ಬ್ರೇಕಿಂಗ್ ನ್ಯೂಸ್
19-08-22 04:02 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 19: ಮಂಗಳೂರು ನಗರದಲ್ಲಿ ಕಾಂಕ್ರೀಟ್ ರಸ್ತೆಯನ್ನು ಅಗೆದು ಹಾಕುವುದನ್ನು ನೋಡಿದ್ದೇವೆ. ಗ್ಯಾಸ್ ಪೈಪ್ ಲೈನ್, ಚರಂಡಿ ಕಾಮಗಾರಿ, ನೀರಿನ ಪೈಪ್ಲೈನ್ ಕಾರಣಕ್ಕೆ ಕಾಂಕ್ರೀಟ್ ರಸ್ತೆಯನ್ನು ಅಗೆಯುತ್ತಾರೆ. ಕೆಲವು ಕಡೆ ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ಚೌಕಾಕಾರದಲ್ಲಿ ಅಗೆದು ಕಾಮಗಾರಿ ನಡೆಸುತ್ತಾರೆ. ಆದರೆ, ಹೀಗೆ ಅಗೆದ ಜಾಗದಲ್ಲಿ ಮತ್ತೆ ಕಾಂಕ್ರೀಟ್ ತುಂಬಿಸುವ ಕೆಲಸವನ್ನು ಸರಿಯಾಗಿ ನಡೆಸುತ್ತಿಲ್ಲ.
ಇದಕ್ಕೊಂದು ತಾಜಾ ನಿದರ್ಶನ ಆಗಬಲ್ಲ ಮತ್ತು ಕೆಲವು ಮತಿಗೆಟ್ಟವರ ಕಾರಣದಿಂದಾಗಿ ಕಾಂಕ್ರೀಟ್ ರಸ್ತೆಯ ನಡುವಲ್ಲೇ ಟಿಪ್ಪರ್ ಲಾರಿ ಕುಸಿದು ಬಿದ್ದು ಸಿಕ್ಕಾಕ್ಕೊಂಡ ಘಟನೆ ನಗರದ ಬಿಜೈನಲ್ಲಿ ನಡೆದಿದೆ. ಜಲ್ಲಿ ತುಂಬಿದ್ದ ಲಾರಿ ಕಾಪಿಕಾಡು ಕಡೆಯಿಂದ ಬಿಜೈ ಆನೆಗುಂಡಿಗೆ ಆಗಮಿಸಿತ್ತು. ಅಲ್ಲಿನ ಒಳರಸ್ತೆಗೆ ಇನ್ನೇನು ಟರ್ನ್ ಮಾಡಬೇಕೆನ್ನುವಷ್ಟರಲ್ಲಿ ಲಾರಿಯ ಹಿಂದಿನ ಎಡಭಾಗದ ಚಕ್ರ ಹೂತು ಹೋಗಿದೆ. ಕಾಂಕ್ರೀಟ್ ರಸ್ತೆಯ ಮಧ್ಯದಲ್ಲೇ ಟೈರ್ ಒಂದೂವರೆ ಅಡಿಯಷ್ಟು ಒಳಕ್ಕೆ ಕುಸಿದಿದೆ.
ಚಾಲಕ ಇಳಿದು ನೋಡುವಷ್ಟರಲ್ಲಿ ಸಂಪೂರ್ಣ ಇಡೀ ಚಕ್ರವೇ ಗುಂಡಿಗೆ ಕುಸಿದು ಹೋಗಿತ್ತು. ಅಲ್ಲಿ ನೋಡಿದರೆ, ಗೈಲ್ ಗ್ಯಾಸ್ ಪೈಪ್ ಲೈನಿಗೆಂದು ಕಾಂಕ್ರೀಟ್ ರಸ್ತೆಯನ್ನು ಅಗೆದಿದ್ದು, ಕೆಲಸ ಮುಗಿದ ಬಳಿಕ ಒಳಗಡೆ ಮಣ್ಣು ತುಂಬಿಸಿ ಮೇಲ್ಭಾಗಕ್ಕೆ ಖಾಲಿ ಸಿಮೆಂಟ್ ನೀರನ್ನು ಸುರಿದು ಗಟ್ಟಿಗೊಳಿಸಿದಂತೆ ಕಂಡುಬಂದಿದೆ. ಜಲ್ಲಿ ತುಂಬಿದ ಟಿಪ್ಪರ್ ಲಾರಿಯಾಗಿದ್ದರಿಂದ ಅದರ ಭಾರಕ್ಕೆ ಚೌಕಾಕೃತಿಯಲ್ಲಿ ಕೊರೆದು, ಅದನ್ನು ಲೆವೆಲ್ ಮಾಡಿದ್ದ ಜಾಗದಲ್ಲಿ ಟೈರ್ ಕುಸಿದು ಹೋಗಿದೆ. ಒಂದು ಭಾಗಕ್ಕೆ ಲಾರಿ ವಾಲಿ ನಿಂತಿದ್ದು, ಚಾಲಕ ಮತ್ತು ಇತರ ಸಿಬಂದಿ ಏನು ಮಾಡುವುದೆಂದು ತೋಚದೆ ಈ ರೀತಿ ಮಾಡಿಟ್ಟ ಗೈಲ್ ಗ್ಯಾಸ್ ಪೈಪ್ ಲೈನ್ ಸಿಬಂದಿ ಬಗ್ಗೆ ಶಾಪ ಹಾಕಿದ್ದಾರೆ.
ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಜೆಸಿಬಿ ಇತರ ಕಾಮಗಾರಿ ನಡೆಸುವ ಮಂದಿ ಸಕಾಲದಲ್ಲಿ ಸಿಗದೆ ಲಾರಿ ಚಾಲಕ ಚಿಂತೆಗೆ ಒಳಗಾಗಿದ್ದರು. ಜಲ್ಲಿಯನ್ನು ಖಾಲಿ ಮಾಡಿಯೇ ಲಾರಿಯನ್ನು ಮೇಲೆತ್ತಬೇಕು ಎಂಬ ಚಿಂತೆಯಲ್ಲಿದ್ದರು. ಆದರೆ ಕಾಂಕ್ರೀಟ್ ರಸ್ತೆಯನ್ನು ಅಗೆದು ಮತ್ತೆ ಕಾಂಕ್ರೀಟ್ ಹಾಕದೆ ಮಹಾನಗರ ಪಾಲಿಕೆ ಮತ್ತು ಸಾರ್ವಜನಿಕರಿಗೆ ವಂಚಿಸಿರುವ ಗೈಲ್ ಗ್ಯಾಸ್ ಪೈಪ್ ಲೈನ್ ವಿರುದ್ಧ ಯಾರು ಏಕ್ಷನ್ ತಗೋಬೇಕು ಹೇಳಿ.
Mangalore Overloaded truck gets stuck after concentrate road collapses in Bejai. Often drilling and patching the concentrate roads is the reason for collapse it is said.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm