ಬ್ರೇಕಿಂಗ್ ನ್ಯೂಸ್
01-08-22 10:32 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1 : ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಬೆಟ್ಟಗಳ ನಡುವೆ ಭಾರೀ ಜಲಸ್ಫೋಟ ಉಂಟಾಗಿ ಅನಾಹುತ ಸಂಭವಿಸಿದೆ.
ಆದಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು ದೇವಸ್ಥಾನಕ್ಕೆ ನೀರು ನುಗ್ಗಿದ್ದು ರಾತ್ರಿ ವೇಳೆ ದಿಢೀರ್ ಮುಳುಗಡೆಯಾಗಿದೆ. ಮಣ್ಣು ಮಿಶ್ರಿತ ಕೆಸರು ನೀರು ದೇವಸ್ಥಾನದ ಒಳಗೆ ನುಗ್ಗಿದ್ದು ದಿಢೀರ್ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.
ಇದಲ್ಲದೆ, ಸುಬ್ರಹ್ಮಣ್ಯ, ಬಿಸ್ಲೆ ಘಾಟ್, ಕಲ್ಮಕಾರು, ಬಾಳುಗೋಡು ಆಸುಪಾಸಿನಲ್ಲಿ ಬೆಟ್ಟಗಳ ಮಧ್ಯೆ ಜಲಸ್ಫೋಟ ಉಂಟಾಗಿದ್ದು ಬೃಹತ್ ಮರಗಳು, ಬಂಡೆ ಕಲ್ಲುಗಳು ಛಿದ್ರಗೊಂಡು ಬಿದ್ದಿವೆ. 2018ರ ಬಳಿಕ ಪ್ರತಿ ವರ್ಷ ಬೆಳ್ತಂಗಡಿ, ಸುಳ್ಯ, ಸಕಲೇಶಪುರ ವ್ಯಾಪ್ತಿಯಲ್ಲಿ ಈ ರೀತಿಯ ಜಲ ಸ್ಫೋಟ ಸಂಭವಿಸುತ್ತಿದ್ದು ಬೆಟ್ಟಗಳ ನಡುವೆ ದಿಢೀರ್ ಸ್ಫೋಟಗೊಂಡು ಭಾರೀ ಪ್ರಮಾಣದಲ್ಲಿ ನೀರು ಚಿಮ್ಮಿ ಬರುತ್ತದೆ. 2018ರಲ್ಲಿ ಮೊದಲ ಬಾರಿಗೆ ಸಂಪಾಜೆ ಬಳಿಯ ಜೋಡುಪಾಲ, ಮಡಿಕೇರಿ ಬಳಿಯ ನಾಪೋಕ್ಲು ಭಾಗದಲ್ಲಿ ಇದೇ ರೀತಿಯ ಸ್ಫೋಟ ಆಗಿತ್ತು.
ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಇಂಗುವ ಮಳೆನೀರು ಬುಡದ ಭಾಗದಲ್ಲಿ ಬೆಟ್ಟಗಳನ್ನು ಸೀಳಿಕೊಂಡು ಹೊರ ಬರುತ್ತದೆ. ಈ ವೇಳೆ, ಭಾರೀ ಸ್ಫೋಟಗಳಾಗುತ್ತಿದ್ದು ಅಲ್ಲಿರುವ ಬೃಹತ್ ಮರಗಳು ಛಿದ್ರಗೊಂಡು ಕಲ್ಲು ಮಣ್ಣಿನ ಜೊತೆಗೆ ಕೆಸರು ನೀರು ಹೊರಹೊಮ್ಮುತ್ತದೆ. ಎತ್ತಿನಹೊಳೆ ಯೋಜನೆ ಕಾಮಗಾರಿಗೆಂದು ಪಶ್ಚಿಮ ಘಟ್ಟಗಳ ತುದಿಯನ್ನು ಸಮತಟ್ಟು ಮಾಡಲಾಗಿದ್ದು ಅದೇ ಕಾರಣದಿಂದ ಅಲ್ಲಿ ಇಂಗುವ ಮಳೆ ನೀರು ನೇರವಾಗಿ ಬೆಟ್ಟದ ಒಳಕ್ಕಿಳಿದು ಯಾವುದೋ ಒಂದು ಭಾಗದಲ್ಲಿ ಜಲ ಸ್ಫೋಟಗೊಂಡು ಹೊರಕ್ಕೆ ಬರುತ್ತದೆ. ಈ ರೀತಿಯ ಜಲ ಸ್ಫೋಟಗಳು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಕಳೆದ ಐದಾರು ವರ್ಷಗಳಲ್ಲಿ ಪ್ರತಿ ವರ್ಷ ಸಂಭವಿಸುತ್ತಿವೆ ಎಂದು ಪರಿಸರ ತಜ್ಞರು ಹೇಳುತ್ತಾರೆ.
ಅದೇ ಮಾದರಿಯ ಸ್ಫೋಟ ಈ ಬಾರಿಯೂ ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಉಂಟಾಗಿದ್ದು ಜನರಿಗೆ ಆತಂಕ ಸೃಷ್ಟಿಸಿದೆ. ಆದಿ ಸುಬ್ರಹ್ಮಣ್ಯ ದೇವಸ್ಥಾನ ಮುಳುಗಡೆ ಆಗಿರುವುದರಿಂದ ಎರಡು ದಿನ ಕಾಲ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಕೆಸರು ನೀರು, ಮರದ ದಿಮ್ಮಿಗಳು, ಕಲ್ಲು ಮಣ್ಣನ್ನು ಹೊತ್ತ ಪ್ರವಾಹ ಬಂದು ದೇವಸ್ಥಾನವನ್ನು ಮುಳುಗಿಸಿದೆ. ರಾತ್ರಿಯಿಡೀ ಮಳೆಯಾದಲ್ಲಿ ದೇವಸ್ಥಾನವೇ ಕೊಚ್ಚಿ ಹೋಗುವ ಸಾಧ್ಯತೆಯಿದೆ.
Heavy rains in Western Ghats Sri Adi Subrahmanya Temple flooded with water, submerged.
10-05-25 11:30 am
HK News Desk
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm