ಬ್ರೇಕಿಂಗ್ ನ್ಯೂಸ್
23-07-22 09:01 pm Mangalore Correspondent ಕರಾವಳಿ
ಮಂಗಳೂರು, ಜುಲೈ 23 : ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಅನುಕೂಲವಾಗುವಂತೆ ಮಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಡುವೆ ಮೈಸೂರು ಮಾರ್ಗದಲ್ಲಿ ಜುಲೈ 26ರಿಂದ ಆಗಸ್ಟ್ 31ರ ತನಕ ವಾರದಲ್ಲಿ ಮೂರು ದಿನ ವಿಶೇಷ ರಾತ್ರಿ ರೈಲು ಸೇವೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ನಿರಂತರ ಮಳೆ ಮತ್ತು ಭೂಕುಸಿತ ಪರಿಣಾಮ ರಸ್ತೆ ಸಂಪರ್ಕ ಮಾರ್ಗ ಸಮಸ್ಯೆ ಆಗಿರುವುದರಿಂದ ಮಂಗಳೂರು- ಬೆಂಗಳೂರು ನಡುವೆ ದಿನಂಪ್ರತಿ ಹೆಚ್ಚುವರಿ ರೈಲು ಒದಗಿಸುವಂತೆ ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮಾಡಿದ ಮನವಿಗೆ ರೈಲ್ವೇ ಮಂಡಳಿ ಈ ಮೂಲಕ ಸ್ಪಂದಿಸಿದೆ.
ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿರುವ ಹೊಸ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ. ಕೆಂಗೇರಿ- ರಾತ್ರಿ 8.49, ರಾಮನಗರ- ರಾತ್ರಿ 9.13, ಚನ್ನರಾಯಪಟ್ಟಣ- ರಾತ್ರಿ 9.24,ಮಂಡ್ಯ- ರಾತ್ರಿ 9.54, ಮೈಸೂರು ಜಂಕ್ಷನ್- ರಾತ್ರಿ 11, ಕೃಷ್ಣರಾಜನಗರ- ರಾತ್ರಿ 11.49, ಹೊಳೆನರಸಿಪುರ- ರಾತ್ರಿ 12.43,
ಹಾಸನ- ರಾತ್ರಿ 1.35, ಸಕಲೇಶಪುರ- ಬೆಳಗಿನ ಜಾವ 3 ಗಂಟೆ, ಸುಬ್ರಹ್ಮಣ್ಯ ರೋಡ್- ಬೆಳಗ್ಗೆ 6.10, ಕಬಕ ಪುತ್ತೂರು- ಬೆಳಗ್ಗೆ 7,
ಬಂಟ್ವಾಳ- ಬೆಳಗ್ಗೆ 7.30, ಪಡೀಲ್- ಬೆಳಗ್ಗೆ 8.25, ಮಂಗಳೂರು ಸೆಂಟ್ರಲ್- ಬೆಳಗ್ಗೆ 09.05
ಮಂಗಳೂರಿನಿಂದ ಸಂಜೆ 6.35ಕ್ಕೆ ಹೊರಡುವ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ. ಮಂಗಳೂರು ಜಂಕ್ಷನ್- ಸಂಜೆ 6.48, ಪಡೀಲ್- ಸಂಜೆ 7.10, ಬಂಟ್ವಾಳ- ಸಂಜೆ 7.20, ಕಬಕ ಪುತ್ತೂರು- ಸಂಜೆ 7.48, ಸುಬ್ರಹ್ಮಣ್ಯ ರೋಡ್- ರಾತ್ರಿ 8.40,ಸಕಲೇಶಪುರ- ರಾತ್ರಿ 9.20, ಹಾಸನ- ಮಧ್ಯರಾತ್ರಿ 12.25, ಹೊಳೆನರಸಿಪುರ- ಮಧ್ಯರಾತ್ರಿ 1.13, ಕೃಷ್ಣರಾಜನಗರ- ರಾತ್ರಿ 2.08, ಮೈಸೂರು ಜಂಕ್ಷನ್- ಬೆಳಗಿನ ಜಾವ 3, ಮಂಡ್ಯ- ಬೆಳಗಿನ ಜಾವ 3.54, ಚನ್ನರಾಯಪಟ್ಟಣ- ಬೆಳಗಿನಜಾವ 4.30, ರಾಮನಗರ- ಬೆಳಗಿನಜಾವ 4.42, ಕೆಂಗೇರಿ- ಬೆಳಗಿನಜಾವ 5.11, ಬೆಂಗಳೂರು ಸಿಟಿ ಜಂಕ್ಷನ್ - ಬೆಳಗ್ಗೆ 6.15
ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ಹತ್ತಿರದ ಶಿರಾಡಿ ಘಾಟ್ ಮಾರ್ಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದಿನಂಪ್ರತಿ ಉಭಯ ನಗರಗಳ ನಡುವೆ ತಲಾ ಒಂದು ಹಗಲು ರೈಲು ಮತ್ತು ರಾತ್ರಿ ರೈಲು ಇದೆ. ಈ ಮಾರ್ಗದಲ್ಲಿ ಹೆಚ್ಚುವರಿ ರೈಲಿನ ಅವಶ್ಯಕತೆ ತುಂಬಾ ಇದೆ ಎಂದು ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಯಾವ ದಿನ ಸಂಚಾರ ?
ಮಂಗಳೂರಿನಿಂದ ಬೆಂಗಳೂರು ನಗರಕ್ಕೆ ಜುಲೈ 27ರಿಂದ ಆ.31ರ ತನಕ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ 06548 ನಂಬರಿನ ರೈಲು ಸಂಚರಿಸಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಜುಲೈ 26ರಿಂದ ಆಗಸ್ಟ್ 30ರ ತನಕ ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ 06547 ನಂಬರಿನ ರೈಲು ಸಂಚರಿಸಲಿದೆ.
The South Western Railway (SWR) has decided to operate a tri-weekly special express between Bengaluru and Mangaluru via Mysuru from July 26 in view of the snapped road connectivity via National Highway 75 (Shiradi Ghat) and NH 276 (Sampaje Ghat) between the two cities.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm