ಬ್ರೇಕಿಂಗ್ ನ್ಯೂಸ್
30-09-22 04:28 pm Mangalore Correspondent ಕರಾವಳಿ
ಮಂಗಳೂರು, ಸೆ.30 : ಅತಿಥಿ ಸೇವೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್ ಓಶಿಯನ್ ಪರ್ಲ್ ಸಮೂಹದ ಐದನೇ ಶಾಖೆ ಧರ್ಮಸ್ಥಳದ ಉಜಿರೆಯಲ್ಲಿ ಶುಕ್ರವಾರ ಶುಭಾರಂಭಗೊಂಡಿದೆ. ಧರ್ಮಸ್ಥಳ ಕ್ಷೇತ್ರದ ಹರ್ಷೇಂದ್ರ ಕುಮಾರ್ ದೀಪ ಬೆಳಗಿಸಿ ಹೊಟೇಲ್ ಉದ್ಘಾಟಿಸಿದರು.
ಧರ್ಮಸ್ಥಳ, ಉಜಿರೆ ಪರಿಸರದಲ್ಲಿ ಒಳ್ಳೆಯ ಸುಸಜ್ಜಿತ ಹೊಟೇಲ್ ಇಲ್ಲ ಎಂಬ ಕೊರತೆಯನ್ನು ಬರೋಡಾ ಉದ್ಯಮಿ ಶಶಿಧರ್ ಶೆಟ್ಟಿ ಮತ್ತು ಓಶಿಯನ್ ಪರ್ಲ್ ಸಂಸ್ಥೆಯ ಮಾಲಕ ಜಯರಾಮ್ ಬನಾನ್ ಅವರು ನೀಗಿಸಿದ್ದಾರೆ. ಸಾಗರರತ್ನ ಹೋಟೆಲ್ ಗಳು ಇಡೀ ದೇಶದೆಲ್ಲೆಡೆ ಸ್ಥಾಪಿಸಲ್ಪಟ್ಟಿದ್ದು ಹೆಸರೇ ಹೇಳುವಂತೆ ಓಷನ್ ಪರ್ಲ್ ಸಾಗರದ ಮುತ್ತಿನಂತೆ ನಿರಂತರ ಹೊಳೆಯುತ್ತಿರಲಿ ಎಂದು ಹರ್ಷೇಂದ್ರ ಕುಮಾರ್ ಹೇಳಿದರು.
ಹೊಟೇಲ್ ಕಟ್ಟಡವನ್ನು ಶಶಿಧರ್ ಶೆಟ್ಟಿ ಅವರು ತಮ್ಮ ತಾಯಿ ಕಾಶಿ ಶೆಟ್ಟಿ ಹೆಸರಿನಲ್ಲಿ ನಿರ್ಮಿಸಿದ್ದು ಕಾಶಿ ಪ್ಯಾಲೇಸ್ ಹೆಸರಿನಲ್ಲಿ ಸುಸಜ್ಜಿತ ಹೊಟೇಲ್ ನಿರ್ಮಾಣ ಮಾಡಲಾಗಿದೆ. 30 ವರ್ಷಗಳಿಂದ ಗುಜರಾತ್ ನಲ್ಲಿ ಕೇಟರಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಶಶಿಧರ್ ಶೆಟ್ಟಿಯವರು ಊರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಹೋಟೆಲ್ ಉದ್ಯಮ, ವಸತಿ ಸೌಲಭ್ಯ ಪ್ರಾರಂಭಿಸುವ ಉದ್ದೇಶದಿಂದ ತಾಯಿ ಹೆಸರಲ್ಲಿ ಸಂಸ್ಥೆ ನಿರ್ಮಾಣ ಮಾಡಿದ್ದಾಗಿ ಅವರು ಹೇಳಿದರು.
ಓಷನ್ ಪರ್ಲ್ ಸಮೂಹ ಸಂಸ್ಥೆಯ ಜಯರಾಮ್ ಬನಾನ, ಅರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹರಿಕೃಷ್ಣ ಬಂಟ್ವಾಳ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಕೃಷ್ಣ ಪಾಲೇಮಾರ್, ಆಳ್ವಾಸ್ ಪ್ರತಿಷ್ಠಾನದ ಮೋಹನ್ ಆಳ್ವ, ವಿವೇಕ್ ಆಳ್ವ, ಓಶಿಯನ್ ಪರ್ಲ್ ಸಂಸ್ಥೆಯ ಉಪಾಧ್ಯಕ್ಷ ಗಿರೀಶ್, ಪಟ್ಲ ಸತೀಶ್ ಶೆಟ್ಟಿ, ಶರತ್ ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು.
ಮೂರು ಮಹಡಿ, 34 ಕೊಠಡಿ, ಸಸ್ಯಾಹಾರಿ, ಮಾಂಸಾಹಾರಿ ಪ್ರತ್ಯೇಕ
ಉಜಿರೆ ಬಳಿ ನಿರ್ಮಾಣಗೊಂಡ ಓಶ್ಯನ್ ಪರ್ಲ್ ಹೊಟೇಲ್, ಮೂರು ಮಹಡಿಗಳ ಐಷಾರಾಮಿ ಹೋಟೆಲ್ ಆಗಿದ್ದು 34 ಕೊಠಡಿಗಳನ್ನು ಹೊಂದಿದೆ. ಇದರಲ್ಲಿ 31 ಎಕ್ಸಿಕ್ಯೂಟಿವ್ ಸೂಟ್ ರೂಮ್ಗಳು, 2 ಸೂಟ್ ರೂಮ್ಗಳು ಮತ್ತು 1 ಪ್ರೆಸಿಡೆಂಟ್ ಸೂಟ್ ರೂಮ್ ಅನ್ನು ಹೊಂದಿದೆ. 'ಪೆಸಿಫಿಕ್'ನಲ್ಲಿ ಸುಮಾರು 200 ಜನರಿಗೆ ಅವಕಾಶ ಕಲ್ಪಿಸುವ ಅತ್ಯಾಧುನಿಕ ಕಾನ್ಸರೆನ್ಸ್ ಹಾಲ್, 'ಸಾಗರ ರತ್ನ' ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್ 140 ಮಂದಿಗೆ ಆಸನ ವ್ಯವಸ್ಥೆಯ ಸಾಮರ್ಥ್ಯ ಹೊಂದಿದೆ. ಇದಲ್ಲದೆ, 50 ಮಂದಿ ಕುಳಿತುಕೊಂಡು ತಿನ್ನುವಷ್ಟು ಸಾಮರ್ಥ್ಯವುಳ್ಳ ಮಾಂಸಾಹಾರಿ ರೆಸ್ಟೋರೆಂಟ್ "ಕೋರಲ್" ಪ್ರತ್ಯೇಕ ಇದೆ. ಇಂದಿನ ಪೀಳಿಗೆಯ ಜನರ ಗುಣಮಟ್ಟದ ಜೀವನಕ್ಕೆ ಮತ್ತು ಧರ್ಮಸ್ಥಳಕ್ಕೆ ದೂರದ ಊರುಗಳಿಂದ ಬರುವ ಗಣ್ಯರಿಗೆ ಐಷಾರಾಮಿ ಹೊಟೇಲ್ ಲಭ್ಯವಾಗಲಿದೆ.
Ocean Pearl Hotels Pvt. Ltd, whose crown of jewels is already resplendent with three gems in the state of Karnataka namely The Ocean Pearl, Mangaluru, The Ocean Pearl, Udupi and The Ocean Pearl Inn, Mangaluru have now naugurated their new Hotel in Ujire on 30 September 2022. Ocean Pearl Hotels belongs to the prestigious JRB Group of Mr Jayaram Banan the doyen of the Hospitality industry with forays into Restaurant Business; Outdoor catering services; Banqueting; Canteen operations etc. The Group’s Sagar Ratna Brand is a chain of Vegetarian Restaurants with more than 150 footprints mostly across the northern states of the country and the NCT of Delhi besides having a presence in the state of Karnataka is internationally reputed and is reckoned as the largest chain of vegetarian restaurants in the country.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm