ಬ್ರೇಕಿಂಗ್ ನ್ಯೂಸ್
23-07-22 05:01 pm Mangalore Correspondent ಕರಾವಳಿ
ಮಂಗಳೂರು, ಜುಲೈ 23: ಮಳಲಿ ಮಸೀದಿ ವಿವಾದ ಪ್ರಕರಣದಲ್ಲಿ ವಿಶ್ವ ಹಿಂದು ಪರಿಷತ್ ಕಡೆಯಿಂದ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಬೇಕೆಂಬ ಮಸೀದಿ ಕಮಿಟಿ ಪರ ವಕೀಲರ ಅರ್ಜಿಯ ಕುರಿತು ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸಿವಿಲ್ ನ್ಯಾಯಾಲಯ ಆಗಸ್ಟ್ 1ರಂದು ತೀರ್ಪು ನೀಡಲಿದೆ.
ಇತ್ತೀಚೆಗಷ್ಟೇ ಈ ಬಗ್ಗೆ ಹೈಕೋರ್ಟಿನಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಲಾಗಿತ್ತು. ಕೆಳಗಿನ ಕೋರ್ಟಿನಲ್ಲಿ ವಿಚಾರಣೆ ಕೈಗೆತ್ತಿಕೊಂಡು ತೀರ್ಪು ನೀಡುವಂತೆ ನಿರ್ದೇಶನವನ್ನೂ ನೀಡಲಾಗಿತ್ತು. ಅದಕ್ಕೂ ಹಿಂದೆ ಹೈಕೋರ್ಟ್, ಮಂಗಳೂರಿನ ಸಿವಿಲ್ ಕೋರ್ಟ್ ಮಳಲಿ ವಿವಾದದ ಕುರಿತು ತೀರ್ಪು ನೀಡುವಂತಿಲ್ಲ ಎಂದು ಹೇಳಿ ಚರ್ಚೆಗೆ ಗ್ರಾಸ ಮಾಡಿತ್ತು. ಆನಂತರ, ಮಸೀದಿ ಕಮಿಟಿ ಪರ ವಕೀಲರು ಹೈಕೋರ್ಟಿನಲ್ಲಿ ವಾದ ಮಂಡಿಸಿ, ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ತೆರವು ಮಾಡಿದ್ದರು.

ಆನಂತರ, ಮಂಗಳೂರಿನ ಕೋರ್ಟಿನಲ್ಲೇ ವಿಚಾರಣೆ ಮುಂದುವರಿಸಲಾಗಿತ್ತು. ಮಸೀದಿ ಕಮಿಟಿ ಮತ್ತು ವಿಶ್ವ ಹಿಂದು ಪರಿಷತ್ ಪರವಾಗಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದ್ದು ನ್ಯಾಯಾಧೀಶರು ವಾದ-ಪ್ರತಿವಾದ ಆಲಿಸಿದ್ದರು. ಮೊದಲಿಗೆ, ಮಸೀದಿ ನವೀಕರಣ ಕಾಮಗಾರಿಗೆ ವಿಶ್ವ ಹಿಂದು ಪರಿಷತ್ ವಕೀಲರ ಕೋರಿಕೆಯಂತೆ ಕೋರ್ಟಿನಿಂದ ತಡೆ ವಿಧಿಸಲಾಗಿತ್ತು. ತಡೆ ತೆರವು ಮಾಡಬೇಕೆಂದು ಮಸೀದಿ ಕಮಿಟಿ ಪರ ವಕೀಲರು ವಾದ ಮಂಡಿಸಿದ್ದಾರೆ. ಇದೇ ವೇಳೆ, ವಿಶ್ವ ಹಿಂದು ಪರಿಷತ್ತಿನಿಂದ ಮತ್ತೊಂದು ಅರ್ಜಿ ಸಲ್ಲಿಸಿ, ಉತ್ತರ ಪ್ರದೇಶದ ಗ್ಯಾನವಾಪಿ ಮಸೀದಿ ರೀತಿಯಲ್ಲೇ ಕೋರ್ಟ್ ಕಮಿಷನ್ ನೇಮಕ ಮಾಡಬೇಕು, ಸ್ಥಳದ ಸರ್ವೆ ನಡೆಸಲು ಆದೇಶ ಮಾಡಬೇಕೆಂದು ಆಗ್ರಹ ಮಾಡಲಾಗಿತ್ತು.

ಇದರ ನಡುವೆಯೇ, ಮಸೀದಿ ಇರುವ ಜಾಗ ವಕ್ಫ್ ಕಮಿಟಿಗೆ ಸೇರಿದ್ದಾಗಿದ್ದು, ಈ ಬಗ್ಗೆ ಮಂಗಳೂರಿನ ಸಿವಿಲ್ ಕೋರ್ಟಿನಲ್ಲಿ ಪ್ರಶ್ನೆ ಮಾಡುವಂತೆಯೇ ಇಲ್ಲ. ಇದನ್ನು ಪ್ರಶ್ನಿಸಲು ಪ್ರತ್ಯೇಕ ವಕ್ಫ್ ಕೋರ್ಟ್ ಇದೆ. ಈ ಕುರಿತು ನಿರ್ಣಯಿಸಲು ಸಿವಿಲ್ ಕೋರ್ಟಿಗೆ ಅಧಿಕಾರ ಇಲ್ಲ. ಹೀಗಾಗಿ ವಿಶ್ವ ಹಿಂದು ಪರಿಷತ್ ಕಡೆಯಿಂದ ಸಲ್ಲಿಸಿದ್ದ ಅರ್ಜಿಯನ್ನೇ ವಜಾ ಮಾಡುವಂತೆ ಮಸೀದಿ ಪರವಾಗಿ ಹಿರಿಯ ವಕೀಲ ಎಂ.ಪಿ.ಶೆಣೈ ವಾದ ಮಂಡನೆ ಮಾಡಿದ್ದರು. ಇದು ಪ್ರಬಲ ಅರ್ಜಿಯಾಗಿದ್ದು, ಈ ಬಗ್ಗೆ ಆಗಸ್ಟ್ 1ರಂದು ತೀರ್ಪು ನೀಡುವುದಾಗಿ ಸಿವಿಲ್ ಕೋರ್ಟ್ ಹೇಳಿದೆ. ಕೋರ್ಟ್ ತೀರ್ಪು ವಿಶ್ವ ಹಿಂದು ಪರಿಷತ್ತಿಗೆ ಪ್ರತಿಕೂಲವಾಗಿ ಬಂದಲ್ಲಿ ಸಿವಿಲ್ ಕೋರ್ಟಿನಲ್ಲಿರುವ ವ್ಯಾಜ್ಯ ಬೇರೆಯದೇ ಕೋರ್ಟಿಗೆ ವರ್ಗಾವಣೆಗೊಳ್ಳುವ ಸಾಧ್ಯತೆಯಿದೆ.
The third additional civil court of the city will pronounce its verdict with regard to the Malali mosque row on August 1.The counsel for pro-Hindu organizations had appealed to make a survey through court commissioner as a structure resembling temple was seen on the land of mosque. The pro-mosque committee lawyer had objected for this request. In his argument, the counsel for mosque committee said that the land is under the Wafk board. So survey should not be done. Instead permission should be given to continue the renovation work of the mosque.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm