ಬ್ರೇಕಿಂಗ್ ನ್ಯೂಸ್
10-10-20 01:20 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 10: ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದರೆ ಮಸಿ ಬಳಿಯುತ್ತೇವೆ ಎಂದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಗೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಈ ಬಗ್ಗೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.,ನಾಥ ಪರಂಪರೆ ಬಗ್ಗೆ ಸಮಾಜಕ್ಕೆ ಅಪಾರ ಗೌರವವಿದೆ. ಅಂತಹ ಉನ್ನತ ಪರಂಪರೆಯುಳ್ಳ ಪೂಜ್ಯರಾದ ಯೋಗಿ ಬಗ್ಗೆ ಮಿಥುನ್ ರೈ ಅವಹೇಳನ ಆಗುವ ರೀತಿ ಮಾತಾಡಿದ್ದಾರೆ. ಇದು ಮಿಥುನ್ ರೈ ಯೋಗ್ಯತೆಯನ್ನ ತೋರಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಬಾಯಿಗೆ ಬಂದ ರೀತಿ ಮಾತಾಡಲು ಕಾಂಗ್ರೆಸ್ನವರು ದಕ್ಷಿಣ ಕನ್ನಡ ಜಿಲ್ಲೆಯನ್ನ ಖರೀದಿಸಿಲ್ಲ. ಅತ್ಯಾಚಾರ ವಿಚಾರದ ಬಗ್ಗೆ ಪ್ರತಿಭಟನೆ ನಡೆಸುವುದಿದ್ದರೂ, ಕಾನೂನು ಮೇಲೆ ನಂಬಿಕೆ ಇರಲಿ. ಕಾನೂನು ಮೀರಿದ ವರ್ತನೆ ಸರಿಯಲ್ಲ. ಕಾನೂನು ಬಾಹಿರ ರೀತಿ ಪ್ರತಿಭಟನೆ ನಡೆಸುತ್ತಾರೆ. ಕಾನೂನು ಉಲ್ಲಂಘನೆ ಆಗುವ ರೀತಿ ಮಾತುಗಳನ್ನಾಡುತ್ತಾರೆ. ಅತ್ಯಾಚಾರ ವಿರೋಧಿಸಿ ಕಠಿಣ ಕಾನೂನು ಜಾರಿಗೆ ತಂದಿದ್ದು ಕೇಂದ್ರದ ಮೋದಿ ಸರ್ಕಾರ. ಇದು ಕಾಂಗ್ರೆಸಿನವರಿಗೆ ತಿಳಿದಿರಲಿ ಎಂದು ಸುದರ್ಶನ್ ಹೇಳಿದರು.
ಅಲ್ಲದೆ, ಕಾಂಗ್ರೆಸ್ ಪ್ರತಿಭಟನೆಯ ಹಿಂದೆ ರಾಜಕೀಯ ಉದ್ದೇಶ ಇದೆ. ಕೇರಳದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಕಾಂಗ್ರೆಸ್ ಮೌನ ವಹಿಸುತ್ತದೆ. ಅದರ ಬಗ್ಗೆ ಮಾತನಾಡಲ್ಲ. ಯಾಕಂದ್ರೆ ಅಲ್ಲಿ ಇವರ ಮಿತ್ರರದ್ದೇ ಆಡಳಿತ ಇದೆ. ಬಿಜೆಪಿ ಉತ್ತರ ಪ್ರದೇಶದ ಅತ್ಯಾಚಾರ ಘಟನೆಯನ್ನೂ ಖಂಡಿಸುತ್ತದೆ. ಮಿಥುನ್ ರೈ ಹೇಳಿಕೆಯನ್ನೂ ಬಿಜೆಪಿ ಖಂಡಿಸುತ್ತದೆ. ಇಂತಹ ಹೇಳಿಕೆಯನ್ನ ಕಾಂಗ್ರೆಸ್ ನಾಯಕರು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಕಾರ್ಯಕರ್ತರು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎಂದು ಸುದರ್ಶನ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದರೆ ಮಸಿ ಬಳಿಯುತ್ತೇವೆ ; ಮಿಥುನ್ ರೈ
Dakshina Kannada Youth Congress president Mithun Rai had made offensive statements against UP CM Yogi affirming of throwing black ink during yogi visit to Mangalore for which District president Sudarshan has slammed Minthun rai over his culture.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm