ಪ್ರವೀಣ್ ನೆಟ್ಟಾರು ಹತ್ಯೆ ; ಮತ್ತಿಬ್ಬರು ಆರೋಪಿಗಳ ಸೆರೆ, ಸಂಚುಕೋರರು ನಾಪತ್ತೆ, ಎಸ್ಪಿ ಋಷಿಕೇಶ್ ಮಾಹಿತಿ

02-08-22 11:57 am       Mangalore Correspondent   ಕರಾವಳಿ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧಿಸಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ‌

ಮಂಗಳೂರು, ಆಗಸ್ಟ್ 2 : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧಿಸಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ‌

ಸದ್ದಾಂ (32) ಮತ್ತು ಹ್ಯಾರಿಸ್ (42) ಬಂಧಿತರಾಗಿದ್ದು ಆರೋಪಿಗಳು ಬೆಳ್ಳಾರೆಯ ಪಳ್ಳಿಮಜಲು ನಿವಾಸಿಗಳು.‌ ಆರೋಪಿಗಳು ಕೊಲೆಗೆ ಸಂಚು ನಡೆಸಿದ ಪ್ರಮುಖರ ಮಾಹಿತಿ ನೀಡಿದ್ದು ಸದ್ಯಕ್ಕೆ ತಲೆಮರೆಸಿಕೊಂಡಿದ್ದಾರೆ.‌ ಅವರ ಬಂಧನಕ್ಕಾಗಿ ಪೊಲೀಸ್ ತಂಡದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. 

Sonawane Rishikesh takes charge as new SP of Dakshina Kannada | Mangaluru  News - Times of India

ಜುಲೈ 28ರಂದು ಬಂಧಿಸಲಾಗಿದ್ದ ಶಫೀಕ್ ಮತ್ತು ಝಾಕಿರ್ ನೀಡಿರುವ ಮಾಹಿತಿ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ದ.ಕ. ಎಸ್ಪಿ ಋಷಿಕೇಶ್ ಸೋನವಾಣೆ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ. 

ಇದೇ ವೇಳೆ, ಕೇರಳದ ತಲಶ್ಶೇರಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗಳಿಗೂ ಪ್ರವೀಣ್ ಹತ್ಯೆ ಪ್ರಕರಣಕ್ಕೂ ಸಂಬಂಧ ಇಲ್ಲವೆಂದು ಎಸ್ಪಿ ಸ್ಪಷ್ಟನೆ ನೀಡಿದ್ದಾರೆ.‌

According to information, police took into custody two people on Tuesday August 2, in connection with the murder of BJP district Yuva Morcha executive committee member Praveen Nettaru. The arrested are identified as Saddam (32) and Haris (42), both from Pallimajalu, Bellare. Based on the information provided by Zakeer and Shafiq, who are in police custody, the two were apprehended by the police.