ಬ್ರೇಕಿಂಗ್ ನ್ಯೂಸ್
30-07-22 10:38 pm Mangalore Correspondent ಕರಾವಳಿ
ಮಂಗಳೂರು, ಜುಲೈ 30: ರಾಜ್ಯದ ಮುಖ್ಯಮಂತ್ರಿ ಕೋಮು ವೈಷಮ್ಯದ ಕಾರಣಕ್ಕೆ ಕೊಲೆಯಾದ ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿ ನೀಡಿದ್ದಾಗ, ಅದಕ್ಕೂ ಹಿಂದೆ ಕೊಲೆಯಾಗಿದ್ದ ಮುಸ್ಲಿಂ ಯುವಕನ ಮನೆಗೆ ಭೇಟಿ ನೀಡಿಲ್ಲ ಅನ್ನುವುದು ಮುಸ್ಲಿಂ ಸಂಘಟನೆಗಳ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಶಾಂತಿ ಸಭೆಯನ್ನು ಮುಸ್ಲಿಂ ಸಂಘಟನೆಗಳು ಬಹಿಷ್ಕರಿಸಿದ್ದವು.
ಇದರ ಬದಲು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್ ಮಸೂದ್ ಮನೆಯಲ್ಲಿ ತುರ್ತಾಗಿ ಸಭೆ ನಡೆಸಿದ ಮುಸ್ಲಿಂ ನಾಯಕರು, ಕೊಲೆಯಾದ ಮಸೂದ್ ಮತ್ತು ಮಹಮ್ಮದ್ ಫಾಜಿಲ್ ಕುಟುಂಬಸ್ಥರಿಗೆ ತಲಾ 30 ಲಕ್ಷ ಪರಿಹಾರ ಧನ ಸಂಗ್ರಹಿಸಿ ನೀಡಲು ನಿರ್ಧರಿಸಿದ್ದಾರೆ. ಅಲ್ಲದೆ, ಕೊಲೆಯಾಗಿದ್ದ ಬಿಜೆಪಿ ಕಾರ್ಯಕರ್ತನ ಮನೆಗೆಂದು ಬೆಳ್ಳಾರೆಗೆ ಬಂದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅದೇ ಗ್ರಾಮದಲ್ಲಿದ್ದ ಮುಸ್ಲಿಂ ಯುವಕ ಮಹಮ್ಮದ್ ಮಸೂದ್ ಮನೆಗೆ ಭೇಟಿ ನೀಡದಿರುವುದು ದೊಡ್ಡ ಅಪರಾಧ. ತಾರತಮ್ಯ ನೀತಿಗೆ ಸಾಕ್ಷಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಒಂದು ವರ್ಗಕ್ಕೆ ಅಲ್ಲ. ಒಂದು ಪಕ್ಷಕ್ಕೂ ಅಲ್ಲ. ಇಡೀ ರಾಜ್ಯಕ್ಕೆ, ರಾಜ್ಯದ ಜನರಿಗೆಲ್ಲ ಮುಖ್ಯಮಂತ್ರಿ. ರಾಜ್ಯ ಸರಕಾರ ಕೊಡುವುದು ಜನರ ತೆರಿಗೆಯ ಹಣವನ್ನು. ಒಂದು ವರ್ಗದ ಕಾರ್ಯಕರ್ತನಿಗೆ ಸರಕಾರದಿಂದ ಪರಿಹಾರ ನೀಡಿದರೆ, ಇನ್ನೊಂದು ವರ್ಗಕ್ಕೆ ನೀಡದಿರುವುದು ತಾರತಮ್ಯ ನೀತಿ. ಹೀಗಾಗಿ ಮುಸ್ಲಿಂ ಸೆಂಟ್ರಲ್ ಕಮಿಟಿ ವಿವಿಧ ದಾನಿಗಳಿಂದ ಹಣ ಸಂಗ್ರಹಿಸಿ ಎರಡೂ ಕುಟುಂಬಕ್ಕೆ ನೀಡಲು ನಿರ್ಧರಿಸಿದೆ. ಅಲ್ಲದೆ, ಎರಡೂ ಕುಟುಂಬಗಳಿಗೆ ಕಾನೂನು ನೆರವನ್ನೂ ಒದಗಿಸಲು ಮುಂದಾಗಿವೆ.
ಇದೇ ವೇಳೆ ಮಾತನಾಡಿದ ಕೆಎಸ್ ಮಸೂದ್, ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕು. ಯಾವುದೇ ಕೋಮು ದ್ವೇಷದ ಕೃತ್ಯಗಳಿಗೆ ಆಸ್ಪದ ನೀಡಬಾರದು. ಕೊಲೆಯಾದ ಮೂರೂ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ ಎಂದಿದ್ದಾರೆ. ಸಭೆಯಲ್ಲಿ ಮಾಜಿ ಸಚಿವ ಯುಟಿ ಖಾದರ್, ಮಾಜಿ ಶಾಸಕ ಮೊಯ್ದೀನ್ ಬಾವ, ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಬಿಎಂ ಮುಮ್ತಾಜ್ ಆಲಿ, ಹನೀಫ್ ಬಂದರ್, ಸೈಯದ್ ಅಹ್ಮದ್ ಬಾಷಾ ತಂಗಳ್ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ, ಪಿಎಫ್ಐ ಸಂಘಟನೆ, ಮುಸ್ಲಿಂ ಜಸ್ಟಿಸ್ ಫಾರಂ ಸೇರಿದಂತೆ ವಿವಿಧ ಸಂಘಟನೆಗಳು ಶಾಂತಿ ಸಭೆಯನ್ನು ಬಹಿಷ್ಕರಿಸಿದ್ದವು.
Few Muslim organisations on Saturday July 30 had boycotted the peace committee meeting organised by the district administration after three murders rocked Dakshina Kannada district. Muslim Central Committee president K S Mohammed Masood organised an urgent meeting at his residence. In the meeting, the leaders decided to provide compensation of Rs 30 lac each to the family members of Mohammed Masood of Bellare and Mohammed Fazil of Mangalpete.
10-05-25 11:30 am
HK News Desk
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm