ಬ್ರೇಕಿಂಗ್ ನ್ಯೂಸ್
08-10-20 09:53 am Headline Karnataka News Network ಕರಾವಳಿ
ಮಂಗಳೂರು, ಅಕ್ಟೋಬರ್. 08 : ತುಳು ಅಕಾಡೆಮಿ ಮಾಜಿ ಸದಸ್ಯ, ಹಿರಿಯ ತುಳು ಸಾಹಿತಿ, ತುಳು ಸಂಘಟಕ ಶಿವಾನಂದ ಕರ್ಕೇರ (73) ತಮ್ಮ ಮನೆಯಲ್ಲಿ ಮಹಡಿಯಿಂದ ಜಾರಿ ಬಿದ್ದು ನಿಧನರಾಗಿದ್ದಾರೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಶಿವಾನಂದ ಕರ್ಕೇರ ಅವರು ಪಾಂಡೇಶ್ವರದ ಅಪಾರ್ಟ್ಮೆಂಟ್ ನಿಂದ ಹೊರಗೆ ಬಂದಿದ್ದು ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕೆಳಗೆ ಬಿದ್ದಿದ್ದು ಹೇಗೆ ಎನ್ನುವುದು ಸರಿಯಾಗಿ ಯಾರಿಗೂ ಗೊತ್ತಿಲ್ಲ. ಅಪಾರ್ಟ್ಮೆಂಟ್ ಗೇಟ್ ಹೊರ ಭಾಗದಲ್ಲಿ ಕರ್ಕೇರ ಅವರು ಬಿದ್ದಿರುವುದನ್ನು ಪಕ್ಕದ ಮನೆಯ ಮಗುವೊಂದು ನೋಡಿ, ಹೆತ್ತವರಿಗೆ ತಿಳಿಸಿದೆ. ಕೂಡಲೇ ಅವರನ್ನು ಸ್ಥಳೀಯರು ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಿದ್ದು ,ಅದಾಗಲೇ ಮೃತಪಟ್ಟಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ಮಾಜಿ ಅಧಿಕಾರಿಯಾಗಿದ್ದ ಕರ್ಕೇರ ಅವರು, ನಿವೃತ್ತಿ ಬಳಿಕ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ತುಳು ನಾಟಕ, ಕವನ ಬರೆಯುವ ಹವ್ಯಾಸ ಹೊಂದಿದ್ದರು. ಇವರು ಕಡಲ್ ಕವಿತಾ ಸಂಕಲನ ಮತ್ತು ಎರು ಮೈಂದೆ ನಾಟಕಗಳಿಗೆ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.
ಗೋಕರ್ಣನಾಥ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷರು, ಯಕ್ಷಾಂಗಣದ ಸ್ಥಾಪಕ ಉಪಾಧ್ಯಕ್ಷರು ಆಗಿದ್ದರು. ಇವರು ತುಳು ಅಕಾಡೆಮಿ ಸದಸ್ಯರಾಗಿದ್ದ ಅವಧಿಯಲ್ಲಿ ತುಳು ಭಾಷೆಯಲ್ಲಿ ಮೊದಲ ಬಾರಿಗೆ ಎಂಎ ಸ್ನಾತಕೋತ್ತರ ಪದವಿ ಆರಂಭಗೊಂಡಿತ್ತು. ಮೊದಲ ಬ್ಯಾಚಿನಲ್ಲಿ ತುಳು ಎಂ.ಎ. ವಿದ್ಯಾರ್ಥಿಯಾಗಿ ಸೇರಿದ್ದಲ್ಲದೆ ತುಳು ಕಲಿಯಬೇಕೆಂಬ ನೆಲೆಯಲ್ಲಿ ಕಿರಿಯರಿಗೆ ಪ್ರೋತ್ಸಾಹ ತುಂಬುತ್ತಿದ್ದರು. ಆರೋಗ್ಯದಲ್ಲಿ ತುಂಬು ಜವ್ವನ ಹೊಂದಿದ್ದ ಕರ್ಕೇರ ಅವರು, ಹಠಾತ್ ನಿಧನರಾಗಿರುವುದು ಅವರ ಆಪ್ತರಲ್ಲಿ ಮತ್ತು ತುಳು ಸಂಘಟಕರಲ್ಲಿ ದಿಗ್ಭ್ರಮೆ ಮೂಡಿಸಿದೆ
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am