ಬ್ರೇಕಿಂಗ್ ನ್ಯೂಸ್
08-09-22 11:04 pm Udupi Correspondent ಕರಾವಳಿ
ಉಡುಪಿ, ಸೆ.9: ಪ್ರೀತಿಸಿ ಮದುವೆಯಾಗಿದ್ದ ವರನೇ ಪತ್ನಿಯನ್ನು ಹಣಕ್ಕಾಗಿ ಪೀಡಿಸಿದ್ದಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುವ ನೆಪದಲ್ಲಿ ಹೆಂಡ್ತಿಗೆ ವಿಷ ಕೊಟ್ಟು ಕೊಲ್ಲಿಸಿ ತಾನು ಸ್ವಲ್ಪ ವಿಷ ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ಉಡುಪಿಯಲ್ಲಿ ನಡೆದಿದೆ.
ವಿದ್ಯಾ ಮತ್ತು ಯತಿನ್ ರಾಜ್ ಎಂಬ ದಂಪತಿ ಸೆ.1ರಂದು ಉಚ್ಚಿಲ ಮುಳ್ಳಗುಡ್ಡೆಯ ಮನೆಯಲ್ಲಿ ವಿಷ ಸೇವನೆ ಮಾಡಿದ್ದರು ಎನ್ನಲಾಗಿದೆ. ವಿದ್ಯಾಳನ್ನು ಐಸಿಯು ಘಟಕದಲ್ಲಿ ದಾಖಲಿಸಿ, ಚಿಕಿತ್ಸೆ ನೀಡಿದರೂ ಬದುಕಿಸಲು ಸಾಧ್ಯವಾಗಲಿಲ್ಲ. ಸೆ.7ರಂದು ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾಳೆ. ಈ ಬಗ್ಗೆ ವಿದ್ಯಾಳ ಅಕ್ಕ ಲೀಲಾವತಿ ಪಡುಬಿದ್ರೆ ಠಾಣೆಯಲ್ಲಿ ದೂರು ನೀಡಿದ್ದು, ಯತಿನ್ ರಾಜ್ ಮತ್ತು ಆತನ ಹೆತ್ತವರ ಬಗ್ಗೆ ಆರೋಪ ಮಾಡಿದ್ದಾರೆ.
ಯತಿನ್ ರಾಜ್, ತಂದೆ ರಘು ಮತ್ತು ತಾಯಿ ಗೀತಾ ಕೂಡ ಹಣಕ್ಕಾಗಿ ಸೊಸೆಯನ್ನು ಪೀಡಿಸುತ್ತಿದ್ದರು. ಸಾಲ ತೆಗೆದು ಹಣ ಕೊಡುವಂತೆ ಹೇಳುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. 2017ರಲ್ಲಿ ವಿದ್ಯಾ ಮತ್ತು ಯತಿನ್ ರಾಜ್ ಪ್ರೀತಿಸಿ ಮದುವೆಯಾಗಿದ್ದು ಮುಳ್ಳುಗುಡ್ಡೆಯ ಮನೆಯಲ್ಲಿ ವಾಸವಿದ್ದರು. ಆದರೆ, ಮದುವೆಯ ನಂತರ ಯತಿನ್ ರಾಜ್ ಪತ್ನಿಯನ್ನು ಪೀಡಿಸಲು ಶುರು ಮಾಡಿದ್ದಾನೆ. ಹಣ ತರುವಂತೆ ಪತ್ನಿಗೆ ಹಲ್ಲೆ ಮಾಡುತ್ತಿದ್ದ. ಯತಿನ್ ಗೆ ನಿಶ್ಚಿತ ಉದ್ಯೋಗ ಇರಲಿಲ್ಲ. ಹೀಗಾಗಿ ಪ್ರತಿ ಬಾರಿ ಹಣ ತೆಗೆದುಕೊಡುವಂತೆ ಮತ್ತು ತಾಯಿ ಮನೆಯಿಂದ ಹಣ ತಂದುಕೊಡುವಂತೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಂದರ್ಭದಲ್ಲಿ ಹೆತ್ತವರು ಮಾಡಿಕೊಟ್ಟಿದ್ದ ಚಿನ್ನವನ್ನೆಲ್ಲ ಮಾರಿ ಮುಗಿಸಿದ್ದಾನೆ ಎಂದು ಅಕ್ಕ ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ, ಗಂಡನ ಮನೆಯವರ ಕಿರುಕುಳ ತಪ್ಪಿಸಲೆಂದು ಕಾಪು ಬಳಿ ಬಾಡಿಗೆ ಮನೆ ಮಾಡಿದ್ದರು. ಆದರೂ ಯತಿನ್ ರಾಜ್ ಸ್ವಭಾವ ಬದಲಿಸಿರಲಿಲ್ಲ. ಇದೀಗ ಪತಿಯೇ ಪತ್ನಿಯನ್ನು ವಿಷ ಕೊಟ್ಟು ಕೊಲ್ಲಿಸಿದ್ದಾನೆ ಎಂದು ದೂರಿದ್ದಾರೆ.
A 29-year-old woman died in a private hospital in Udupi on Wednesday, September 7 in the morning after efforts to treat her failed.Vidya had fallen in love with Yatin Raj and was happily married to him before he forced her to take loans and started constantly harassing her for more money. On September 1, the Yatin fed Vidya with poison at their house in Uchchila Mullagudde and consumed a small quantity of it himself and was admitted to a private hospital in Udupi.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm