ಬ್ರೇಕಿಂಗ್ ನ್ಯೂಸ್
08-09-22 05:18 pm Mangalore Correspondent ಕರಾವಳಿ
ಮಂಗಳೂರು, ಸೆ.8: ಬಿಹಾರದ ಪಾಟ್ನಾದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ದಿಢೀರ್ ಬಂಟ್ವಾಳದ ಬಿಸಿ ರೋಡ್ ಬಳಿಯ ರಿಯಾಜ್ ಮನೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಮಧ್ಯಾಹ್ನ ವರೆಗೂ ವಿಚಾರಣೆ ನಡೆಸಿದ್ದು, ಆನಂತರ ಅಲ್ಲಿಂದ ತೆರಳಿದ್ದಾರೆ. ರಿಯಾಜ್ ಮತ್ತು ಅವರ ಪತ್ನಿಯ ಮೊಬೈಲ್ ಇನ್ನಿತರ ಸಾಕ್ಷ್ಯಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿಗಳಿವೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ರಿಯಾಜ್ ಫರಂಗಿಪೇಟೆ, ಬಿಹಾರದಲ್ಲಿ ಕಳೆದ ಜುಲೈನಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾಗಿ ತಿಳಿಸಿದ್ದಾರೆ. ಪ್ರಕರಣ ಸಂಬಂಧಿಸಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಎನ್ಐಎ ಅವರ ಎಲ್ಲ ತನಿಖೆಗೂ ಸಹಕಾರ ನೀಡುತ್ತೇನೆ. ಆದರೆ, ಎನ್ಐಎಯವರು ಸರಿಯಾದ ವರದಿಯನ್ನೇ ನೀಡಬೇಕು. ಕೇಂದ್ರ ಸರಕಾರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಬೇಕಾದಂತೆ ವರದಿ ನೀಡುವುದಲ್ಲ ಎಂದು ಹೇಳಿದ್ದಾರೆ.
ಪಾರದರ್ಶಕವಾಗಿಯೇ ತನಿಖೆ ನಡೆಸಲಿ. ಮುಂದೆಯೂ ತನಿಖೆಗೆ ಸಹಕರಿಸುತ್ತೇನೆ. ಬಿಹಾರದ ಪಾಟ್ನಾದಲ್ಲಿ ಕಳೆದ ಜುಲೈನಲ್ಲಿ ಪ್ರಧಾನಿ ಆಗಮಿಸಿದ್ದ ಸಂದರ್ಭದಲ್ಲಿ ಐದು ಮಂದಿಯನ್ನು ಬಂಧಿಸಿದ್ದರು. ಅದರಲ್ಲಿ ಒಬ್ಬ ಎಸ್ಡಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಇದ್ದಾನೆ. ನನಗೆ ಪಕ್ಷದ ಕಡೆಯಿಂದ ಬಿಹಾರದ ಉಸ್ತುವಾರಿ ಕೊಟ್ಟಿದ್ದಾರೆ. ಹಾಗಾಗಿ ಅಲ್ಲಿ ಹೋಗಿ ಮೀಟಿಂಗ್ನಲ್ಲಿ ಭಾಗವಹಿಸುತ್ತೇನೆ. ಎನ್ಐಎ ಅಧಿಕಾರಿಗಳು ಪ್ರಕರಣ ಸಂಬಂಧಿಸಿ ನನ್ನಲ್ಲಿ ಏನಾದ್ರೂ ಮಾಹಿತಿ ಇದೆಯಾ ಅಂತ ವಿಚಾರಣೆ ನಡೆಸಿದ್ದಾರೆ. ನನಗೆ ಗೊತ್ತಿರುವುದನ್ನು ಹೇಳಿದ್ದೇನೆ ಎಂದು ರಿಯಾಜ್ ಹೇಳಿದ್ದಾರೆ.
ವಿಶನ್ -2047 ಪುಸ್ತಕ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಯಾಜ್, ಆ ಪುಸ್ತಕವನ್ನು ಯಾವುದೋ ಫೌಂಡೇಶನ್ನವರು ಮಾಡಿದ್ದು. ಅದಕ್ಕೂ ಎಸ್ಡಿಪಿಐ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದಲೂ ಸ್ಪಷ್ಟನೆ ನೀಡಲಾಗಿತ್ತು. ಉತ್ತರ ಪ್ರದೇಶದಲ್ಲಿಯೂ ಹಲವು ಕಡೆ ಆ ಪುಸ್ತಕ ಪತ್ತೆಯಾಗಿತ್ತು. ಬಿಹಾರದಲ್ಲಿ ಅರೆಸ್ಟ್ ಆಗಿದ್ದ ಪ್ರಕರಣದಲ್ಲಿ ಪುಸ್ತಕವನ್ನು ತೋರಿಸಿದ್ದಾರೆ. ಅದು ಎನ್ಐಎ ಅಧಿಕಾರಿಗಳೇ ನಮ್ಮ ಮೇಲೆ ಗೂಬೆ ಕೂರಿಸಲು ಮಾಡಿದ್ದು ಎಂದು ಹೇಳಿದ್ದಾರೆ.
ಪಾಟ್ನಾಕ್ಕೆ ಪ್ರಧಾನಿ ಭೇಟಿ ಬೆನ್ನಲ್ಲೇ ಪ್ರಕರಣ
ಕಳೆದ ಜುಲೈ 12ರಂದು ಪ್ರಧಾನಿ ಮೋದಿ ಪಾಟ್ನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ್ದ ಬಿಹಾರ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು. ಎಸ್ಡಿಪಿಐ, ಪಿಎಫ್ಐನಲ್ಲಿ ಸಕ್ರಿಯವಾಗಿದ್ದವರನ್ನು ವಶಕ್ಕೆ ಪಡೆಯಲಾಗಿತ್ತು. ಮೋದಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಹುನ್ನಾರ ನಡೆದಿತ್ತು ಅನ್ನುವ ಶಂಕೆಯೂ ವ್ಯಕ್ತವಾಗಿತ್ತು. ಅದೇ ಸಂದರ್ಭದಲ್ಲಿ ಪಾಟ್ನಾದ ಫುಲ್ವಾರಿ ಶರೀಫ್ ಎಂಬಲ್ಲಿ ದಾಳಿ ನಡೆಸಿದ್ದಾಗ, ಎಸ್ಡಿಪಿಐ ಕಡೆಯಿಂದ ಶಸ್ತ್ರಾಸ್ತ್ರ ತರಬೇತಿ ನಡೆಯುತ್ತಿದ್ದುದು ಪತ್ತೆಯಾಗಿತ್ತು. ಅಲ್ಲದೆ, ವಿಶನ್ 2047 ಎನ್ನುವ ಹೆಸರಲ್ಲಿ ಏಳು ಪುಟಗಳ ಬರಹಗಳಿದ್ದ ಪುಸ್ತಕ ಪತ್ತೆಯಾಗಿತ್ತು. ಅದರಲ್ಲಿ ಭಾರತವನ್ನು 2047ರ ವೇಳೆಗ ಇಸ್ಲಾಮೀಕರಣ ನಡೆಸಲು ಸಂಚು ನಡೆಸಿರುವ ಬಗ್ಗೆ ಬರೆಯಲಾಗಿತ್ತು. ಒಟ್ಟು ಪ್ರಕರಣದಲ್ಲಿ ಐದು ಮಂದಿಯನ್ನು ಬಂಧಿಸಿದ್ದರೆ, ಹಲವಾರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆನಂತರ, ಪ್ರಕರಣವನ್ನು ಎನ್ಎಐ ಎತ್ತಿಕೊಂಡಿದ್ದು, ಇದೀಗ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಬಿಹಾರ ರಾಜ್ಯ ಉಸ್ತುವಾರಿ ಹೊಂದಿರುವ ರಿಯಾಜ್ ಪರಂಗಿಪೇಟೆ ಅವರನ್ನು ವಿಚಾರಣೆಗೆ ಒಳಪಡಿಸಿದೆ.
ಎಸ್ಡಿಪಿಐ ಮುಖಂಡ ರಿಯಾಜ್ ಪರಂಗಿಪೇಟೆ ಮನೆಗೆ ಎನ್ಐಎ ದಾಳಿ ; 'ವಿಶನ್-2047 ಇಸ್ಲಾಮಿಕ್ ಇಂಡಿಯಾ' ಪ್ರಕರಣದಲ್ಲಿ ವಿಚಾರಣೆ
Terror funding operations in Bihar SDPI leader Riyaz Farangipete grilled by NIA after a raid on his house at Bantwal in Mangalore, his mobile has been confiscated by the NIA team.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm