ಬ್ರೇಕಿಂಗ್ ನ್ಯೂಸ್
19-07-22 06:19 pm Mangalore Correspondent ಕರಾವಳಿ
ಮಂಗಳೂರು, ಜುಲೈ 19: ಜನರ ಬೆವರಿನ ದುಡ್ಡನ್ನು ಕಿತ್ತುಕೊಂಡು ಸರಕಾರ ನಡೆಸುವುದಕ್ಕೆ ಬಿಜೆಪಿ ಮುಂದಾಗಿದೆ. ತಮ್ಮ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುವತ್ತ ಸಾಗಿದೆ. ಈಗ ಜನರು ತಿನ್ನುವ ಅಕ್ಕಿ, ಹಾಲು, ಮೊಸರಿನ ಮೇಲೂ ತೆರಿಗೆ ವಿಧಿಸುತ್ತಿದ್ದಾರೆ. ಅಕ್ಕಿಗೆ ಬೇರೆ, ಮಂಡಕ್ಕಿಗೆ ಬೇರೆ ತೆರಿಗೆ ಹಾಕುತ್ತಿದ್ದಾರೆ. ರಾಹುಲ್ ಗಾಂಧಿ ಅಂದು ಹೇಳಿದ್ದ ಗಬ್ಬರ್ ಸಿಂಗ್ ಟ್ಯಾಕ್ಸ್ ಅಂದ್ರೆ ಏನೆಂದು ಈಗ ಜನರಿಗೆ ಗೊತ್ತಾಗುತ್ತಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಯುಟಿ ಖಾದರ್, ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಟೀಕಾಸ್ತ್ರ ಮಾಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾದರ್, ಮಕ್ಕಳು ತಿನ್ನುವ ಆಹಾರಕ್ಕೂ ತೆರಿಗೆ ಹಾಕುತ್ತಿದ್ದಾರೆ. ಓಟ್ಸ್, ಬೆಲ್ಲ, ಲಸ್ಸಿ ಹೀಗೆ ಸಿಕ್ಕ ಸಿಕ್ಕಿದ್ದಕ್ಕೆಲ್ಲ ಟ್ಯಾಕ್ಸ್ ಹಾಕಿ ಜನರನ್ನು ಹಿಂಡುತ್ತಿದ್ದಾರೆ. ಜನರ ಬೆವರಿನ ದುಡ್ಡನ್ನು ಕೀಳುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ಕಡಿಮೆ ಮಾಡುವವರು, ಜನರ ಮೇಲೆ ಹೊರೆ ಹಾಕಿ ಅವರು ದುಡಿದ ಹಣವನ್ನು ಲೂಟುತ್ತಿದ್ದಾರೆ. ಮಕ್ಕಳು ಬಳಸುವ ಪೆನ್ನು, ಪೆನ್ಸಿಲಿಗೂ ಟ್ಯಾಕ್ಸ್ ಹಾಕುವ ಸ್ಥಿತಿ ಬಂದಿದೆ. ಇಷ್ಟೆಲ್ಲ ತೆರಿಗೆ ಹಾಕಿದರೂ, ಜನರಿಗೆ ಒಳಿತಾಗುವ ಯಾವುದೇ ಜನೋಪಯೋಗಿ ಕೆಲಸವನ್ನು ಮಾಡಿಲ್ಲ.

ಜಿಎಸ್ಟಿ ವಿಧಿಸಿ ನಮ್ಮ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯ ಮಾಡಿದ್ದಾರೆ. ಇಡೀ ದೇಶದಲ್ಲಿ ಅತಿ ಹೆಚ್ಚು ಆದಾಯ ತರುವ ರಾಜ್ಯ ಕರ್ನಾಟಕ. ಆದರೆ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಏನು ಕೊಟ್ಟಿದ್ದಾರೆ. ಯಾವುದೇ ಪ್ಯಾಕೇಜ್ ಇಲ್ಲ. ಇದನ್ನು ಪ್ರಶ್ನೆ ಮಾಡಬೇಕಾದ ರಾಜ್ಯದ ಸಂಸದರು ಬಾಯಿಗೆ ಪ್ಲಾಸ್ಟರ್ ಹಾಕಿ ಕುಳಿತಿದ್ದಾರೆ. ಕೇಂದ್ರ ಸರಕಾರ ಜನರನ್ನು ಲೂಟಿ ಮಾಡಿ ಖಜಾನೆ ತುಂಬಿಸುತ್ತಿದೆ. ಬಡವರು ಬಳಸುವ ವಸ್ತುಗಳಿಗೆ ತೆರಿಗೆ ಜಾಸ್ತಿ ಹಾಕಿದ್ದಾರೆ. ಶ್ರೀಮಂತರ ಮೇಲಿನ ಕಾರ್ಪೊರೇಟ್ ಟ್ಯಾಕ್ಸ್ ಮಾತ್ರ ಕಡಿಮೆ ಮಾಡಿದ್ದಾರೆ. ಕೇಂದ್ರದ ಈ ನೀತಿಗೆ ಜನರ ಮೌನವೇ ಕಾರಣವಾಗಿದೆ. ಆಡಳಿತ ನಡೆಸುವವರಿಗೆ ಜನರ ಮೇಲೆ ಕರುಣೆ ಇಲ್ಲದಾಗಿದೆ.

ಎಲ್ಲದಕ್ಕೂ ಟ್ಯಾಕ್ಸ್ ಹಾಕಿ ಆಯ್ತು. ಇನ್ನು ಶವ ಎತ್ತಿಕೊಂಡು ಹೋಗೋದಕ್ಕೂ ಟ್ಯಾಕ್ಸ್ ಹಾಕುತ್ತಾರೆಯೇ ಎಂದು ನೋಡಬೇಕು. ಎಂಟು ವರ್ಷಗಳಲ್ಲಿ ಜನರ ಮೇಲೆ ತೆರಿಗೆಯ ಹೊರೆ ವಿಧಿಸಿದ್ದು ಬಿಟ್ಟರೆ, ಜನರಿಗೆ ಉಪಯೋಗ ಆಗುವ ಯಾವುದಾದ್ರೂ ಯೋಜನೆ ತಂದಿದ್ದಾರೆಯೇ.. ಸಾಮಾನ್ಯ ಜನರ ಮೇಲೆ ಮತ್ತೆ ಮತ್ತೆ ಟ್ಯಾಕ್ಸ್ ಹಾಕುತ್ತಿದ್ದಾರೆ. ಸಾಮಾನ್ಯ ಜನರು ಚೆಕ್ ಬುಕ್ ತೆಗೆದುಕೊಂಡರೆ 18 ಶೇ. ಟ್ಯಾಕ್ಸ್. ಧಾರ್ಮಿಕ ಕೇಂದ್ರಗಳ ವ್ಯಾಪ್ತಿಯ ಒಂದು ಸಾವಿರ ರೂಪಾಯಿ ಒಳಗಿನ ಲಾಡ್ಜ್ ಗಳಿಗೆ 12 ಶೇ. ಟ್ಯಾಕ್ಸ್ ವಿಧಿಸುತ್ತಿದ್ದಾರೆ. ಸಾಮಾನ್ಯ ಜನರ ಮೇಲೆ ಟ್ಯಾಕ್ಸ್ ಹಾಕುವುದು, ಸಿರಿವಂತರ ಮೇಲಿನ ಟ್ಯಾಕ್ಸ್ ಕಡಿಮೆಗೊಳಿಸುವುದು. ಬಿಜೆಪಿ ಸರಕಾರದ ಯಾವ ಲಾಜಿಕ್ ಅನ್ನುವುದೇ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಿಥುನ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಂತೋಷ್ ಶೆಟ್ಟಿ ಸೇರಿದಂತೆ ಕಾಂಗ್ರೆಸ್ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.
GST on food items, Gabbar Singh Tax is becoming reality slams U T Khader in Mangalore. Congress leader Rahul Gandhi had hit out at the government over the rise in taxes on pre-packed food items and hotel stays, alleging that the prime minister's "Gabbar Singh Tax" is now taking the shape of "Grihasti Sarvnaash Tax" (household destruction tax).
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm