ಬ್ರೇಕಿಂಗ್ ನ್ಯೂಸ್
16-09-22 05:17 pm Mangalore Correspondent ಕರಾವಳಿ
ಉಳ್ಳಾಲ, ಸೆ.16 : ಹೆದ್ದಾರಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಮೀನು ಸಾಗಿಸುವ ಕ್ಯಾಂಟರ್ ಲಾರಿ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ರಾ.ಹೆ. 66 ರ ತೊಕ್ಕೊಟ್ಟು ಬೈಪಾಸ್ ನಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ, ಕುಂಬಳೆ ಉಲ್ಲೋಡಿ ನಿವಾಸಿ ನಿತಿನ್ ಮಾನ್ಯ(27) ಮೃತ ಯುವಕ. ನಿತಿನ್ ಅವರು ಟೆಲ್ಕೊ ಸೋಲಾರ್ ಕಂಪನಿಯ ಕಾಸರಗೋಡು ಶಾಖೆಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದರಂತೆ. ಅವರಿಂದು ಕೃಷ್ಣ ಪ್ರಸಾದ್ ಎಂಬವರ ಮೋಟಾರ್ ಬೈಕಲ್ಲಿ ಮಂಗಳೂರಿಗೆ ಬಂದು ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.



ನಿತಿನ್ ಬೈಕಲ್ಲಿ ಮಂಗಳೂರಿನಿಂದ ಕುಂಬಳೆಗೆ ವಾಪಸಾಗುತ್ತಿದ್ದ ವೇಳೆ ತೊಕ್ಕೊಟ್ಟು ಸಮೀಪದ ಬೈಪಾಸ್ ಹೆದ್ದಾರಿಯಲ್ಲಿ ವಾಹನಗಳ ವೇಗ ಮಿತಿಗಾಗಿ ಹಾಕಲಾಗಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟಿದ್ದಾರೆ. ಇದೇ ವೇಳೆ ಕೇರಳಕ್ಕೆ ಧಾವಿಸುತ್ತಿದ್ದ ಮೀನು ತುಂಬಿದ ಕ್ಯಾಂಟರ್ ಲಾರಿ ನಿತಿನ್ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಕೃಷ್ಣಪ್ರಸಾದ್ ಅವರ ಬೈಕನ್ನ ನಿತಿನ್ ಕಳೆದ ಎರಡು ವಾರಗಳಿಂದ ಬಳಸುತ್ತಿದ್ದರಂತೆ. ನಿತಿನ್ ಅವರು ಇಂದು ಮಂಗಳೂರಿಗೆ ಯಾಕಾಗಿ ಬಂದಿದ್ದಾರೆಂದು ತಿಳಿದಿಲ್ಲ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
A 22-year-old youth was killed in a road accident at Kumpala Bypass road on National Highway here in Mangalore. The deceased is identified as Nithin Manya, a resident of Kumble in Kasargod. He was killed after the truck rammed him.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm