ಬ್ರೇಕಿಂಗ್ ನ್ಯೂಸ್
04-10-20 11:26 am Mangaluru Correspondent ಕರಾವಳಿ
ಮಂಗಳೂರು, ಅಕ್ಟೋಬರ್ 4: ಗೋವುಗಳನ್ನು ಟೆಂಪೋದಲ್ಲಿ ಅಮಾನುಷವಾಗಿ ತುಂಬಿಸಿಕೊಂಡು ಸಾಗಿಸುತ್ತಿದ್ದ ವೇಳೆ ಗೋವುಗಳು ಒಂದೊಂದೇ ರಸ್ತೆಗೆ ಎಸೆಯಲ್ಪಟ್ಟು ಅವಾಂತರ ಸೃಷ್ಟಿಯಾದ ಘಟನೆ ನಗರದಲ್ಲಿ ನಡೆದಿದೆ.
ಸುರತ್ಕಲ್ ಕಡೆಯಿಂದ ನಸುಕಿನ ವೇಳೆ ಅಕ್ರಮವಾಗಿ ಗೋವುಗಳನ್ನು ಕುದ್ರೋಳಿ ಕಸಾಯಿಖಾನೆಯತ್ತ ತರಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಕೊಟ್ಟಾರ ಬಳಿ ತಡೆಯಲು ಯತ್ನಿಸಿದ್ದಾರೆ. ಆದರೆ, ಕಾರ್ಯಕರ್ತರನ್ನು ಲೆಕ್ಕಿಸದೆ ಟೆಂಪೋ ವೇಗವಾಗಿ ಧಾವಿಸಿದ್ದು ಈ ವೇಳೆ ಅಪಾಯಕಾರಿಯಾಗಿ ತುಂಬಿಸಿದ್ದ ಗೋವುಗಳು ಹಿಂಭಾಗದ ಬಾಗಿಲು ಓಪನ್ ಆಗಿ ರಸ್ತೆಗೆ ಎಸೆಯಲ್ಪಟ್ಟಿದೆ. ಕೊಟ್ಟಾರ, ಕುಂಟಿಕಾನ ಜಂಕ್ಷನ್, ಮಣ್ಣಗುಡ್ಡೆ ಬಳಿ ಒಂಬತ್ತು ಗೋವುಗಳು ಹೀಗೆ ರಸ್ತೆಗೆ ಬಿದ್ದು ನರಳಾಡಿವೆ. ಇಷ್ಟಾದರೂ, ಆರೋಪಿಗಳು ಟೆಂಪೋವನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ.
ಕೊನೆಗೆ, ಬಜರಂಗದಳ ಕಾರ್ಯಕರ್ತರು ಮಣ್ಣಗುಡ್ಡೆ ಬಳಿ ರಸ್ತೆಗೆ ಬಿದ್ದ ಗೋವುಗಳನ್ನು ರಸ್ತೆಯಲ್ಲೇ ಕಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಕಾರ್ಯಕರ್ತರು ಬೆಳ್ಳಂಬೆಳಗ್ಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು ಸ್ಥಳಕ್ಕಾಗಮಿಸಿದ ಬರ್ಕೆ ಠಾಣೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.



ಟೆಂಪೋವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಬೇಕು, ಅದರಲ್ಲಿದ್ದ 30ಕ್ಕೂ ಹೆಚ್ಚು ಗೋವುಗಳನ್ನು ವಶಕ್ಕೆ ಪಡೆಯಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ. ಬಳಿಕ ಪೊಲೀಸರು ಟೆಂಪೋ ಮತ್ತು ಅದರಲ್ಲಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಅಲ್ಲಲ್ಲಿ ರಸ್ತೆಗೆ ಬಿದ್ದ ಒಂಬತ್ತು ಗೋವುಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿದ್ದಾರೆ.
ಹೀಗೆ ನೆಲಕ್ಕೆ ಬಿದ್ದ ಗೋವುಗಳಲ್ಲಿ ಹೆಚ್ಚಿನವು ಸಣ್ಣ ಪ್ರಾಯದ ಕರುಗಳು. ಕರುಗಳನ್ನು ಮಾಂಸ ಮಾಡಿ, ಮಟನ್ ಜೊತೆಗೆ ಬೆರೆಸುತ್ತಾರೆಂಬ ದೂರುಗಳಿವೆ. ಇದೇ ಕಾರಣಕ್ಕೆ ಗಂಡು ಕರುಗಳಿಗೆ ಭಾರೀ ಬೇಡಿಕೆ ಇದೆ. ನಿಯಮಿತವಾಗಿ ಮಟನ್ ಪೂರೈಕೆ ಆಗುವಲ್ಲಿ ಕರುಗಳ ಮಾಂಸವನ್ನು ಮಿಕ್ಸ್ ಮಾಡಲಾಗುತ್ತಿದೆ ಎನ್ನುವ ವಿಚಾರವನ್ನು ಅಲ್ಲಿನ ವ್ಯಾಪಾರಿಗಳೇ ಹೇಳುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಆಹಾರ ಇಲಾಖೆ ಅಧಿಕಾರಿಗಳು ತಪಾಸಣೆಗೆ ಬರದೇ ಇರುವುದು ದಂಧೆಕೋರರಿಗೆ ಭಯ ಇಲ್ಲದಾಗಿದೆ. ದಿನವೂ ನಸುಕಿನ ವೇಳೆ ಅಕ್ರಮ ಗೋಸಾಗಾಟ ನಡೆಯುತ್ತಿದ್ದರೂ, ಕಡಿವಾಣ ಇಲ್ಲದಾಗಿದೆ.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm