ಬ್ರೇಕಿಂಗ್ ನ್ಯೂಸ್
06-09-22 10:30 pm Mangalore Correspondent ಕರಾವಳಿ
ಮಂಗಳೂರು, ಸೆ.6: ಮಣಿಪಾಲ್ ಗ್ರೂಪ್ ಆಫ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ, ಹೆಸರಾಂತ ಉದ್ಯಮಿ ಟಿವಿ ಮೋಹನದಾಸ್ ಪೈ ಅವರ ತಾಯಿ ವಿಮಲಾ ಪೈ ನಿಧನರಾಗಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದವರಾದ ವಿಮಲಾ ಪೈ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. 1956ರಲ್ಲಿ ಮಂಗಳೂರಿನ ಟಿ ವೆಂಕಟರಮಣ ಪೈ ಅವರನ್ನು ವಿವಾಹವಾಗಿದ್ದರು. ಕರ್ನಾಟಕದ ವಿವಿಧೆಡೆ 35 ವರ್ಷಗಳ ಕಾಲ ಶಿಕ್ಷಕಿಯಾಗಿದ್ದು ನಿವೃತ್ತರಾಗಿದ್ದರು. ಇವರಿಗೆ ಟಿವಿ ಮೋಹನದಾಸ್ ಪೈ, ರಾಮಚಂದ್ರ ಪೈ ಮತ್ತು ಸುಧಾ ಪೈ ಎಂಬ ಮೂವರು ಮಕ್ಕಳಿದ್ದಾರೆ. ಪತಿಯ ಜೊತೆಗೆ ಸುದೀರ್ಘ ಅವಧಿಯಿಂದ ಬೆಂಗಳೂರಿನಲ್ಲೇ ನೆಲೆಸಿದ್ದರು. ಮಕ್ಕಳ ಪೈಕಿ ಮೋಹನದಾಸ್ ಪೈ ವಿಶೇಷ ಸಾಧನೆ ಮಾಡಿದ್ದಾರೆ.
ವಿಮಲಾ ಪೈ ಉದಾರ ದಾನಿಗಳಾಗಿದ್ದರು. ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಿದ್ದರು. ಅವರ ಪತಿ ಟಿವಿ ರಮಣ ಪೈ ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದರು. ಅವರ ಸ್ಮರಣಾರ್ಥ ತಾಯಿ ವಿಮಲಾ ಪೈಯವರ ಆಸೆಯಂತೆ, ಮಂಗಳೂರಿನಲ್ಲಿ ಟಿವಿ ರಮಣ ಪೈ ಸಭಾಂಗಣ ನಿರ್ಮಿಸಿದ್ದ ಮೋಹನದಾಸ ಪೈ, ಅದನ್ನು ಕೆನರಾ ಸಂಸ್ಥೆಗೆ ಬಿಟ್ಟು ಕೊಟ್ಟಿದ್ದರು.
ವಿಮಲಾ ಪೈ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳು ಚಿರಸ್ಮರಣೀಯವಾಗಿವೆ. ಅವರ ಅಗಲಿಕೆಯ ಹಿನ್ನಲೆಯಲ್ಲಿ ಅವರ ಸಾಧನೆ, ಕೊಡುಗೆಗಳನ್ನು ಸ್ಮರಿಸಿ ಕೆನರಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಎಂ.ರಂಗನಾಥ್ ಭಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Mangalore Padma Shri Awardee Mohandas Pai mother Vimala passes away. She was a teacher for about 35 years. T. V. Mohandas Pai is a Padma Shri Awardee and current Chairman of Manipal Global Education. He was a former director of Infosys, and Head – Administration, Education and Research, Financial, Human Resources of Infosys Leadership Institute
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm