ಬ್ರೇಕಿಂಗ್ ನ್ಯೂಸ್
24-07-22 07:12 pm Mangalore Correspondent ಕರಾವಳಿ
ಉಳ್ಳಾಲ, ಜು.24 : ವಿದ್ಯುತ್ ಶಾಕ್ ಹೊಡೆದು ಅಕಾಲಿಕ ಸಾವನ್ನಪ್ಪಿದ್ದ ತೊಕ್ಕೊಟ್ಟು ಸಾಗರ್ ಕಲೆಕ್ಷನ್ ಬಟ್ಟೆ ಮಳಿಗೆಯ ಉದ್ಯೋಗಿ ಇಲ್ಯಾಸ್ ಮಹಮ್ಮದ್ ಹರೇಕಳ ಸ್ಮರಣಾರ್ಥ ತಿಂಗಳೊಂದರಲ್ಲೇ ಬೃಹತ್ ರಕ್ತದಾನ ಶಿಬಿರ ತೊಕ್ಕೊಟ್ಟಿನಲ್ಲಿ ನಡೆದಿದ್ದು, ಅಗಲಿದ ಸಿಬ್ಬಂದಿಯ ಮೇಲೆ ಮಾಲಕರು ತೋರಿದ ಪ್ರೀತಿ, ಗೌರವಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ತೊಕ್ಕೊಟ್ಟಿನ ಸಾಗರ್ ಕಲೆಕ್ಷನ್ ಬಟ್ಟೆ ಮಳಿಗೆಯಲ್ಲಿ ಕಳೆದ 15 ವರುಷದಿಂದ ಉದ್ಯೋಗಿಯಾಗಿದ್ದ ಇಲ್ಯಾಸ್ ಮಹಮ್ಮದ್ ಅವರು ಕಳೆದ ತಿಂಗಳ 24 ರಂದು ಸಂಜೆ ಮಾವಿನ ಮರ ಏರಿ ಕಾಯಿ ಕೀಳುತ್ತಿದ್ದ ವೇಳೆ ಹೈಟೆನ್ಷನ್ ತಂತಿ ತಗುಲಿ ಮರದಲ್ಲೇ ದಾರಣ ಸಾವನ್ನಪ್ಪಿದ್ದರು. ಅಗಲಿದ ಪ್ರೀತಿಯ ಉದ್ಯೋಗಿಯ ಸ್ಮರಣಾರ್ಥವಾಗಿ ಸಾಗರ್ ಕಲೆಕ್ಷನ್ ತೊಕ್ಕೊಟ್ಟು, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮತ್ತು ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ರಕ್ತನಿಧಿ ಸಂಸ್ಥೆಯವರು ಜೊತೆ ಸೇರಿ ಇಂದು ತೊಕ್ಕೊಟ್ಟಿನಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು. ಶಿಬಿರದಲ್ಲಿ ಅನೇಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡುವಂತೆ ಪ್ರೇರೇಪಿಸಲು ರಕ್ತದಾನಿಗಳಿಗೆ ಆಕರ್ಷಕ ಉಡುಗೊರೆಯನ್ನೂ ನೀಡಲಾಯಿತು.


ಸಾಗರ್ ಕಲೆಕ್ಷನ್ಸ್ ಪಾಲುದಾರ ಅಬ್ದುಲ್ ರಹಿಮಾನ್ ಮಾತನಾಡಿ ಇಲ್ಯಾಸ್ ಅವರು ಸ್ನೇಹಜೀವಿಯಲ್ಲದೆ, ಪರೋಪಕಾರಿಯಾಗಿದ್ದರು. ಅವರ ಹೆಸರಲ್ಲೇ ಜಾತಿ, ಧರ್ಮ ಮೀರಿ ಸಮಾಜಕ್ಕೆ ಅತ್ಯಗತ್ಯ ಇರುವ ರಕ್ತವನ್ನ ಕ್ರೋಢೀಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.


ಸ್ಥಳೀಯ ಶಾಸಕ ಯು.ಟಿ ಖಾದರ್, ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ, ಮಂಗಳೂರು ನಗರ ಡಿಸಿಪಿ ದಿನೇಶ್ ಕುಮಾರ್, ಬಿಜೆಪಿ ಮುಖಂಡ ಚಂದ್ರಹಾಸ್ ಉಳ್ಳಾಲ್, ಸಾಗರ್ ಕಲೆಕ್ಷನ್ ಪಾಲುದಾರ ಇಸ್ಮಾಯಿಲ್, ಸಮಾಜ ಸೇವಕರಾದ ಝಾಕಿರ್ ಇಕ್ಲಾಸ್ ಮೊದಲಾವರು ಉಪಸ್ಥಿತರಿದ್ದರು.
Ullal Youth dies of electrocution, family conduct mass blood camp on the day of his death anniversary.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm