ಬ್ರೇಕಿಂಗ್ ನ್ಯೂಸ್
26-09-22 03:24 pm Mangalore Correspondent ಕರಾವಳಿ
ಮಂಗಳೂರು, ಸೆ.26: ಮಲಪ್ರಭಾ ಯೋಜನೆಯಲ್ಲಿ 420 ಕೋಟಿ ಅವ್ಯವಹಾರ ಆಗಿದೆಯೆಂದು ನನ್ನ ಮೇಲೆ ನಳಿನ್ ಕುಮಾರ್ ಕಟೀಲು ಆರೋಪ ಮಾಡಿದ್ದಾರೆ. ಆ ಪುಣ್ಯಾತ್ಮನಿಗೆ ಮಲಪ್ರಭಾ ಅಂದ್ರೇನು, ವಾರಾಹಿ ಅಂದ್ರೇನು ಅಂತ ಗೊತ್ತಾ.. ಮಲಪ್ರಭಾ ಯೋಜನೆಯನ್ನು ಬಿಜೆಪಿ ಶಾಸಕ ಚರಂತಿಮಠ ಸೇರಿದಂತೆ ತಜ್ಞರ ವರದಿ ಆಧರಿಸಿ ಮಾಡಲಾಗಿತ್ತು. ನನ್ನ ಮೇಲೆ ವಿನಾಕಾರಣ ಆರೋಪ ಮಾಡಿದ ನಳಿನ್ ಕುಮಾರ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಲಪ್ರಭಾದಲ್ಲಿ ಯಾವುದೇ ಕಾಲುವೆ ಇರಲಿಲ್ಲ, ಬರೀ ಹಳ್ಳ ಮಾತ್ರ ಇತ್ತು. ಕಪ್ಪು ಮಣ್ಣು ಗಟ್ಟಿ ಪ್ರದೇಶ ಆಗಿದ್ದರಿಂದ ಯೋಜನಾ ವೆಚ್ಚದ ಬಗ್ಗೆ ಸಾಕಷ್ಟು ಚರ್ಚೆ ನಡೆಸಿಯೇ ಮಾಡಲಾಗಿತ್ತು. ಮಲಪ್ರಭಾ ಕಾಲುವೆ ಯೋಜನೆ ನನ್ನದು ಎನ್ನುವುದಕ್ಕೆ ಹೆಮ್ಮೆ ಇದೆ. ಆನಂತರ ಯಡಿಯೂರಪ್ಪ ಕಾಲದಲ್ಲಿ ಯೋಜನೆಗೆ ಹೆಚ್ಚುವರಿ ಅನುದಾನ ನೀಡಿದ್ದಾರೆ. ನನ್ನ ಮೇಲೆ 420 ಕೋಟಿ ಎಂದು ಹೇಳಿದವರು, ಯಡಿಯೂರಪ್ಪ ಬಗ್ಗೆ 820 ಅಂತ ಹೇಳುತ್ತಾರೆಯೇ? ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಲಪ್ರಭಾ ಬಗ್ಗೆ ಏನು ಗೊತ್ತಿದೆಯೋ ಗೊತ್ತಿಲ್ಲ. ಯಾವುದೇ ಪರಿಜ್ಞಾನ ಇಲ್ಲದೆ ಆರೋಪ ಮಾಡಿದ್ದಾರೆ. ಎಲ್ಲ ದಾಖಲೆ ಇಟ್ಟು ಲೀಗಲ್ ನೋಟೀಸ್ ಕೊಡುತ್ತೇನೆ ಎಂದು ಹೇಳಿದ್ದಾರೆ.
ದೇಶ ಅಭಿವೃದ್ಧಿ ಆಗಿದ್ದರೆ ಕಾಂಗ್ರೆಸ್ ಕಾರಣ..
70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಯವರು ಕೇಳುತ್ತಾರೆ. ದೇಶದ ಇಷ್ಟು ಅಭಿವೃದ್ಧಿ ಆಗಿದ್ದರೆ, ಅದು ಕಾಂಗ್ರೆಸ್ ಸರಕಾರದ ಯೋಜನೆಗಳಿಂದ. ಎಚ್ ಎಎಲ್, ಎಚ್ಎಂಟಿಯಿಂದ ಹಿಡಿದು ನೂರಾರು ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಏಮ್ಸ್ ವರೆಗೆ ಆಸ್ಪತ್ರೆ ಕಟ್ಟಿದ್ದೇವೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಐಐಟಿ ವರೆಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದೇವೆ. ಸೂಜಿಯಿಂದ ಹಿಡಿದು ಎಲ್ಲವನ್ನೂ ಉತ್ಪಾದಿಸಿದ್ದು, ನೀರಾವರಿ, ಆಹಾರದ ಕೊರತೆ ನಿವಾರಿಸಿದ್ದು ಕಾಂಗ್ರೆಸ್ ಪಕ್ಷ. ಇವೆಲ್ಲ 2014ರಲ್ಲಿ ಮೋದಿ ಬಂದ ಬಳಿಕ ಆಗಿದ್ದುವಲ್ಲ. ಇವರು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆಂದು ಹೇಳಿದ್ದರಲ್ಲ. ಎಂಟು ವರ್ಷದಲ್ಲಿ 16 ಕೋಟಿ ಉದ್ಯೋಗ ಆಗಬೇಕಿತ್ತು. 2014ಕ್ಕೂ ಮೊದಲು ಕಚ್ಚಾತೈಲಕ್ಕೆ 140 ಡಾಲರ್ ಇತ್ತು. ಪೆಟ್ರೋಲಿಗೆ ದೇಶದಲ್ಲಿ 65 ರೂ. ಅಷ್ಟೇ ಇತ್ತು. ಈಗ 80 ಡಾಲರ್ ನಿಂದ 120 ಡಾಲರ್ ವರೆಗೆ ಏರಿಳಿತ ಆಗಿದೆ, ಅಷ್ಟಕ್ಕೇ ಪೆಟ್ರೋಲಿಗೆ 110 ರೂ. ಮಾಡಿದ್ದಾರೆ. ಗ್ಯಾಸ್, ಅಡುಗೆ ಎಣ್ಣೆ ಎಲ್ಲದಕ್ಕೂ ಡಬಲ್ ಆಗಿದೆ.
ಅಚ್ಚೇ ದಿನ್ ಬೇಡ, ಬೂರೇ ದಿನ್ ಕೊಡಿ
ಹೀಗಾಗಿ ಜನ ಕೇಳುತ್ತಿದ್ದಾರೆ, ಅಚ್ಚೇ ದಿನ್ ಬೇಡ, ಈ ಹಿಂದೆ ಇದ್ದ (ಬೂರೇ ದಿನ್) ಕೆಟ್ಟ ದಿನಗಳನ್ನೇ ನಮಗೆ ಕೊಡಿ. ಹಿಂದೆ ಪೆಟ್ರೋಲಿಂದ ಹಿಡಿದು ಎಲ್ಲದಕ್ಕೂ ಕಡಿಮೆ ದರ ಇತ್ತು. ಅದೇ ಕಾಲ ಬರಲಿ ಅಂತ. ಕೊರೊನಾ ಕಾಲದಲ್ಲಿ ಜನರಿಗೆ ದುಡ್ಡು ಕೊಡಬೇಕಿತ್ತು. ಆದರೆ ಇವರು 25 ಲಕ್ಷ ಕೋಟಿಯೆಂದು ಘೋಷಣೆ ಮಾಡಿದ್ದು ಮಾತ್ರ. ಜನರ ಕೈಗೆ ಯಾವುದನ್ನೂ ತಲುಪಿಸಿಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ಹೇಳಿ ಖಾಸಗಿ ಇನ್ಶೂರೆನ್ಸ್ ಕಂಪನಿಗಳನ್ನು ಪೋಷಿಸಿದ್ರು. 60 ಸಾವಿರ ಕೋಟಿ ರೂಪಾಯಿ ಜನರ ದುಡ್ಡನ್ನು ಪಡೆದು ಇನ್ಶೂರೆನ್ಸ್ ಕಂಪನಿಗಳು ತಮ್ಮ ಆಸ್ತಿ ದುಪ್ಪಟ್ಟು ಮಾಡಿಕೊಂಡವು.
ಗುಜರಾತ್ ಮಾಡೆಲ್ ಹೋಯ್ತು ಈಗ ಯುಪಿ ಮಾಡೆಲ್
ಕರ್ನಾಟಕಕ್ಕೆ ಕರ್ನಾಟಕವೇ ಮಾಡೆಲ್. ರಾಜ್ಯದ ಬಿಜೆಪಿಯವರು ಯುಪಿ ಮಾಡೆಲ್ ಅಂತ ಹೇಳುತ್ತಿದ್ದಾರೆ. ಹಿಂದೆ ಗುಜರಾತ್ ಮಾಡೆಲ್ ಅಂತ ಹೇಳ್ತಾ ಇದ್ರು. ಅದೀಗ ಹೋಗಿದ್ದು ಯುಪಿಯನ್ನು ಮಾಡೆಲ್ ಮಾಡುವುದಾಗಿ ಹೇಳುತ್ತಿದ್ದಾರೆ. ಶಾಸಕರನ್ನು ಖರೀದಿಸಿ ಸರಕಾರ ತಂದು ರಾಜ್ಯದ ಗೌರವ ಮಣ್ಣು ಪಾಲು ಮಾಡಿದ್ದಾರೆ. ನಲ್ವತ್ತು ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದು ಗುತ್ತಿಗೆದಾರರು. 2021ರ ಜುಲೈನಲ್ಲಿ ಪ್ರಧಾನಿಗೆ ಪತ್ರ ಬರೆದು ಕಮಿಷನ್ ಬಗ್ಗೆ ದೂರು ಹೇಳಿಕೊಂಡಿದ್ದರು. ಪ್ರಧಾನಿ ಪ್ರಾಮಾಣಿಕ ಆಗಿದ್ದರೆ ತನಿಖೆ ಮಾಡಿಸಬೇಕಿತ್ತು. ನಾ ಖಾವೂಂಗಾ, ನಾ ಖಾನೇ ದೂಂಗಾ ಎನ್ನುವ ಮೋದಿ, ಈ ಆರೋಪದ ಬಗ್ಗೆ ಒಂದು ವರ್ಷ ಆದ್ರೂ ಯಾಕೆ ತನಿಖೆ ಮಾಡಿಸಿಲ್ಲ. ಇಡಿ, ಐಟಿಯವರು ಇಲ್ಲಿ ಕಮಿಷನ್ ತಿಂದವರ ಮೇಲೆ ರೇಡ್ ಮಾಡಬೇಕಿತ್ತು. ವಿರೋಧ ಪಕ್ಷಗಳ ನಾಯಕರ ಮೇಲೆ ಮಾತ್ರ ಯಾಕೆ ದಾಳಿ ಮಾಡುತ್ತಿದ್ದಾರೆ ಎಂದು ಎಂಬಿ ಪಾಟೀಲ ಪ್ರಶ್ನೆ ಮಾಡಿದರು.
ಭ್ರಷ್ಟಾಚಾರಕ್ಕೆ ಜಾತಿ ಇದೆಯಾ ?
ಪೇ ಸಿಎಂ ಅಭಿಯಾನದ ಬಗ್ಗೆ ಲಿಂಗಾಯತರ ಅವಹೇಳನ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಭ್ರಷ್ಟಾಚಾರಕ್ಕೆ ಜಾತಿ ಇದೆಯಾ.. ಭ್ರಷ್ಟಾಚಾರವೇ ಒಂದು ಜಾತಿ. ಅದರಲ್ಲಿ ಯಾವುದೇ ಜಾತಿ ಬರಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಹುದ್ದೆ ಬಗ್ಗೆ ಶಾಸಕಾಂಗ ಪಕ್ಷ ನಿರ್ಧರಿಸುತ್ತದೆ, ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಸಿಎಂ ಆಗಬೇಕೆಂದು ಅವರ ಅಭಿಮಾನಿಗಳು ಹೇಳುತ್ತಾರೆ. ಕೊನೆಗೆ ವೀಕ್ಷಕರು ಬಂದು ಶಾಸಕರ ಅಭಿಪ್ರಾಯ ಕೇಳಿ ನಿರ್ಧರಿಸುತ್ತಾರೆ. ರಾಜ್ಯದ ಜನರು ಭ್ರಮನಿರಸನಗೊಂಡಿದ್ದಾರೆ. 130ರಿಂದ 140 ಸೀಟುಗಳನ್ನು ಕಾಂಗ್ರೆಸ್ ಪಡೆಯಲಿದೆ, ಮುಂದಿನ ಬಾರಿ ಅಧಿಕಾರಕ್ಕೇರುವುದು ಶತಸ್ಸಿದ್ಥ ಎಂದು ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಂಜುನಾಥ ಭಂಡಾರಿ, ಯುಟಿ ಖಾದರ್, ಹರೀಶ್ ಕುಮಾರ್, ಮಿಥುನ್ ರೈ ಮತ್ತಿತರರಿದ್ದರು.
Karnataka Pradesh Congress Committee (KPCC) Campaign Committee president MB Patil on said that failure of BJP should be made public.Addressing media on Monday September 26, he said, “Sonia Gandhi has given me responsibility of KPPCC campaign committee president. We intend to make public the failures of BJP. Congress has made enormous contribution to the nation in the last 70 years. What does even MP Naleen know about Malaparabha project, MB Patil slams party in Mangalore.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm