMPT gate. Jyothi Bai hailing from Bharathpur district in Rajasthan, who is working as CISF sub inspector at NMPT, is the officer who is hospitalised.
09-02-26 07:20 pm
Bangalore Correspondent
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
09-02-26 10:25 pm
HK News Desk
ಜಾಗತಿಕ ಷೇರು ಮಾರುಕಟ್ಟೆಯಲ್ಲಿ 'ಆಂಥ್ರೋಪಿಕ್' AI ಬಿ...
09-02-26 12:27 pm
ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ, ಸ್ವಯಂಸೇವಕ...
08-02-26 10:18 pm
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
09-02-26 11:20 pm
HK News Desk
Mangalore Accident, Bus: ನಂತೂರಿನಲ್ಲಿ ಅಪಘಾತಕ್ಕ...
09-02-26 08:02 pm
ಕೆಪಿಟಿ ಜಂಕ್ಷನ್ ಬಳಿಯ ಹೆದ್ದಾರಿ ಡಿವೈಡರ್ ಮುಚ್ಚಿದ್...
09-02-26 02:50 pm
ಸೌಜನ್ಯಾ ಕೊಲೆ ಪ್ರಕರಣ ; ದೋಷಪೂರಿತ ತನಿಖೆ ನಡೆಸಿದ ಅ...
08-02-26 11:17 pm
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
09-02-26 02:04 pm
HK News Desk
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am
Mangalore Jail Raid: ಮಂಗಳೂರು ಜೈಲಿನಲ್ಲಿ ಬರ್ಕೆ...
08-02-26 02:07 pm
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm