ಬ್ರೇಕಿಂಗ್ ನ್ಯೂಸ್
02-09-22 04:30 pm Mangalore Correspondent ಕರಾವಳಿ
ಮಂಗಳೂರು, ಸೆ.1 : ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ಉತ್ಪಾದನೆ ಹೆಚ್ಚಿಸಲು ಪಣ ತೊಡಬೇಕಾಗಿದೆ. ಉತ್ಪಾದನೆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದ್ದು ದೇಶಕ್ಕೆ ಅನಿವಾರ್ಯ. ವನ್ ಡಿಸ್ಟ್ರಿಕ್ಟ್, ವನ್ ಪ್ರೊಡಕ್ಟ್ ಅನ್ನುವ ಗುರಿ ಇಟ್ಟುಕೊಂಡು ನಾವು ಸಾಧನೆ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳೂರಿನ ಕುಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ 3800 ಕೋಟಿ ಮೊತ್ತದ ಎಂಟು ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಎಂಟು ವರ್ಷಗಳಲ್ಲಿ ದೇಶದ ಉತ್ಪಾದನೆ ಸಾಮರ್ಥ್ಯ ದುಪ್ಪಟ್ಟು ಆಗಿದೆ. 2014ರಲ್ಲಿ ದೇಶದ ಸ್ಥಿತಿ ಹೇಗಿತ್ತೋ ಅದಕ್ಕಿಂತ ಹತ್ತು ಪಟ್ಟು ವೇಗ ಸಿಕ್ಕಿದೆ ಎಂದರು.
ಕರಾವಳಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಗರಮಾಲಾ ಯೋಜನೆ ಶಕ್ತಿ ತುಂಬಲಿದೆ. ಮಂಗಳೂರಿನಲ್ಲಿ ಗ್ಯಾಸ್, ಲಿಕ್ವಿಡ್ ಪೆಟ್ರೋಲಿಯಂ ಸಂಗ್ರಹದ ಸಾಮರ್ಥ್ಯ ಹೆಚ್ಚಲಿದೆ. ದೇಶದಲ್ಲಿ ಪರಿಸರ ಕೇಂದ್ರಿತ ಅಭಿವೃದ್ಧಿ ಯೋಜನೆಗಳಿಗೆ ಒತ್ತು ಕೊಡಬೇಕಾಗಿದೆ. ಎಂಟು ವರ್ಷಗಳಲ್ಲಿ ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಆಗಿದ್ದು 70 ಸಾವಿರ ಕೋಟಿ ಮೊತ್ತದ ಯೋಜನೆಗಳು ರಾಜ್ಯಕ್ಕೆ ಬಂದಿವೆ. ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ ವೇ, ರೈಲ್ವೇ ವಿದ್ಯುದೀಕರಣ, ರಿಂಗ್ ರೋಡ್ ಮತ್ತಿತರ ಯೋಜನೆಗಳು ಕಾರ್ಯಗತ ಆಗುತ್ತಿವೆ.
ಸ್ವಾತಂತ್ರ್ಯ ಪಡೆದು ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನಾವು ಮಹತ್ವದ ಗುರಿ ಇಡಬೇಕಾಗಿದೆ. ಪ್ರತಿ ನಾಗರಿಕನ ಗೌರವಯುತ ಜೀವನಕ್ಕಾಗಿ ನೀರು, ವಿದ್ಯುತ್, ಟಾಯ್ಲೆಟ್ ಅಗತ್ಯವಾಗಿದೆ. ಅದನ್ನು ಈಡೇರಿಸುವುದು ಮೊದಲ ಆದ್ಯತೆ. ದೇಶದಲ್ಲಿ ಎಂಟು ವರ್ಷದಲ್ಲಿ 3 ಕೋಟಿ ಜನರಿಗೆ ವಸತಿ ನೀಡಲಾಗಿದೆ. ಜಲಜೀವನ್ ಯೋಜನೆಯಡಿ ಪ್ರತಿ ಮನೆಗೆ ನೀರನ್ನು ಪೈಪ್ ಲೈನಲ್ಲಿ ತಲುಪಿಸುವ ಗುರಿಯಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 4 ಕೋಟಿ ಬಡ ಜನರಿಗೆ ಉಚಿತ ಆಸ್ಪತ್ರೆ ಸೌಲಭ್ಯದ ಲಾಭ ಸಿಕ್ಕಿದೆ. ಕರ್ನಾಟಕದಲ್ಲಿ 30 ಲಕ್ಷ ಮಂದಿಗೆ ಈ ಯೋಜನೆಯ ಲಾಭ ಸಿಕ್ಕಿದೆ. ಹಾಗಿದ್ದರೂ ದೇಶದ ಅಭಿವೃದ್ಧಿಯ ಲಾಭ ಎಲ್ಲ ಜನರಿಗೂ ಸಿಕ್ಕಿಲ್ಲ, ಆದರೆ ಪ್ರತಿ ನಾಗರಿಕನಿಗೂ ಲಾಭ ಸಿಗುವಂತಾಗಬೇಕು, ಅದು ನಮ್ಮ ಗುರಿ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 12 ಕೋಟಿ ಜನರಿಗೆ ತಲಾ ಹತ್ತು ಸಾವಿರ ರೂ. ಸಿಕ್ಕಿದೆ. ಮುದ್ರಾ ಯೋಜನೆಯಡಿ ರಾಜ್ಯದಲ್ಲಿ ಎರಡು ಲಕ್ಷ ಮಂದಿಗೆ 20 ಲಕ್ಷಕ್ಕೂ ಹೆಚ್ಚು ಸಾಲ ನೀಡಿದ್ದೇವೆ. ಅವರನ್ನು ಉದ್ಯಮಿಯಾಗಿಸಲು ಆದ್ಯತೆ ನೀಡಿದ್ದೇವೆ.
ಮತ್ಸ್ಯ ಸಂಪದ ಯೋಜನೆಯಡಿ ಮೊದಲ ಬಾರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದೆ. ಕುಳಾಯಿನಲ್ಲಿ ಇವತ್ತು ಬಂದರು ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದೇವೆ. ಡಬಲ್ ಇಂಜಿನ್ ಸರಕಾರ ದೇಶದ ಜನರ ಅಭಿವೃದ್ಧಿಗಾಗಿ ಪಣ ತೊಟ್ಟಿದೆ. ಮೀನುಗಾರಿಕೆ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ.
ಕ್ಲೀನ್ ಇಕಾನಮಿ ಉದ್ದೇಶದಲ್ಲಿ ಆವಿಷ್ಕಾರ ಆಗಬೇಕಾಗಿದೆ. ದೇಶದ ಮೂಲೆ ಮೂಲೆಗೆ ಇಂಟರ್ನೆಟ್ ತಲುಪಿಸಲು ಆಪ್ಟಿಕಲ್ ಫೈಬರ್ ಹಾಕುತ್ತಿದ್ದೇವೆ. ತಂತ್ರಜ್ಞಾನ ತಲುಪಿಸುವ ಉದ್ದೇಶದಿಂದ ಎಲ್ಲ ಕಡೆಗೂ ಫೈವ್ ಜಿ ತರುವುದಕ್ಕಾಗಿ ಪ್ರಯತ್ನ ಪಡುತ್ತಿದ್ದೇವೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಟೂರಿಸಂ ಅಭಿವೃದ್ಧಿ ಆಗಬೇಕಾಗಿದೆ. ಈಮೂಲಕ ಮಧ್ಯಮ ವರ್ಗದ ಜನರ ಶಕ್ತಿ ಹೆಚ್ಚಲು ನಾವು ಒತ್ತು ನೀಡಬೇಕಾಗಿದೆ. ಟೂರಿಸಂ ಅಭಿವೃದ್ಧಿಯಾದರೆ ಆಟೋ ಚಾಲಕರು, ಟ್ಯಾಕ್ಸಿ, ಹೊಟೇಲ್ ಹೀಗೆ ಮಧ್ಯಮ ವರ್ಗಕ್ಕೆ ಲಾಭ ಆಗುತ್ತದೆ. ಕರಾವಳಿಯಲ್ಲಿ ಟೂರಿಸಂ ಅಭಿವೃದ್ಧಿ ಪಡಿಸಲು ಸಾಕಷ್ಟು ಅವಕಾಶಗಳಿವೆ ಎಂದು ಮೋದಿ ಹೇಳಿದರು.
ದೇಶದಲ್ಲಿ 670 ಬಿಲಿಯನ್ ಡಾಲರ್ ರಫ್ತು ಹೆಚ್ಚಿಸಿದ್ದೇವೆ. ಮೊಬೈಲ್, ಆಟಿಕೆ ಉತ್ಪಾದನೆ ಕ್ಷೇತ್ರದಲ್ಲಿ ಮೂರು ವರ್ಷದಲ್ಲಿ ರಫ್ತು ಮಾಡುವಷ್ಟು ಬೆಳೆದಿದೆ. ಇವೆಲ್ಲ ಕರಾವಳಿ ಭಾಗದಲ್ಲೂ ಆಗಬೇಕಾಗಿದ್ದು ಯಾಕಂದ್ರೆ ಇಲ್ಲಿ ಬಂದರು ಇದೆ. ಬಂದರು ಮೂಲಕ ವಿದೇಶಕ್ಕೆ ರಫ್ತು ಮಾಡಲು ಸುಲಭ ಇದೆ. ಉದ್ಯಮಿಗಳು ಇದರ ಲಾಭ ಪಡೆಯಬೇಕಿದೆ. ಈ ಭಾಗದ ಪ್ರೇರಣಾದಾಯಿ ವೀರ ಮಹಿಳೆಯರಾದ ರಾಣಿ ಅಬ್ಬಕ್ಕ, ರಾಣಿ ಭೈರಾದೇವಿಯನ್ನು ಸ್ಮರಿಸುತ್ತೇನೆ. ರಾಷ್ಟ್ರಭಕ್ತಿಗೆ ನಮಗೆಲ್ಲ ಅವರೇ ಪ್ರೇರಣೆ. ಮಂಗಳೂರಿನ ಜನತೆಗೆ ಹೃದಯಾಂತರಾಳದ ಅಭಿನಂದನೆಗಳು. ಜನರ ಆಶೋತ್ತರ ಈಡೇರಿಸಲು ನಾವು ಶತ ಪ್ರಯತ್ನ ಮಾಡುತ್ತೇವೆ ಎಂದು ಹೇಳಿ ಮಾತು ನಿಲ್ಲಿಸಿದರು.
ಮೋದಿ ಮುಖದಲ್ಲಿ ಜೋಶ್ ಇರಲಿಲ್ಲ..
ಪ್ರಧಾನಿ ಮೋದಿ ಹಿಂದಿನ ರೀತಿ ಜೋಶ್ ನಲ್ಲಿ ಇರಲಿಲ್ಲ. ಕೈಬೀಸುವುದಕ್ಕೂ ಹೋಗಲಿಲ್ಲ. ಈ ಭಾಗದ ನಾಯಕರ ಮುಖವನ್ನೂ ನೋಡಲಿಲ್ಲ. ಕರಾವಳಿಯಲ್ಲಿ ಬಿಜೆಪಿ ಒಳಗೆ ಆಗುತ್ತಿರುವ ಬೆಳವಣಿಗೆ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದರೋ ಏನೋ.. ಸಿಎಂ ಬೊಮ್ಮಾಯಿ ಅವರಲ್ಲಿ ಮಾತ್ರ ಕೊನೆಗೆ ಏನೋ ಪಿಸು ಮಾತಾಡಿ ನೇರ ನಡೆದು ಬಿಟ್ಟಿದ್ದಾರೆ. ಭಾಷಣದಲ್ಲಿಯೂ ಯಾವುದೇ ನಾಯಕರ ಹೆಸರನ್ನೂ ಉಲ್ಲೇಖ ಮಾಡಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಪಾಲ ಥಾಚರಚಂದ್ ಗೆಹ್ಲೋತ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಸರ್ಬಾನಂದ ಸೋನವಾಲ್, ಶೋಭಾ ಕರಂದ್ಲಾಜೆ ಸೇರಿ ಈ ಭಾಗದ ಶಾಸಕರು, ಸಂಸದರು ಉಪಸ್ಥಿತರಿದ್ದರು.
PM Modi in Mangalore, inaugurates mechanization, industrialization projects worth Rs 3800 crore. PM stresses on Green Growth India is moving forward with the vision of 'Green Growth'. The technology used in Karnataka's refineries is in sync with this objective. During Amrit Kaal, India is moving forward with the mindset of Green Growth and Green Jobs. New Mangaluru Port is working towards adding more facilities to promote cruise tourism. Kisan Credit Cards have been given to fishermen in Karnataka. We are also working on providing better boats and technology to fishermen to increase their incomes... In the last 8 years, the number of cities with metro facilities has increased fourfold.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm