ಬ್ರೇಕಿಂಗ್ ನ್ಯೂಸ್
07-08-22 02:49 pm Udupi Correspondent ಕರಾವಳಿ
ಬೈಂದೂರು, ಆಗಸ್ಟ್ 7: ಚಾಕಲೇಟ್ ಕವರ್ ಸಹಿತ ತಿಂದು ಗಂಟಲಲ್ಲಿ ಸಿಕ್ಕಿಕೊಂಡು ಆರು ವರ್ಷದ ಮಗು ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಗುವಿನ ಸಾವಿಗೆ ಚಾಕಲೇಟ್ ಕವರ್ ಕಾರಣ ಅಲ್ಲ. ಬದಲಿಗೆ ಹೃದಯಾಘಾತ ಕಾರಣ ಎಂದು ಎಫ್ಎಸ್ಎಲ್ ವರದಿಯಲ್ಲಿ ಕಂಡುಬಂದಿದೆ.
ಜುಲೈ 20ರಂದು ಉಪ್ಪುಂದ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ತೆರಳುತ್ತಿದ್ದ ಸಮನ್ವಿ(6) ಶಾಲಾ ವ್ಯಾನಲ್ಲಿಯೇ ಉಸಿರು ಕಟ್ಟಿದಂತಾಗಿ ಮೃತಪಟ್ಟಿದ್ದಳು. ಮಗುವಿಗೆ ಅಸ್ವಸ್ಥ ಆಗಿರುವುದು ತಿಳಿಯುತ್ತಿದ್ದಂತೆ ಸ್ಕೂಲ್ ವ್ಯಾನಲ್ಲಿಯೇ ವೈದ್ಯರ ಬಳಿಗೆ ಒಯ್ಯಲಾಗಿತ್ತು. ಮಗು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು. ಮಗುವಿನ ತಾಯಿ, ಬೆಳಗ್ಗೆ ಶಾಲೆಗೆ ಹೋಗಲು ಹಠ ಹಿಡಿದಳೆಂದು ಚಾಕಲೇಟ್ ತೆಗೆದು ಕೊಟ್ಟಿದ್ದಾಗಿ ತಿಳಿಸಿದ್ದರು. ಚಾಕಲೇಟ್ ಕವರ್ ಸಹಿತ ತಿಂದ ಕಾರಣ ಗಂಟಲಲ್ಲಿ ಸಿಕ್ಕಿಕೊಂಡು ಮೃತಪಟ್ಟಿರಬೇಕೆಂದು ಶಂಕಿಸಲಾಗಿತ್ತು.
ಆದರೆ ಎಫ್ಎಸ್ಎಲ್ ವರದಿಯಲ್ಲಿ ಮಗುವಿಗೆ ಹೃದಯಾಘಾತ ಆಗಿದೆಯೆಂದು ಹೇಳಲಾಗಿದೆ. ಅಲ್ಲದೆ, ಹೃದಯದ ಕಾಯಿಲೆ ಇದ್ದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಪೊಲೀಸರು ಮಣಿಪಾಲ ಆಸ್ಪತ್ರೆಯಲ್ಲಿ ಮಗುವಿನ ಪೋಸ್ಟ್ ಮಾರ್ಟಂ ನಡೆಸಿದ ಬಳಿಕ ಕೆಲವು ಅಂಗಗಳನ್ನು ಎಫ್ಎಸ್ಎಲ್ ವರದಿಗಾಗಿ ಕಳುಹಿಸಿದ್ದರು. ವರದಿ ಪೊಲೀಸರ ಕೈಸೇರಿದ್ದು, ಮಗುವಿನ ಸಾವಿನ ಕಾರಣವನ್ನು ಹೊರಗೆಡವಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
The case of a six-year-old girl, who was reported to have died due to suffocation as the chocolate she was eating got stuck in her throat, has taken a twist. The FSL report confirmed that the girl died due to heart attack and not due to the chocolate getting stuck as it was believed thus far.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm