ಬ್ರೇಕಿಂಗ್ ನ್ಯೂಸ್
05-09-22 09:45 pm Mangalore Correspondent ಕರಾವಳಿ
ಮಂಗಳೂರು, ಸೆ.5: ಪಂಚವಟಿ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ಅಕ್ರಮ ಮತ್ತು ವಂಚನೆ ಖಂಡಿಸಿ, ಹಣ ಕಳಕೊಂಡ ಸಂತ್ರಸ್ತರು ನೂರಾರು ಸಂಖ್ಯೆಯಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಕ್ಲಾಕ್ ಟವರ್ ಮುಂಭಾಗದಲ್ಲಿ ಸಂತ್ರಸ್ತರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಪಂಚವಟಿ ಸೊಸೈಟಿ ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲಿಸಿ, ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ 12.30ರ ವರೆಗೂ ಪ್ರತಿಭಟನೆ ನಡೆದಿದ್ದು, ಉಡುಪಿ, ಕಿನ್ನಿಗೋಳಿ, ಮೂಡುಬಿದ್ರೆಯಿಂದ ಆಗಮಿಸಿದ ಸಂತ್ರಸ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಬಳಿಕ ಪಂಚವಟಿ ಸೊಸೈಟಿ ವಿರುದ್ಧ ಧಿಕ್ಕಾರ ಕೂಗುತ್ತಾ ಕ್ಲಾಕ್ ಟವರ್ ಬಳಿಯಿಂದ ಕಮಿಷನರ್ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ್ದು, ಕಮಿಷನರ್ ಶಶಿಕುಮಾರ್ ಅನುಪಸ್ಥಿತಿಯಲ್ಲಿ ಡಿಸಿಪಿ ಅವರಲ್ಲಿ ಮನವಿ ಪತ್ರ ನೀಡಿದ್ದಾರೆ. ಪಂಚವಟಿ ಸೊಸೈಟಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿಗೆ ವಂಚನೆ ಆಗಿದೆ. ಕೋಟ್ಯಂತರ ರೂಪಾಯಿ ಹಣ ಕಳಕೊಂಡಿದ್ದಾರೆ. ಮಂಗಳೂರಿನಲ್ಲಿ ನಿರ್ದೇಶಕರಾಗಿದ್ದ ಸುಮತಿ ಹೆಗ್ಡ ಮತ್ತು ಮ್ಯಾನೇಜರ್ ಆಗಿದ್ದ ಅಕ್ಷತಾ ಅವರನ್ನು ಬಂಧಿಸಿ ಅವರ ಬಳಿಯಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು. ಬೆಂಗಳೂರಿನಲ್ಲಿರುವ ಸೊಸೈಟಿ ಕಚೇರಿಯನ್ನೂ ಮುಚ್ಚಲಾಗಿದ್ದು, ಎಂಡಿ ಆಗಿದ್ದ ಎನ್.ಎಚ್. ರಾಜು ಅವರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
2016ರಲ್ಲಿ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಆರಂಭಗೊಂಡಿದ್ದ ಪಂಚವಟಿ ಸೊಸೈಟಿಯಲ್ಲಿ ಸಾವಿರಾರು ಮಂದಿ ಆರ್ ಡಿ, ಡಿಪಾಸಿಟ್ ರೂಪದಲ್ಲಿ ಹಣ ಇಟ್ಟಿದ್ದಾರೆ. ಐದು ವರ್ಷ, 9 ವರ್ಷ ಡಿಪಾಸಿಟ್ ಇಟ್ಟಲ್ಲಿ ಡಬಲ್ ಆಗುತ್ತೆ ಎಂದು ನಂಬಿಸಿದ್ದರಿಂದ ಸಾವಿರಾರು ಮಂದಿ ಲಕ್ಷಾಂತರ ರೂ. ಹಣವನ್ನು ಡಿಪಾಸಿಟ್ ಇಟ್ಟಿದ್ದಾರೆ. ಆದರೆ ಎರಡು ವರ್ಷಗಳ ಹಿಂದೆ ದಿಢೀರ್ ಆಗಿ ಸೊಸೈಟಿ ಕಚೇರಿಯನ್ನು ಬಂದ್ ಮಾಡಿದ್ದಾರೆ. ಇದರಿಂದ ಹಣ ಇಟ್ಟಿದ್ದವರಿಗೆ ವಂಚನೆ ಆಗಿದೆ. ಬಹಳಷ್ಟು ಮಂದಿ ಹಣ ಇಟ್ಟವರಿಗೆ ನಕಲಿ ಬಾಂಡ್ ಕೊಟ್ಟು ಮೋಸ ಮಾಡಲಾಗಿದೆ ಎಂದು ಸಂತ್ರಸ್ತರು ಅಲವತ್ತುಕೊಂಡಿದ್ದಾರೆ.
Mangalore Panchawati Multistate CoOperative Credit Society fraud hundreds join in protest near clock tower in the leadership of KRS political party.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm