ಬ್ರೇಕಿಂಗ್ ನ್ಯೂಸ್
03-08-22 08:39 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 3: ಕೋಮು ವೈಷಮ್ಯ, ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹೊರ ರಾಜ್ಯದ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಚಿಕ್ಕಮಗಳೂರು, ಉಡುಪಿ ಪೊಲೀಸರನ್ನು ಕೆಎಸ್ ಆರ್ ಪಿ ಜೊತೆಗೆ ಹೆಚ್ಚುವರಿಯಾಗಿ ಭದ್ರತಗೆ ನಿಯೋಜಿಸಲಾಗಿದೆ. ಆದರೆ ಇವರು ಊಟದ ವಿಚಾರದಲ್ಲಿ ಸುರತ್ಕಲ್ ಪೊಲೀಸ್ ಸಿಬಂದಿ ಜೊತೆಗೆ ಆಕ್ಷೇಪ ತೆಗೆದು ಬೈದುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಸುರತ್ಕಲ್ ಕ್ಯಾಂಪ್ ನಲ್ಲಿ ನಿಯೋಜನೆಗೊಂಡಿದ್ದ ಚಿಕ್ಕಮಗಳೂರು ಪೊಲೀಸರು ಊಟ ತಂದುಕೊಟ್ಟಿದ್ದ ಸುರತ್ಕಲ್ ಪೊಲೀಸ್ ಸಿಬಂದಿಗೆ ಬೈದಿದ್ದು ಊಟ ಚೆನ್ನಾಗಿಲ್ಲ, ಹಳಸಿದೆ ಎಂದು ಹೇಳಿ ನಿಂದಿಸಿದ್ದಾರೆ. ಊಟದ ವಿಚಾರದಲ್ಲಿ ಆರಂಭಗೊಂಡ ಮಾತು ಆಬಳಿಕ ಬೇರೆ ವಿಚಾರಕ್ಕೆ ತಿರುಗಿದ್ದು, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಇದರ ವಿಡಿಯೋವನ್ನು ಒಬ್ಬರು ಸಿಬಂದಿಯೇ ಮಾಡಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ.


ಈ ಬಗ್ಗೆ ಸುರತ್ಕಲ್ ಇನ್ಸ್ ಪೆಕ್ಟರ್ ಚಂದ್ರಪ್ಪ ಬಳಿ ಕೇಳಿದಾಗ, ಊಟ ಚೆನ್ನಾಗಿತ್ತು. ಎಲ್ಲರಿಗೂ ಒಂದೇ ಕಡೆಯಿಂದ ಊಟ ಪೂರೈಕೆ ಮಾಡಲಾಗಿತ್ತು. ಎಲ್ಲ ಅಧಿಕಾರಿಗಳು, ಕೆಎಸ್ ಆರ್ ಪಿ ಸಿಬಂದಿ ಅದನ್ನೇ ಊಟ ಮಾಡಿದ್ದಾರೆ. ಊಟದ ಬಗ್ಗೆ ಕಂಪ್ಲೇಂಟ್ ಇರಲಿಲ್ಲ. ಚಿಕ್ಕಮಗಳೂರು ಪೊಲೀಸರು ಮಾತ್ರ ಆಕ್ಷೇಪ ತೆಗೆದಿದ್ದಾರೆ ಎಂದು ಹೇಳಿದರು. ಮಾಹಿತಿ ಪ್ರಕಾರ, ಊಟ ಚೆನ್ನಾಗಿಲ್ಲ, ಹಳಸಿದೆ ಎಂದು ಯಾರೋ ಕೇಳಿದ್ದಕ್ಕೆ, ನಾವು ದತ್ತಪೀಠಕ್ಕೆ ಬಂದಾಗ ಇದಕ್ಕಿಂತ ಒಳ್ಳೆ ಊಟ ಕೊಡುತ್ತೀರಾ ಎಂದು ಇಲ್ಲಿನ ಸಿಬಂದಿ ತಿರುಗೇಟು ನೀಡಿದ್ದಾರೆ. ಇದೇ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಹಲವರು ಸೇರಿ ಬೈದಾಡಿಕೊಂಡಿದ್ದಾರೆ.


ಪ್ರತಿ ಬಾರಿ ಕೋಮು ಗಲಭೆಯ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹೊರ ಜಿಲ್ಲೆಗಳ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಸರಿಯಾದ ಸಂದರ್ಭದಲ್ಲಿ ಊಟ, ನೀರು ಸಿಗದ್ದಕ್ಕೆ ಕೆಲವೊಮ್ಮೆ ಪೊಲೀಸ್ ಸಿಬಂದಿ ಆಕ್ಷೇಪ ತೆಗೆಯುತ್ತಾರೆ. ಆದರೆ, ಇಲ್ಲಿ ಊಟದ ಜೊತೆಗೆ ಹಳೆ ವಿಚಾರವನ್ನು ಕೆದಕಿ ಬೈದುಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
Mangalore police constable and chikkamagalur police constables fighting over food alleging that spoilt food has been distributed goes viral on social media.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm