ಬ್ರೇಕಿಂಗ್ ನ್ಯೂಸ್
03-09-22 09:06 pm Mangalore Correspondent ಕರಾವಳಿ
ಉಳ್ಳಾಲ, ಆ.3 : ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರ ಸಂಚಾಲಕರೂ, ಧಾರ್ಮಿಕ ಮುಖಂಡರಾದ ಟಿ.ಜಿ ರಾಜಾರಾಂ ಭಟ್ ಅವರು ದಾನಿಗಳ ನೆರವಿಂದ ಅಶಕ್ತರಿಗಾಗಿ ಆರಂಭಿಸಿದ "ಆಸರೆ" ನೆರವಿನ ಹಸ್ತದ ಎರಡನೇ ಯೋಜನೆಯಡಿ ಗದಗ ಮೂಲದ ದಿ.ಶರಣಪ್ಪ ಅವರ ಕುಟುಂಬಕ್ಕೆ ಸುಸಜ್ಜಿತ ಗ್ರಾನೈಟ್ ನೆಲದ ತಾರಸಿ ಮನೆಯನ್ನ ನಿರ್ಮಿಸಿ ಕೊಟ್ಟಿದ್ದಾರೆ.
ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಎಂಬಲ್ಲಿ ಗದಗ ಮೂಲದ ದಿ.ಶರಣಪ್ಪ ಅವರ ಮಕ್ಕಳಿಗೆ ನಿರ್ಮಿಸಿದ ಸುಸಜ್ಜಿತ "ಆಸರೆ" ಮನೆಯ ಕೀಲಿ ಕೈಯನ್ನು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ಶನಿವಾರ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು ರಾಜಾರಾಮ್ ಭಟ್ ಅವರ ಕನಸಿನ ಅಶಕ್ತರ ಪಾಲಿನ ಆಶಾಕಿರಣವಾದ ಆಸರೆ ಮನೆಗಳು ದಾನಿಗಳು ಹಾಗೂ ಶ್ರಮಜೀವಿಗಳ ಕೊಡುಗೆ ಎಂದರು. ಪ್ರಸ್ತುತ ನಮ್ಮ ದೇಶದಲ್ಲಿ ಜನರು ಹಕ್ಕು ಮಾತ್ರ ಕೇಳುತ್ತಿದ್ದಾರೆಯೇ ಹೊರತು ತಮ್ಮ ಕರ್ತವ್ಯ, ಜವಬ್ದಾರಿಗಳನ್ನ ಮರೆಯುತ್ತಿದ್ದಾರೆ. ನೆರವಿನ ಆಸರೆಯಂತಹ ಕಾರ್ಯಕ್ರಮಗಳು ಸದಾ ಕಾಲ ಜನಮನ್ನಣೆಗೆ ಪಾತ್ರವಾಗಲಿದೆ ಎಂದರು.
ಆಸರೆ ಯೋಜನೆಯ ಮನೆಗಳ ನಿರ್ಮಾಣದ ರೂವಾರಿ ಟಿ.ಜಿ. ರಾಜಾರಾಂ ಭಟ್ ಮಾತನಾಡಿ, ನಮ್ಮ ಯೋಜನೆಯ ಮೊದಲ ಮನೆಯನ್ನ ನರಿಂಗಾನ ಗ್ರಾಮದ ಅಂಬುಗದ ನಾರಾಯಣ ಪೂಜಾರಿಯವರಿಗೆ ನಿರ್ಮಿಸಿ ಕೊಡಲಾಗಿತ್ತು. ಇದೀಗ ಎರಡನೇ ಮನೆಯನ್ನ ಶರಣಪ್ಪ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ನೂಜಿಪಡ್ಪುವಿನ ಮಾಧವ ಪೂಜಾರಿಯವರಿಗೆ ಮೂರನೇ ಮನೆ, ಚೇಳೂರಿನ ಸುರೇಶ್ ಪೂಜಾರಿಗೆ ನಾಲ್ಕನೇ ಮನೆ ಹಾಗೂ ಐದನೆಯದಾಗಿ ತಲೆಮುಗೇರಿನ ಕಮಲಾ ಪೂಜಾರ್ತಿ ಅವರ ಕುಟುಂಬಕ್ಕೆ ನಿರ್ಮಿಸಿ ಕೊಡಲು ಯೋಜನೆ ರೂಪಿಸಲಾಗಿದೆ. ದಾನಿಗಳ ನೆರವು, ದುಡಿದ ಸಂಬಳ ಪಡೆಯದ ಗುತ್ತಿಗೆದಾರರು, ಶ್ರಮದಾನಗೈದ ಶ್ರಮಜೀವಿಗಳ ನೆರವಿನಿಂದ ನಿರ್ಮಾಣವಾಗುತ್ತಿರುವ ಆಸರೆ ಮನೆಗಳನ್ನ ಇನ್ನಷ್ಟು ನಿರ್ಮಿಸುವ ಮಹಾದಾಸೆ ಇರಿಸಿರುವುದಾಗಿ ಹೇಳಿದರು.
ಆಸರೆ ಯೋಜನೆಯ ಎರಡನೇ ಫಲಾನುಭವಿ ದಿ.ಶರಣಪ್ಪ ಅವರ ಪುತ್ರ ಈಶ್ವರ್ ಮಾತನಾಡಿ, ನಮ್ಮ ಕುಟುಂಬ ಕಳೆದ ಮೂವತ್ತು ವರುಷಗಳಿಂದಲೂ ಇಲ್ಲಿ ನೆಲೆಸಿದೆ. ಇರೋಕೊಂದು ಸ್ವಲ್ಪ ಜಾಗ, ಅದರಲ್ಲಿ ತರ್ಪಾಲಿನ ಜೋಪಡಿಯಲ್ಲಿ ನಮ್ಮ ಕುಟುಂಬ ವಾಸವಿತ್ತು. ರಾಜಾರಾಂ ಭಟ್ ಅವರು ನಮಗೆ ವಾಸ್ತು ಪ್ರಕಾರ, ದೊಡ್ಡವರಂತೆಯೇ ಇರುವ ಸುಸಜ್ಜಿತ ಮನೆ ನಿರ್ಮಿಸಿ ಕೊಟ್ಟಿದ್ದು , ಅವರನ್ನ ಜೀವನ ಪರ್ಯಂತ ನಾವು ಮರೆಯೋದಿಲ್ಲವೆಂದು ಹೇಳಿದರು.
ಕೈರಂಗಳ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಚೌಟ ಉಳಿಪಾಡಿಗುತ್ತು, ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.
TJ Raja ram Bhatc constructs story building for the poor family at Ballepuni
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm