ಬ್ರೇಕಿಂಗ್ ನ್ಯೂಸ್
17-08-22 03:44 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 17: ಫಿಶ್ ಮಿಲ್ ಗಳ ಗಬ್ಬು ವಾಸನೆ, ಪರಿಸರ ಮಾಲಿನ್ಯದ ಬಗ್ಗೆ ಪದೇ ಪದೇ ಸಾರ್ವಜನಿಕರು ದೂರು ಹೇಳಿಕೊಂಡು ಬಂದಿದ್ದರೂ, ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳು ಕ್ರಮ ಜರುಗಿಸಿರಲಿಲ್ಲ. ಪ್ರತಿ ಬಾರಿಯೂ ನೋಟೀಸ್ ಕೊಟ್ಟು ಸುಮ್ಮನಾಗುತ್ತಿದ್ದರು. ಆದರೆ, ಈ ಬಗ್ಗೆ ರಾಜ್ಯ ಘಟಕದಿಂದ ನೋಟಿಸ್ ಕೊಟ್ಟರೂ, ಕ್ಯಾರೆನ್ನದ ಮಂಗಳೂರಿನ 16 ಫಿಶ್ ಮಿಲ್ ಘಟಕಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗದಾಪ್ರಹಾರ ಮಾಡಿದೆ. ಬರಾಕಾ ಸೇರಿದಂತೆ ಉಳ್ಳಾಲ, ಸುರತ್ಕಲ್, ಬೈಕಂಪಾಡಿ, ಮುಕ್ಕದಲ್ಲಿರುವ 16 ಫಿಶ್ ಮಿಲ್ ಗಳನ್ನು ಸ್ಥಗಿತಗೊಳಿಸಲು ಆದೇಶ ಮಾಡಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಈ ಬಗ್ಗೆ ಆದೇಶದ ಪ್ರತಿ ಬಂದಿದ್ದು, ಕೂಡಲೇ ಬಂದ್ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ, ಕಾವೂರಿನಲ್ಲಿ ಕಚೇರಿ ಹೊಂದಿರುವ ಮೆಸ್ಕಾಂ ಎಂಡಿಗೂ ಸದ್ರಿ ಫಿಶ್ ಮಿಲ್ ಗಳಿಗೆ ಒದಗಿಸಿರುವ ವಿದ್ಯುತ್ತನ್ನು ಕಡಿತಗೊಳಿಸುವಂತೆ ಸೂಚನೆ ನೀಡಲಾಗಿದೆ.

ಕಳೆದ ಒಂದು ವರ್ಷದಲ್ಲಿ ಹಲವು ಬಾರಿ ಫಿಶ್ ಮಿಲ್ ಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟೀಸ್ ಮಾಡಲಾಗಿತ್ತು. ನೀರು ಮತ್ತು ಪರಿಸರ ಮಾಲಿನ್ಯ ಆಗುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಎಚ್ಚರಿಕೆ ನೋಟೀಸ್ ನೀಡಲಾಗಿತ್ತು. ಅಲ್ಲದೆ, ಸಮುದಕ್ಕೆ ಬಿಡುತ್ತಿರುವ ತ್ಯಾಜ್ಯವನ್ನು ಶುದ್ಧೀಕರಿಸಲು ಬಯೋ ಫಿಲ್ಟರ್ ಯಂತ್ರವನ್ನು ಅಳವಡಿಸುವಂತೆ ಸೂಚಿಸಲಾಗಿತ್ತು. ಕಳೆದ ಎಪ್ರಿಲ್ ತಿಂಗಳಲ್ಲಿ ರಾಜ್ಯ ಘಟಕದ ಅಧಿಕಾರಿಗಳು ಮತ್ತು ಅಧ್ಯಕ್ಷರು ಮಂಗಳೂರಿನ ವಿವಿಧ ಘಟಕಗಳಿಗೆ ಬಂದು ಪರಿಶೀಲನೆ ನಡೆಸಿದ್ದರು. ಫಿಶ್ ಮಿಲ್ ಘಟಕಗಳಲ್ಲಿ ತ್ಯಾಜ್ಯ ನಿಯಂತ್ರಣಕ್ಕೆ ವ್ಯವಸ್ಥೆ ಮಾಡದೇ ಇರುವುದನ್ನು ಕಂಡುಕೊಂಡಿದ್ದರು. ಆನಂತರ, ಸೂಕ್ತ ನಿಯಂತ್ರಣ ವ್ಯವಸ್ಥೆ ಕೈಗೊಳ್ಳುವಂತೆ ಎಪ್ರಿಲ್ 29ರಂದು ಎಲ್ಲ ಫಿಶ್ ಮಿಲ್ ಘಟಕಗಳಿಗೆ ನೋಟೀಸ್ ನೀಡಲಾಗಿತ್ತು.
ಕೆಲವು ಘಟಕಗಳಲ್ಲಿ ಬಯೋ ಫಿಲ್ಟರ್ ಇದ್ದರೂ, ಅದು ಕಾರ್ಯಾಚರಣೆ ಆಗುತ್ತಿರಲಿಲ್ಲ. ಕೆಲವು ಕಡೆಗಳಲ್ಲಿ ಬಯೋ ಫಿಲ್ಟರ್ ಮತ್ತು ಬಾಯ್ಲರ್ ಇಡುವುದಕ್ಕೆ ಸಿಆರ್ ಝೆಡ್ ಕ್ಲೀಯರೆನ್ಸ್ ಪಡೆಯದೇ ಇರುವುದು ಕಂಡುಬಂದಿತ್ತು. ಅಲ್ಲದೆ, ಫಿಶ್ ಮಿಲ್ ಇರುವಲ್ಲಿ ಗಬ್ಬೆದ್ದು ನಾರುವ ವಾಸನೆ ಮತ್ತು ಸಾರ್ವಜನಿಕರ ದೂರುಗಳು ಹಾಗೂ ಸಮುದ್ರಕ್ಕೆ ತ್ಯಾಜ್ಯ ಬಿಡುತ್ತಿದ್ದುದರಿಂದ ನೀರು ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತಿರುವುದು ರಾಜ್ಯ ಘಟಕದ ಅಧಿಕಾರಿಗಳ ಪರಿಶೀಲನೆಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿ, ವಿಚಾರಣೆಗೆ ಹಾಜರಾಗುವಂತೆ ಫಿಶ್ ಮಿಲ್ ಘಟಕದ ಮಾಲೀಕರಿಗೆ ಸೂಚನೆ ನೀಡಲಾಗಿತ್ತು. ಆದರೆ, ಸೂಕ್ತವಾಗಿ ಸ್ಪಂದಿಸದ ಕಾರಣ ಮಂಗಳೂರಿನ 16 ಫಿಶ್ ಮಿಲ್ ಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.
Mangalore Fish factories pollution causing health hazards, 16 fish mills ordered to shut down by Environmental department. locals have been raising voice to inform people's representatives, police, the Pollution Control Board and concerned authorities to take action against the fish factories since long.
31-03-26 10:13 am
HK News Staffer
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
31-03-26 11:00 pm
HK News Staffer
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
31-03-26 10:06 pm
HK News Desk
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
31-03-26 11:11 am
HK News Staffer
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm