ಬ್ರೇಕಿಂಗ್ ನ್ಯೂಸ್
18-08-22 10:43 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 18: ಶ್ರೀಕೃಷ್ಣ ಜನ್ಮಾಷ್ಟಮಿಗೆ ತುಳು ಚಿತ್ರತಂಡವೊಂದು ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಲು ಹೋಗಿ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚೆಗಷ್ಟೇ ಭಾರೀ ಸದ್ದು ಮಾಡಿದ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ಆರ್ ಜೆ ವಿನೀತ್ ಮುಖ್ಯ ಭೂಮಿಕೆಯಲ್ಲಿ ಮತ್ತೊಂದು ಚಿತ್ರ ತಯಾರಾಗುತ್ತಿದ್ದು, ಅದರ ಟೈಟಲ್ ಲಾಂಚ್ ವೇಳೆಯಲ್ಲೇ ಎಡವಟ್ಟು ಮಾಡಿಕೊಂಡಿದೆ.
ಪುಳಿಮುಂಚಿ ಎನ್ನುವ ಹೆಸರಿನ ಹೊಸ ಚಿತ್ರದ ಟೈಟಲ್ ಲಾಂಚ್ ಇಂದು ಆಗಿದೆ ಎನ್ನಲಾಗುತ್ತಿದ್ದು, ಅದರ ನಂತರ ಕೃಷ್ಣಾಷ್ಟಮಿಯ ಪ್ರಯುಕ್ತ ವಿಶಿಷ್ಟವಾಗಿ ಶುಭ ಹಾರೈಸಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಆರ್ ಜೆ ವಿನೀತ್ ಅವರನ್ನು ಕೃಷ್ಣನ ರೀತಿ ತೋರಿಸಿ, ಶ್ರೀಕೃಷ್ಣನ ಸಂದೇಶವನ್ನೇ ತಿರುಚಿ ಅದರಲ್ಲಿ ಕೊಟ್ಟಿರುವುದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ. ಪೋಸ್ಟರ್ ಮೇಲ್ಭಾಗದಲ್ಲಿ ಶ್ರೀಕೃಷ್ಣನ ಸಂದೇಶವನ್ನು ತಿರುಚಿ, ಹಾಸ್ಯ ಸಂಸ್ಥಾಪನಾರ್ಥಾಯ ಸಂಭವಾಮಿ ಪದೇ ಪದೇ ಎಂದು ಬರೆಯುವ ಮೂಲಕ ಕೃಷ್ಣನ ಭಗವದ್ಗೀತೆಯ ಶ್ಲೋಕವನ್ನೇ ಅಣಕಿಸಿದೆ.
ಇದರ ಬಗ್ಗೆ ಖಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗಿದ್ದು, ಹಲವು ಪೋಸ್ಟ್ ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಚಿತ್ರತಂಡ ಕ್ಷಮೆ ಯಾಚಿಸದೇ ಇದ್ದಲ್ಲಿ ಚಿತ್ರವನ್ನು ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಬಾಲಿವುಡ್ಡಿನಲ್ಲೇ ಹಿಂದುಗಳನ್ನು, ಹಿಂದು ದೇವರನ್ನು ಅಣಕಿಸಿದ ಚಿತ್ರಕ್ಕೆ ಬಹಿಷ್ಕಾರ ಹಾಕಲಾಗಿದೆ. ತುಳು ಚಿತ್ರತಂಡಕ್ಕೂ ಅದೇ ರೀತಿಯ ಬಹಿಷ್ಕಾರ ಹಾಕಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿದೆ. ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಯಶಸ್ಸಿನಿಂದಾಗಿ ಮತ್ತೊಂದು ಹಾಸ್ಯ ಪ್ರಧಾನ ಚಿತ್ರವನ್ನು ವಿನೀತನ್ನೇ ಪ್ರಮುಖವಾಗಿಟ್ಟುಕೊಂಡು ತೆರೆಗೆ ತರಲು ಚಿತ್ರತಂಡ ರೆಡಿಯಾಗಿದ್ದರೆ, ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
Mangalore Pulimunchi tulu movie poster creates controversy and spark on social media with the changes made in krishna sloka.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 09:24 pm
HK News Desk
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm