ಬ್ರೇಕಿಂಗ್ ನ್ಯೂಸ್
08-10-22 10:06 pm Mangalore Correspondent ಕರಾವಳಿ
ಉಳ್ಳಾಲ, ಅ.8 : ಕಾನೂನು ಬಾಹಿರ ಕಟ್ಟಡದ ಕ್ಷೇಮ ಕಾಪಾಡಲು ಕಳೆದ ಮೂರು ವರ್ಷಗಳಿಂದ ಸುಭಾಸ್ ನಗರ ಎಂಬಲ್ಲಿ ರಸ್ತೆ ಬದಿಯಲ್ಲಿ ವ್ಯವಹಾರ ನಡೆಸುತ್ತಿದ್ದ ಮಿಲ್ಕ್ ಪಾರ್ಲರ್ ಬೂತನ್ನ ತೆರವುಗೊಳಿಸಲು ಮುನ್ನೂರು ಗ್ರಾಮ ಪಂಚಾಯತ್ ಮುಂದಾಗಿದ್ದು, ಬೂತ್ ಮಾಲೀಕರು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದು ಪಂಚಾಯತಿಗೆ ತಿರುಗೇಟು ನೀಡಿದ್ದಾರೆ.
ಮುನ್ನೂರು ಪಂಚಾಯತ್ ವ್ಯಾಪ್ತಿಯ ಸುಭಾಷ್ ನಗರದಲ್ಲಿ ಉಷಾ ಶೆಟ್ಟಿ ಎಂಬವರು ಮೂರು ವರ್ಷಗಳ ಹಿಂದೆ ಶ್ರೀ ಕಟಿಲೇಶ್ವರಿ ನಂದಿನಿ ಡಿಪೋ ಆರಂಭಿಸಿದ್ದರು. 2019-20ನೇ ಸಾಲಿನಲ್ಲಿ ಪಂಚಾಯತ್ ಪರವಾನಿಗೆಯನ್ನೂ ನೀಡಿತ್ತು. ಇತ್ತೀಚೆಗೆ ಮಿಲ್ಕ್ ಡಿಪೋ ಹಿಂಭಾಗದಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣಗೊಂಡ ಖಾಸಗಿ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಹಾಲಿನ ಬೂತ್ನಿಂದ ಕಟ್ಟಡಕ್ಕೆ ಸಮಸ್ಯೆ ಆಗುತ್ತದೆ ಎಂದು ಕಟ್ಟಡ ಮಾಲೀಕರು ಪಂಚಾಯತಿಗೆ ದೂರು ನೀಡಿದ್ದಾರೆ.

ಅಕ್ರಮ ಕಟ್ಟಡದ ಮಾಲೀಕನ ಕ್ಷೇಮ ಕಾಪಾಡುವ ದೃಷ್ಟಿಯಲ್ಲಿ ಪಂಚಾಯತ್ ಪಿಡಿಓ ರವೀಂದ್ರ ರಾಜೀವ್ ನಾಯ್ಕ್ , ಅಧ್ಯಕ್ಷರಾದ ವಿಲ್ಫ್ರೆಡ್ ಡಿಸೋಜ ಮತ್ತು ಸಿಬ್ಬಂದಿ ಶನಿವಾರ ಹಾಲಿನ ಬೂತ್ ತೆರವಿಗೆ ಆಗಮಿಸಿದ್ದರು. ಪಂಚಾಯತ್ ನಿರ್ಣಯದ ವಿರುದ್ಧ ಮಿಲ್ಕ್ ಪಾರ್ಲರ್ ಮಾಲೀಕರು ಹೈಕೋರ್ಟ್ನಿಂದ ತಡೆಯಾಜ್ನೆ ತಂದಿದ್ದು ಅದರ ಪ್ರತಿಯನ್ನು ಬೂತ್ಗೆ ಅಂಟಿಸಿದ್ದರು.

ಪಂಚಾಯತ್ ಪಿಡಿಓ ಕ್ರಮವನ್ನ ವಿರೋಧಿಸಿ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಭಾಷ್ ನಗರದಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕೆ ಸೆಟ್ಬ್ಯಾಕ್ ಸಹಿತ ಯಾವುದೇ ವ್ಯವಸ್ಥೆ ಇಲ್ಲ. ದೊಡ್ಡವರ ಮುಂದೆ ಮಂಡಿ ಊರಿ ಕುಳಿತಿರುವ ಪಂಚಾಯತ್ ಪಿಡಿಒ ಬಡವರ ಬೂತ್ ತೆರವುಗೊಳಿಸುವುದಾದರೆ ಸರ್ಕಾರಿ ಜಮೀನಿನಲ್ಲಿರುವ ಎಲ್ಲಾ ಗೂಡಂಗಡಿಗಳನ್ನ ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೈಕೋರ್ಟ್ ತಡೆ ಇದ್ದರೂ ಮುನ್ನೂರು ಪಿಡಿಒ ಮಿಲ್ಕ್ ಪಾರ್ಲರನ್ನ ಜಬರ್ದಸ್ತಿಯಲ್ಲಿ ತೆರವುಗೊಳಿಸಲು ಮುಂದಾಗಿದ್ದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಹಿಂದಿರುಗಿದ್ದಾರೆ.ಕುರುಡು ಕಾಂಚಾಣಕ್ಕೆ ಮುನ್ನೂರು ಪಂಚಾಯತ್ ಪಿಡಿಓ ಮತ್ತು ಅಧ್ಯಕ್ಷರು ಏನು ಮಾಡಲೂ ರೆಡಿ ಎಂದು ಈ ಮೊದಲೇ ಜಾಲತಾಣಗಳಲ್ಲದೆ, ಮನೆ, ಮನೆಗಳಿಗೆ ಗ್ರಾಮಸ್ಥರು ಕರಪತ್ರಗಳನ್ನು ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದರು.
Thokottu Munnur Village Panchayath alleged of supporting illegal construction of the building. Also a stay order has been brought over Milk Parlour to not vacate from the building.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 01:01 pm
HK News Staffer
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm