ಬ್ರೇಕಿಂಗ್ ನ್ಯೂಸ್
20-08-22 12:06 pm Udupi Correspondent ಕರಾವಳಿ
ಉಡುಪಿ, ಆಗಸ್ಟ್ 20 : ಅರ್ಧಂಬರ್ಧ ತಿಳಿದವರು, ಅಂತಃಸತ್ವ ಇಲ್ಲದವರು ಮಾತ್ರ ಸಾವರ್ಕರ್ ಬಗ್ಗೆ ಅವಹೇಳನಕಾರಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ಬಿಡುವು ಮಾಡಿಕೊಂಡು ಅಂಡಮಾನಿನ ಸೆಲ್ಯೂಲರ್ ಜೈಲನ್ನು ಒಮ್ಮೆ ನೋಡಿ ಬರಬೇಕು. ಸಾವರ್ಕರ್ ಅವರ ಹೋರಾಟ, ಬ್ರಿಟಿಷರು ಅವರಿಗೆ ನೀಡಿದ ಕ್ರೂರ ಶಿಕ್ಷೆಯ ಬಗ್ಗೆ ತಿಳಿಯುತ್ತದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಯಾರೋ ಹೇಳಿಕೊಟ್ಟು ಮಾಡಿಸುತ್ತಿರುವುದಲ್ಲ. ಜನರ ಮನಸ್ಸಿನಲ್ಲಿ ಇರುವ ಭಾವನೆ ಸ್ಫೋಟಗೊಂಡಾಗ ಈ ರೀತಿ ಆಗುತ್ತದೆ. ಸಿದ್ದರಾಮಯ್ಯ ಅವರು ಸಾವರ್ಕರ್ ಬಗ್ಗೆ ಇಷ್ಟು ಅವಹೇಳನಕಾರಿ ಮಾತಾಡಿದರೆ ಅದನ್ನು ಸಹಿಸಿಕೊಳ್ಳಲು ಇವತ್ತಿನ ಯುವ ಸಮೂಹಕ್ಕೆ ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರಿಗೆ ಹಣೆ ಮೇಲೆ ಕುಂಕುಮ ಇಟ್ಟವರನ್ನು ಕಂಡರೆ ಆಗುವುದಿಲ್ಲ. ಸಾವರ್ಕರ್ ಭಾವಚಿತ್ರ ಹಾಕಿದರೆ ಮುಸ್ಲಿಂ ಏರಿಯಾದಲ್ಲಿ ಯಾಕೆ ಹಾಕಿದ್ದೀರಿ ಎನ್ನುತ್ತಾರೆ. ಈ ರೀತಿ ಪ್ರತ್ಯೇಕತೆಯ ಭಾವನೆಯನ್ನೇ ತನ್ನ ನಡವಳಿಕೆ, ಹೇಳಿಕೆ ನೀಡುತ್ತಲೇ ಬಂದಿರುವ ಪರಿಣಾಮ ಇಂದು ವಿರೋಧ ಎದುರಾಗುತ್ತಿದೆ. ರಾಜ್ಯದ ಜನ ಇದನ್ನು ಸಹಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಪ್ರತಿಭಟನೆ ಆಗಿದೆ. ಹೇಳಿಕೆ ನೀಡುವ ಅವರಿಗೆ ಪ್ರತಿಭಟನೆ ಸಹಿಸಿಕೊಳ್ಳುವ ಶಕ್ತಿಯೂ ಇರಬೇಕು. ಸುಮ್ ಸುಮ್ನೆ ಏನೋ ಹೇಳಿಕೆ ನೀಡಿ ಜೀರ್ಣಿಸಿಕೊಳ್ಳುತ್ತೇನೆ ಎಂಬ ಕಾಲ ಈಗ ಇಲ್ಲ ಎಂದರು.
ಸಾವರ್ಕರ್ ಅವರಿಗೆ ವೀರ ಸಾವರ್ಕರ್ ಎಂಬ ಬಿರುದಿದೆ. ಹೋರಾಟದ ಕಾರಣಕ್ಕೆ ವೀರ ಎಂದು ಕರೆಯಲಾಗಿದೆ. ಅವರ ಬಗ್ಗೆ ಇಷ್ಟು ಹಗುರವಾಗಿ ಮಾತಾಡುತ್ತಿದ್ದಾರೆ ಎಂದರೆ, ಸಿದ್ದರಾಮಯ್ಯ ಅವರಿಗೆ ಇತಿಹಾಸದ ಬಗ್ಗೆ ಅರ್ಧಂಬರ್ಧ ಗೊತ್ತಿದೆ. ಪೂರ್ತಿ ಗೊತ್ತಿದ್ದರೆ ಹೀಗೆ ಮಾತನಾಡಲು ಸಾಧ್ಯವಿಲ್ಲ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಅವಹೇಳನೆ ಮಾಡಲು ಸಾಧ್ಯವಿಲ್ಲ. ಸಮಾಜವಾದಿ ಎನ್ನುತ್ತಲೇ ವೈಭವದಿಂದ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದೀರಿ. ಸಾರ್ವಕರ್ ಅವರು ಇದ್ದ ಜೈಲು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಬ್ರಿಟಿಷ್ ವಿರುದ್ಧದ ಹೋರಾಟ, ಅವರಿಗೆ ನೀಡಿದ ಕ್ರೂರ ಶಿಕ್ಷೆಯ ಬಗ್ಗೆ ತಿಳಿಯುತ್ತದೆ. ಸಾವರ್ಕರ್ ಈ ದೇಶದ ರಾಷ್ಟ್ರೀಯತೆಯ ಪ್ರತೀಕ. ಸಾವರ್ಕರ್ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರ ಪರಿಣಾಮ ರಾಜ್ಯದಲ್ಲಿ ಪ್ರತಿಭಟನಾ ಮೆರವಣಿಗೆ, ಬ್ಯಾನರ್, ಪುತ್ಥಳಿ, ರಸ್ತೆ ನಾಮಕರಣ ಹೆಚ್ಚಾಗುವಂತಾಗಿದೆ. ಎಲ್ಲೆಡೆ ಸಾವರ್ಕರ್ ಹೆಸರು ಬರಲು ಪರೋಕ್ಷವಾಗಿ ಸಿದ್ದರಾಮಯ್ಯ ಅವರೂ ಕಾರಣವಾಗಲಿದ್ದಾರೆ ಎಂದು ಕಿಡಿಕಾರಿದರು.
ಹಿಂಸೆ ಮೇಲೆ ನಮಗೆ ನಂಬಿಕೆ ಇಲ್ಲ ಮತ್ತು ಅದನ್ನು ಒಪ್ಪುವುದೂ ಇಲ್ಲ. ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಇದ್ದರೆ ಲಿಖಿತ ದೂರು ನೀಡಲಿ. ಖಂಡಿತ ಅವರಿಗೆ ಸರಕಾರ ಈಗಲೂ ಭದ್ರತೆ ನೀಡಿದೆ, ಮುಂದೆಯೂ ನೀಡಲಿದೆ. ಪ್ರತಿಭಭಟನೆ ಮಾಡಬಾರದು ಎನ್ನುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ದೇಶ ಎಂದು ತಿರುಗೇಟು ನೀಡಿದರು.
ನಮಾಜ್ಗೆ ಅವಕಾಶವಿಲ್ಲ
ಶಾಲೆಗಳಲ್ಲಿ ನಮಾಜ್ ಗೆ ಅವಕಾಶ ನೀಡಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸುನಿಲ್, ಈ ದೇಶದ ಸಂಪ್ರದಾಯ, ಪರಂಪರೆ ಉಳಿಸಬೇಕು. ಅನಗತ್ಯವಾಗಿ ಎಲ್ಲವನ್ನೂ ವಿವಾದ ಮಾಡುವುದು ಸರಿಯಲ್ಲ. ಗಣೇಶೋತ್ಸವ ಅನೇಕ ದಶಕಗಳಿಂದ ಸರಕಾರಿ ಮೈದಾನ, ಶಾಲಾವರಣದಲ್ಲಿ ನಡೆದುಕೊಂಡು ಬರುತ್ತಿದೆ. ಇದನ್ನು ಇನ್ಯಾವುದೋ ವಿಚಾರಕ್ಕೆ ಹೋಲಿಸಿ ವಿವಾದ ಸೃಷ್ಟಿಸುವುದು ಸರಿಯಲ್ಲ. ಶಾಲೆಗಳಲ್ಲಿ ನಮಾಜ್ಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸರಕಾರ ಸ್ಪಷ್ಟ ನಿಲುವು ಹೊಂದಿದೆ ಎಂದರು.
BJP leaders continued to target Congress leader Siddaramaiah for his "Muslim area" remark and comments against V D Savark with Karnataka Energy Minister V Sunil Kumar on Friday urgin the former chief minister to visit the cellular jail in Andaman and get to know the story of the Hindutva ideologue' contribution to the freedom struggle.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm