ಬ್ರೇಕಿಂಗ್ ನ್ಯೂಸ್
05-10-22 11:01 pm Mangalore Correspondent ಕರಾವಳಿ
ಮಂಗಳೂರು, ಅ.5 : ಎರಡು ವರ್ಷಗಳಲ್ಲಿ ಕೊರೊನಾ ಇದ್ದ ಕಾರಣವೋ ಏನೋ.. ಈ ಬಾರಿ ಮಂಗಳೂರು ದಸರಾಕ್ಕೆ ಸಂಜೆಯಾಗುತ್ತಲೇ ಕಾಲಿಡಲು ಜಾಗ ಇರಲಿಲ್ಲ. ಅದ್ದೂರಿತನಕ್ಕೆ ಮತ್ತೊಂದು ಹೆಸರು ಎನ್ನುವಂತೆ ನಡೆದುಬಂದ ಮಂಗಳೂರು ದಸರಾಕ್ಕೆ ಈ ಬಾರಿ ಎಣೆಯೇ ಇರಲಿಲ್ಲ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಪೂಜೆಗೊಳ್ಳುವ ನವದುರ್ಗೆಯರು ಮತ್ತು ಶಾರದೆ, ಗಣಪತಿಯ ವಿಗ್ರಹದ ಮೆರವಣಿಗೆ ವಿಜಯದಶಮಿಯ ದಿನ ಎಂದಿನಂತೆ ಅದ್ದೂರಿಯಾಗಿ ನಡೆಯಿತು. ಕುದ್ರೋಳಿ ಕ್ಷೇತ್ರದಲ್ಲಿ ದೇವಸ್ಥಾನದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿದರು. ಸಂಜೆ ಐದು ಗಂಟೆ ವೇಳೆಗೆ ಮೆರವಣಿಗೆ ಆರಂಭಗೊಂಡರೂ, ಶೋಭಾಯಾತ್ರೆಗೆ ಸ್ತಬ್ಧಚಿತ್ರಗಳು ಸಾಥ್ ನೀಡಲಿಲ್ಲ. ಈ ಹಿಂದೆಲ್ಲ ನವದುರ್ಗೆಯರ ಮೆರವಣಿಗೆಗೂ ಮುಂದಿನಿಂದ ಇತರೇ ಸ್ತಬ್ಧಚಿತ್ರಗಳು ಸಾಗಿ ಬರುತ್ತಿದ್ದವು. ಮಣ್ಣಗುಡ್ಡ, ಲೇಡಿಹಿಲ್ ನಲ್ಲಿ ಮೆರವಣಿಗೆ ಸೇರುತ್ತಿದ್ದ ಸ್ತಬ್ಧಚಿತ್ರಗಳು ಈ ಬಾರಿ ದೇವರ ವಿಗ್ರಹದ ಮುಂದಿನಿಂದ ಸಾಗಿ ಬರಲಿಲ್ಲ.
ಸಾವಿರಾರು ಜನರು ಸಂಜೆಯೇ ಲಾಲ್ ಬಾಗ್, ಬಳ್ಳಾಲ್ ಬಾಗ್ ನಲ್ಲಿ ಬಂದು ನಿಂತಿದ್ದರೂ ರಾತ್ರಿ ಹತ್ತುವರೆ ಕಳೆದರೂ ಮೆರವಣಿಗೆ ಲಾಲ್ ಬಾಗ್ ಬಂದು ತಲುಪಲಿಲ್ಲ. ಹೀಗಾಗಿ ಜನರು ಕಾದು ನಿರಾಶೆಯಾಗಿದ್ದರು. ಶಾರದೆಯ ಜೊತೆಗೆ ಸಾಗಬೇಕೆಂಬ ಕೆಲವು ತಂಡಗಳ ಧಾವಂತ, ಕೆಲವರ ಪ್ರತಿಷ್ಠೆಗಳು ಮೇಳೈಸಿದ ಕಾರಣ ಜನರು ರಾತ್ರಿಯಾದರೂ ಸ್ತಬ್ಧಚಿತ್ರಗಳು ನೋಡಲು ಸಿಗಲಿಲ್ಲ. ಹತ್ತು ಗಂಟೆ ವೇಳೆಗೆ ಲೇಡಿಹಿಲ್, ಲಾಲ್ ಬಾಗ್ ವೃತ್ತದಿಂದ ಬಳ್ಳಾಲ್ ಬಾಗ್ ಪಿವಿಸ್ ಉದ್ದಕ್ಕೆ ಲಕ್ಷಾಂತರ ಜನರು ಸೇರಿದ್ದರು. ಇದೇ ಮೊದಲ ಬಾರಿಗೆ ಎನ್ನುವಂತೆ ಈ ಪರಿ ಜನರು ಸೇರಿದ್ದರು.
ಸ್ಥಳೀಯರಲ್ಲದೆ, ಹೊರ ರಾಜ್ಯಗಳ ಕಾರ್ಮಿಕರು, ಉತ್ತರ ಭಾರತದ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ದಸರಾ ಶೋಭಾಯಾತ್ರೆಗೆ ಎಂದಿನ ವೈಭವ ಇರಲಿಲ್ಲ. ಹೀಗಾಗಿ ಜನರು ಮೈಸೂರು ದಸರಾಕ್ಕಿಂತಲೂ ಹೆಚ್ಚೆಂಬಂತೆ ಸೇರಿದ್ದರು.
Kudroli Dasara in Mangalore, lakhs of people gather for celebration.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:28 pm
Udupi Correspondent
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm